ಕೂಡಿಗೆ, ಮಾ. 30: ತೂರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದಲ್ಲಿ ಆಕಸ್ಮಿಕವಾಗಿ ಮರವೊಂದಕ್ಕೆ ಬೆಂಕಿ ತಗಲಿ ಉರಿಯುತ್ತಿದ್ದಾಗ ಅಗ್ನಿಶಾಮಕ ದಳ ಸ್ಥಳಕ್ಕೆ ಅಗಮಿಸಿ ನಂದಿಸುವಲ್ಲಿ ಯಶಸ್ವಿಯಾಯಿತು. ಚಿಕ್ಕಅಳುವಾರ ರೈತರೊಬ್ಬರು ತಮ್ಮ ಜಮೀನಿನ ಕಸವನ್ನು ಸುಡುವ ಸಂದರ್ಭ ಘಟನೆ ನಡೆಯಿತು. ನಂತರ ಗ್ರಾಮಸ್ಥರ ಸಹಕಾರದಿಂದ ಬೀಳುವ ಹಂತದಲ್ಲಿದ್ದ ಬೃಹತ್ ಮರವನ್ನು ಕಡಿಯಲಾಯಿತು.