ಮಡಿಕೇರಿ, ಮಾ. 30; ಏಪ್ರ್ರಿಲ್ 14 ರವರೆಗೆ ಲಾಕ್‍ಡೌನ್ ಅನಿವಾರ್ಯ. ಹೀಗೆ ಮಾಡದಿದ್ದರೆ ದೇಶದ, ರಾಜ್ಯದ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಕೊಡಗಿನಲ್ಲಿಯೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ಈ ದಿಸೆಯಲ್ಲಿ ವಿಶೇಷ ಮುತುವರ್ಜಿ ವಹಿಸಿ ದುರಂತ ಸನ್ನಿವೇಶ ಒದಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ ಎಂಬದು ಬಹುತೇಕ ಜನರ ಅಭಿಪ್ರಾಯವಾಗಿದೆ.ಇನ್ನೊಂದೆಡೆ, ದೇಶದಲ್ಲಿ ಪೊಲೀಸರ ನಿಯಂತ್ರಣ ಕ್ರಮ ಸರಿಯಾಗಿದೆ ಎಂಬ ಮೆಚ್ಚುಗೆ ಮಾತುಗಳ ನಡುವೆ ಕೆಲವೊಂದೆಡೆ ಅಗತ್ಯ ಸೇವಾ ಸಿಬ್ಬಂದಿ ಮೇಲೆ ಲಾಠಿ ಪ್ರಹಾರದ ಕುರಿತು ಆಕ್ಷೇಪಗಳು ಕೇಳಿಬಂದಿವೆ. ಮೈಸೂರಿನಂತಹ ಪ್ರದೇಶದಲ್ಲಿ ಇದೀಗ ಕೇಂದ್ರ ರಿಸರ್ವ್ ಪೊಲೀಸರನ್ನು ಬಳಸಿಕೊಳ್ಳಲಾಗುತ್ತಿದೆ.ಈ ನಡುವೆ ಏಪ್ರಿಲ್ 14 ರ ಬಳಿಕ ಲಾಕ್‍ಡೌನ್ ಮುಂದುವರಿಸುವ ಸಾಧ್ಯತೆ ಕಡಿಮೆ ಎಂಬ ಕುರಿತು ಕೇಂದ್ರ ಸಂಸದೀಯ ಕಾರ್ಯದರ್ಶಿ ಮಾಹಿತಿಯಿತ್ತಿದ್ದಾರೆ. ಇನ್ನೊಂದೆಡೆÀ, ರಾಜ್ಯದಲ್ಲಿ ಜನತೆ ಇನ್ನೂ ಕೂಡ ಕಟ್ಟುನಿಟ್ಟಿನಲ್ಲಿ 15 ದಿನಗಳ ಕಾಲ ಲಾಕ್‍ಡೌನ್ ಪಾಲನೆ ಮಾಡಿ. ಆದರೆ ಇದನ್ನೂ ಮೀರಿ ಈಗ ರಾಜ್ಯದ ಕೆಲವೆಡೆ, ಅದೂ ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಕಂಡುಬಂದಿರುವಂತೆ ಅನವಶ್ಯಕ ತಿರುಗಾಡುವ ಪ್ರಯತ್ನವನ್ನು ಮುಂದುವರಿಸಿದರೆ ಲಾಕ್‍ಡೌನ್ ಪಕ್ರಿಯೆಯನ್ನು ಏಪ್ರಿಲ್ 14 ರ ನಂತರವೂ ಮುಂದುವರಿಸುವದು ಅನಿವಾರ್ಯವಾಗುತ್ತದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಎಚ್ಚರಿಸಿದ್ದಾರೆ.

ಹೀಗೆ ಇಂದಿನ ಈ ವಿದ್ಯಮಾನಗಳು ಸಾಮಾನ್ಯ ಜನತೆಗೆ ಕೇಂದ್ರದಿಂದ ಪ್ರ್ರಿಯ ಮತ್ತು ರಾಜ್ಯದಿಂದ ಅಪ್ರಿಯ ಸಂದೇಶಗಳು ರವಾನೆಯಾಗಿದೆ.

ಈ ನಡುವೆ ದೇಶದಾದ್ಯಂತ ವಲಸೆ ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ. ಆಡಳಿತಕಾರರು ಅವರ ರಕ್ಷಣೆಗೆ ಯೋಜನೆಗಳು,

(ಮೊದಲ ಪುಟದಿಂದ) ಅನುದಾನಗಳನ್ನು ಘೋಷಿಸಿರುವದು ಒಂದೆಡೆÀಯಾದರೆ, ನೈಜ ಸ್ಥಿತಿ ಗಮನಿಸಿದಾಗ ಅನೇಕ ಕಾರ್ಮಿಕರ ಭವಿಷ್ಯ ಶೋಚನೀಯವಾಗಿದೆ. ತಿನ್ನಲು ಕೂಳಿಲ್ಲ, ಮಲಗಲು ಸ್ಥಳವಿಲ್ಲ, ಕುಟುಂಬವನ್ನು ಉಳಿಸಿಕೊಳ್ಳಲು ಹಣವಿಲ್ಲದ ದಯನೀಯ ಸ್ಥಿತಿ ಮಾಧ್ಯಮಗಳ ಪ್ರತ್ಯಕ್ಷ ವರದಿಯಲ್ಲ್ಲಿ ಕಂಡುಬಂದ ಶೋಚನೀಯ ವಿದ್ಯಮಾನಗಳಾಗಿವೆ. ಕೇಂದ್ರ ಹಾಗೂ ಆಯಾ ರಾಜ್ಯ ಸರಕಾರಗಳು, ಸೇವಾ ಸಂಘÀ ಸಂಸ್ಥೆಗಳು, ದೇಶದ ಶ್ರೀಮಂತ ವ್ಯಕ್ತಿಗಳು, ಉದ್ಯಮಿಗಳು ಇಂತಹ ಸಂತ್ರಸ್ತರ ಜೀವವುಳಿಸಿ ಇವರುಗಳ ಕುಟುಂಬಗಳನ್ನು ಸಂಕಷ್ಟದಿಂದ ಪಾರು ಮಾಡಬೇಕಿದೆ. ಬೀದಿ ಬದಿಯಲ್ಲಿ ಅನಾಥರಂತೆ ಕಾಲ ಕಳೆಯುತ್ತಿರುವ ಈ ಮಂದಿಯನ್ನು ಗುರುತಿಸಿ ತಕ್ಷಣದಿಂದಲೇ ಸಮರೋಪಾದಿ ಸಂರಕ್ಷಿಸಬೇಕಿದೆ. ವಿಮರ್ಶಾ ವರದಿ-“ಚಕ್ರವರ್ತಿ’’