ಸುಂಟಿಕೊಪ್ಪ, ಮಾ.28: ತರಕಾರಿಗಳನ್ನು ದುಬಾರಿ ಬೆಲೆಗೆ ಮಾರಾಟ ದೂರು ಬಂದ ಮೇರೆಗೆ ಪಿಡಿಓ ವೇಣುಗೋಪಾಲ್ ಸಿಬ್ಬಂದಿ ತೆರಳಿ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಹೃದಯ ಭಾಗದಲ್ಲಿ ತರಕಾರಿ ಅಂಗಡಿಯೊಂದರಲ್ಲಿ ದುಬಾರಿ ಬೆಲೆಗೆ ತರಕಾರಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಗ್ರಾಹಕರು ಗ್ರಾ.ಪಂ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಅವರ ಬಳಿ ದೂರಿ ಕೊಂಡ ಮೇರೆ ಮಾಲೀಕರನ್ನು ಕರೆಸಿ ವಿಚಾರಿಸಿ, ತರಕಾರಿಗಳನ್ನು ದುಬಾರಿ ಮಾರಾಟ ಮಾಡದಂತೆ ಸೂಚಿಸಿದರು.