ಮಡಿಕೇರಿ, ಮಾ. 28: ಕೊರೊನಾ ತಡೆಗಟ್ಟಲು ಜಿಲ್ಲಾಡಳಿತ ಕೊಡಗನ್ನು ಲಾಕ್‍ಡೌನ್ ಮಾಡಿದೆ. ಕೊರೊನಾ ವೈರಸ್ ತಡೆಯಲು ಸರಕಾರದ ಎಲ್ಲ ಕ್ರಮಗಳನ್ನು ಬೆಂಬಲಿಸುವುದು ನಮ್ಮ ಕರ್ತವ್ಯವಾಗಿದೆ. ನಿತ್ಯ ದುಡಿದು ಹೊಟ್ಟೆ ತುಂಬಿಸಿಕೊಳ್ಳುವ ಶ್ರಮಜೀವಿಗಳ ಮೇಲೆ ಲಾಕ್‍ಡೌನ್ ಮಾರಣಾಂತಿಕ ಪರಿಣಾಮ ಬೀರುತ್ತಿದೆ.

ಈ ನಿಟ್ಟಿನಲ್ಲಿ ಸೇವಾಭಾರತಿ ಮಡಿಕೇರಿ ಘಟಕದ ವತಿಯಿಂದ ಅಗತ್ಯವಿರುವವರಿಗೆ ಹಸಿವು ನೀಗಿಸುವ ಯೋಜನೆ ರೂಪಿಸಲಾಗಿದೆ. ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ತೊಂದರೆ ಇರುವವರು, ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಅಗತ್ಯವಿರುವವರು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ, ತಮ್ಮ ವಿವರವನ್ನು ಕೊಟ್ಟು ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಆರಂಭದಲ್ಲಿ ಈ ಯೋಜನೆ ಮಡಿಕೇರಿ ನಗರಕ್ಕೆ ಸೀಮಿತವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಚಂದ್ರ ಉಡೋತ್ 9663725200, ಮಹೇಶ್ ಕುಮಾರ್ 9480731020, ಕುಮಾರ್ 9845178711, ಅರುಣ್ ಸ್ಟೋರ್ಸ್ 9742703223 ಸಂಪರ್ಕಿಸಬಹುದಾಗಿದೆ.