ಕೂಡಿಗೆ, ಮಾ28 ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು - ಯಲಕನೂರು ರಸ್ತೆಯನ್ನು ಸ್ಥಳೀಯ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಕಂಬಗಳನ್ನು ನೆಟ್ಟು ಬಂದ್ ಮಾಡಿದ್ದಾರೆ.
ಸೋಮವಾರಪೇಟೆ, ಕುಶಾಲನಗರ ರಸ್ತೆ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆಯಲ್ಲಿ ಹೆಚ್ಚು ಕಾರು ಮತ್ತು ಬೈಕ್ ಸವಾರರು ಮನಬಂದಂತೆ ಸೀಗೆಹೊಸೂರು - ಯಲಕನೂರು ಮಾರ್ಗವಾಗಿ ಅಬ್ಬೂರುಕಟ್ಟೆ ಬಾಣಾವರ ಕಡೆಗೆ ಹೋಗುತ್ತಿರುವುದರಿಂದ ಅನವಶ್ಯಕವಾಗಿ ತಿರುಗಾಡುವವರನ್ನು ತಡೆಯಲು ಗ್ರಾಮಸ್ಥರು ಸ್ವತಃ ಅರಣ್ಯ ಇಲಾಖೆಯ ಮಾದರಿಯಲ್ಲಿ ಗೇಟ್ ನಿರ್ಮಾಣ ಮಾಡಿದ್ದಾರೆ. ತುರ್ತು ವಾಹನ ಹಾಲಿನ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿರುತ್ತಾರೆ. ಗೇಟ್ ನಲ್ಲಿ ಕೊರೊನಾ ಅಪಾಯ ಎಂಬ ಸೂಚನ ಫಲಕ ಅಳವಡಿಸಿದ್ದಾರೆ. ಇದೇ ಮಾದರಿಯಲ್ಲಿ ಬ್ಯಾಡಗೊಟ್ಟ- ಸೀಗೆಹೊಸೂರು ರಸ್ತೆಯಲ್ಲಿಯೂ ಇನ್ನೊಂದು ಗೇಟ್ ನಿರ್ಮಿಸಿದ್ದಾರೆ.