ಕೂಡಿಗೆ, ಮಾ. 29: ಕೊರೊನಾ ಹಿನ್ನೆಲೆ ಕೊಡಗಿನ ಗಡಿ ಶಿರಂಗಾಲ ಗೇಟ್ ಬಂದ್ ಅದ ಹಿನ್ನೆಲೆ ಶಿರಂಗಾಲ ಮತ್ತು ಹಾಸನ ಜಿಲ್ಲೆಯ ಸಂಪರ್ಕಕ್ಕೆ ಜನತೆ ಹಾರಂಗಿ ಮುಖ್ಯ ನಾಲೆ ರಸ್ತೆಯನ್ನು ಅವಲಂಭಿಸಿದ್ದರು.
ಆದರೆ ಈ ಭಾಗದಲ್ಲಿ ವಾಹನಗಳ ಹಾಗೂ ಜನರ ಓಡಾಟ ಹೆಚ್ಚಾದ ಪರಿಣಾಮ ತೊಂದರೆ ಆಗುವುದನ್ನು ಅರಿತು ನಾಲೆಯ ದಾರಿಯಲ್ಲಿ ಜನರು ಹೋಗದಂತೆ ದಾರಿಗೆ ಅಡ್ಡಲಾಗಿ ಗುಂಡಿಗಳನ್ನು ತೆಗೆಯಲಾಗಿದೆ. ಈ ಸಂದರ್ಭ ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್ ಕುಮಾರ್, ಠಾಣಾಧಿಕಾರಿ ನಂದೀಶ್ ಸೇರಿದಂತೆ ಸಿಬ್ಬಂದಿಗಳು ಇದ್ದರು.