ನಾಪೋಕ್ಲು, ಮಾ. 31: ಸಮೀಪದ ಎಮ್ಮೆಮಾಡು ಗ್ರಾಮದಲ್ಲಿ ಸೋಮವಾರ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಅಲ್ಲಲ್ಲಿ ಹಾನಿ ಸಂಭವಿಸಿದೆ. ಗಾಳಿ ಮಳೆಯಿಂದ ಮನೆಯ ಹಾಗೂ ಕೊಟ್ಟಿಗೆಯ ಶೀಟ್ಗಳು ಹಾರಿಹೋಗಿವೆ. ಗ್ರಾಮದ ನಿವಾಸಿ ಚಂಬಾರಂಡ ಮೂಸೆ ಎಂಬವರ ಹೊಸಮನೆಯ 14 ಸಿಮೆಂಟ್ ಶೀಟ್ ಗಳು ಹಾರಿಹೋಗಿ ನಷ್ಟ ಸಂಭವಿಸಿದೆ. ಎಂ.ಎಂ. ಅಬ್ದುಲ್ ಜಲೀಲ್ ಎಂಬವರ ದನದ ಕೊಟ್ಟಿಗೆಯ ಏಳು ಶೀಟ್ಗಳು ಹಾರಿ ಹಾನಿಯಾಗಿವೆ. ಸ್ಥಳಕ್ಕೆ ಆರ್.ಐ. ಶಿವಕುಮಾರ್, ಸಿಬ್ಬಂದಿ ಸೋಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.