ಸುಂಟಿಕೊಪ್ಪ, ಏ. 2 : ಸುಂಟಿಕೊಪ್ಪ ವ್ಯಾಪ್ತಿಯ ಕೆಲವು ವಾರ್ಡ್ಗಳಲ್ಲಿನ ಚರಂಡಿಯಲ್ಲಿ ಕಲುಷಿತ ನೀರು ಸರಾಗವಾಗಿ ಹರಿಯದೆ ಚರಂಡಿಯಲ್ಲಿ ನಿಂತಿದೆ. ವಾತಾವರಣ ಗಬ್ಬೆದ್ದು ನಾರುತಿದ್ದು; ಕೊರೊನಾ ಸಾಂಕ್ರ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದ ಕಾರಣ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕದಿಂದ ಜೌಷಧಿ ಸಿಂಪಡಿಸುವ ಕಾರ್ಯ ಮಾಡಿತು.