ನಾಪೋಕ್ಲು, ಮಾ. 30: ಬೇತು ಗ್ರಾಮದ ಚೆರಿಯಪರಂಬುವಿನ ಕಾವೇರಿ ನದಿ ತಟದಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಗಂಡಸಿನ ಮೃತದೇಹವೊಂದು ಇಂದು ಸಂಜೆ ಪತ್ತೆಯಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲವು ಯುವಕರು ಮೀನಿಗೆ ಗಾಳ ಹಾಕಲು ತೆರಳಿದ ಸಂದರ್ಭ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಹೊಳೆಯ ದಡದಲ್ಲಿ ಬಿದಿರಿನ ಮೆಳೆಗಳ ನಡುವೆ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.