ಸಿದ್ದಾಪುರ, ಮಾ. 31: ಕೊರೊನಾ ವೈರಸ್ ಹರಡದಂತೆ ಲಾಕ್ ಡೌನ್ ಮಾಡಿರುವ ಪರಿಣಾಮ ಸಿದ್ದಾಪುರ, ನೆಲ್ಲಿಹುದಿಕೇರಿ ಸೇರಿದಂತೆ ಸುತ್ತಮುತ್ತಲಿನ ಪಟ್ಟಣಗಳು ಸಂಪೂರ್ಣ ಸ್ತಬ್ಧವಾಗಿತ್ತು.
ಪತ್ರಿಕೆ ಹಾಗೂ ಹಾಲು ಖರೀದಿಸಲು ಜಿಲ್ಲಾಡಳಿತ ಸಮಯಾವಕಾಶ ಕಲ್ಪಿಸಿದ್ದರೂ ಪಟ್ಟಣಕ್ಕೆ ಸಾರ್ವಜನಿಕರು ಬಾರದೆ ಇಡೀ ಪಟ್ಟಣ ಬಿಕೋ ಎನ್ನುತ್ತಿತ್ತು. ಪೆಟ್ರೋಲ್ ಬಂಕ್, ಬ್ಯಾಂಕ್, ಅಂಚೆ ಕಚೇರಿ, ಮೆಡಿಕಲ್ ಅಂಗಡಿಗಳು ತೆರೆದಿದ್ದರೂ ಜನರು ಪಟ್ಟಣದತ್ತ ಮುಖ ಮಾಡಲೇ ಇಲ್ಲ.