ಗುಡ್ಡೆಹೊಸೂರು, ಮಾ. 30: ಊಟವಿಲ್ಲದಿದ್ದರೂ ಪರವಾಗಿಲ್ಲ ಆದರೆ ಮದ್ಯವಿಲ್ಲದೆ ಕೆಲವು ಮಂದಿಗೆ ಬದುಕಲು ಸಾಧ್ಯವಿಲ್ಲ. ಮೂರು ಹೊತ್ತು ಅನ್ನ ತಿನ್ನದಿದ್ದರೂ, ಕೆಲವರಿಗೆ ಮದ್ಯ ಬೇಕೆ ಬೇಕು. ಗುಡ್ಡೆಹೊಸೂರಿನ ಬಾರ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಜೆಗೌಡ ಎಂಬ ವ್ಯಕ್ತಿ ಇದೀಗ ಮದ್ಯವಿಲ್ಲದೆ ಬೀದಿಗೆ ಬಂದಿದ್ದಾರೆ. ಇದೇ ರೀತಿ ಕಣಿವೆಯ ಒಬ್ಬರು ಮತ್ತು ಕೂಡಿಗೆಯಲ್ಲಿ ಒಬ್ಬರು ಅಲೆದಾಡುತ್ತಿದ್ದಾರೆ. ಮತ್ತೊಂದು ಮಾಹಿತಿ ಪ್ರಕಾರ ಅಂಥವರು ಪೊಲೀಸರಿಗೆ ತಲೆನೋವಾಗಿ ಕಾಡುತ್ತಿದ್ದಾರೆ. ಕುಶಾಲನಗರದ ಗ್ರಾಮಾಂತರ ಠಾಣೆಗೆ ತೆರಳಿ ನಮಗೆ ಎಣ್ಣೆಕೊಡಿ ಎಂದು ಬೇಡುತ್ತಿದ್ದಾರೆ ಎಂದು ತಿಳಿದು ಬಂದಿದೆ. -ಗಣೇಶ್ ಕುಡೆಕಲ್