ಸುಂಟಿಕೊಪ್ಪ, ಮಾ.31 : ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊರ ಜಿಲ್ಲೆಗಳಿಗೆ ಕೆಲಸಕ್ಕೆ ತೆರಳಿದ್ದ ಮಂದಿ ಗ್ರಾಮದಲ್ಲಿರುವ ಸ್ವಂತ ನಿವಾಸಕ್ಕೆ ಮರುಳುತ್ತಿದ್ದಾರೆ. ಸುತ್ತಮುತ್ತಲ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು ಊರಿನ ಆರೋಗ್ಯ ಸ್ವಾಸ್ಥ್ಯ ಕಾಪಾಡುವ ದಿಸೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯಿತಿ ಅಧಿಕಾರಿ ವರ್ಗ ಅಂತವರ ಮನೆಗಳಿಗೆ ತೆರಳಿ ಪರೀಕ್ಷಿಸಿ ನಿಗಾ ವಹಿಸುವಂತೆ ಪಂಚಾಯಿತಿ ಸದಸ್ಯರಾದ ಪಿ.ಎಂ.ಬಿಜು ಒತ್ತಾಯಿಸಿದ್ದಾರೆ.