ನಾಪೋಕ್ಲು, ಮಾ. 28: ಕಾಫಿ ತೋಟದ ನಡುವೆ ಇದ್ದ ಪಾಳು ಬಾವಿಗೆ ಬಿದ್ದ ಗೂಳಿಯನ್ನು ಗ್ರಾಮಸ್ಥರು ರಕ್ಷಣೆ ಮಾಡಿದ ಘಟನೆ ನಾಪೋಕ್ಲುವಿನಲ್ಲಿ ನಡೆದಿದೆ. ಇಲ್ಲಿ ನಿಡುಮಂಡ ಕೃತಿ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಪಾಳುಬಾವಿಯೊಂದಿದ್ದು ನೀರಿಲ್ಲದ ಅಪಾಯಕಾರಿ ಬಾವಿಯಲ್ಲಿ ಸುಮಾರು 20 ಅಡಿ ಆಳಕ್ಕೆ ಗುರುವಾರ ರಾತ್ರಿ ಗೂಳಿಯೊಂದು ಬಿದ್ದಿದ್ದು, ಮೇಲಕ್ಕೆ ಬರಲು ಪರದಾಡುತ್ತಿತ್ತು. ಸ್ಥಳೀಯರಾದ ಸುಗು, ಚೇತು, ಗಣಪತಿ, ತೇಜು, ಮಣಿ ಇವರುಗಳ ಸಹಾಯದಿಂದ ಈ ಗೂಳಿಯನ್ನು ಹರ ಸಾಹಸ ಮಾಡಿ ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.