ಆತ್ಮೀಯ ಮಿತ್ರರೆ, ಇಂದು ನಾವು ನಾವೆಲ್ ಕೋವಿಡ್-19 ಎಂಬ ಮಾರಕ ರೋಗದ ಕಪಿಮುಷ್ಠಿಯಲ್ಲಿ ಸಿಲುಕಿ ಕೊಂಡಿದ್ದೇವೆ. ಇದು ಕೊರೊನಾ ವೈರಾಣುವಿನಿಂದ ಬರುವ ಸಾಂಕ್ರಾಮಿಕ ರೋಗವಾಗಿದ್ದು, 2019ರ ನವೆಂಬರ್‍ನಲ್ಲಿ ನೆರೆಯ ದೇಶ ಚೀನಾದಲ್ಲಿ ಮೊದಲು ಕಾಣಿಸಿಕೊಂಡಿತ್ತು. ‘ವುಹಾನ್’ ಎಂಬ ಸಣ್ಣ ನಗರದ ಜೀವಂತ ಪ್ರಾಣಿಗಳ ಮಾರಾಟ ಮಾಡುವ ಮಾರುಕಟ್ಟೆಯಲ್ಲಿ ಪ್ರಾರಂಭವಾದ ಸೋಂಕು ಅತಿ ಬೇಗವಾಗಿ ಇಡೀ ಚೀನಾವನ್ನೇ ಆಕ್ರಮಿಸಿತು.ನಮ್ಮ ಭರತ ಖಂಡಕ್ಕೆ ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. 30 ಜನವರಿ 2020ರಲ್ಲಿ ಕೇರಳದ ತ್ರಿಶೂರ್‍ನಲ್ಲಿ ಚೀನಾದಿಂದ ವಾಪಸ್ಸಾದ ವಿದ್ಯಾರ್ಥಿಯೊಬ್ಬನಲ್ಲಿ ಈ ವೈರಾಣುವಿನ ಸೋಂಕು ಮೊದಲು ಪತ್ತೆಯಾಯಿತು. ಈಗ ಜಗತ್ತಿನಾದ್ಯಂತ ತೀವ್ರಗತಿಯಲ್ಲಿ ಪಸರಿಸುತ್ತಿದ್ದು, ವಿಶ್ವಸಂಸ್ಥೆಯು ಇದನ್ನು ಸಾಂಕ್ರಾಮಿಕ ರೋಗ (Pಚಿಟಿಜemiಛಿ ಆiseಚಿse) ಎಂದು ಘೋಷಣೆ ಮಾಡಿರುತ್ತದೆ. ಕೊರೊನಾ ರೋಗದ ಲಕ್ಷಣಗಳು ಕೊರೊನಾ ವೈರಾಣು ದೇಹಕ್ಕೆ ಪ್ರವೇಶ ವಾದಾಗಿನಿಂದ ರೋಗ ಲಕ್ಷಣಗಳು ಕಾಣಿಸಿಕೊಳ್ಳು ವವರೆಗೆ ‘0’ ಇಂದ ‘14’ ದಿನಗಳು ಬೇಕಾಗ ಬಹುದು. ಅಂದಾಜು 5 ದಿನಗಳಲ್ಲಿ ಕೊರೊನಾ ವೈರಾಣು ದೇಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದು ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೊದಲು ಸಾಮಾನ್ಯ ಫ್ಲೂ ಜ್ವರದಂತೆ, ಶೀತ, ಕೆಮ್ಮು, ಜ್ವರ, ದೇಹಾಲಸ್ಯ, ಗಂಟಲು ಬೇನೆ, ಕೈಕಾಲು ನೋವಿನಂತೆ ಪ್ರಾರಂಭವಾಗುತ್ತದೆ. ಕೆಲವರಿಗೆ ಹೊಟ್ಟೆನೋವು, ಬೇಧಿ, ವಾಂತಿ ಕೂಡ ಕಾಣಬಹುದು. ಗಂಟಲಿನಿಂದ ಶ್ವಾಸಕೋಶಕ್ಕೆ ತಲುಪಿದ ನಂತರ ಉಸಿರಾಟದ ತೊಂದರೆ, ನಿಮೋನಿಯಾ ತರಹದ ರೋಗವಾಗಿ ಪರಿವರ್ತಿತಗೊಳ್ಳುತ್ತದೆ. ಶ್ವಾಸಕೋಶವನ್ನು ಅಣು ಅಣುವಾಗಿ ನಾಶಪಡಿಸಿ ತೀವ್ರ ಉಸಿರಾಟದ ತೊಂದರೆ (ಂಡಿಜs -ಂಛಿuಣe ಖesಠಿiಡಿಚಿಣoಡಿಥಿ ಆisಣಡಿess Sಥಿಟಿಜಡಿome) ಆಗಿ ಮನುಷ್ಯನಿಗೆ ಉಸಿರಾಟದ ಯಾಂತ್ರಿಕ ಸಹಾಯಕ (ಒeಛಿhಚಿಟಿiಛಿಚಿಟ ಗಿeಟಿಣiಟಚಿಣioಟಿ) ಬೇಕಾಗುವ ಸ್ಥಿತಿ ತಲುಪುತ್ತದೆ. ಬೇರೆ ಅಂಗಾಂಗಳಿಗೆ ಸೋಂಕು ಹಬ್ಬಿದಾಗ ಅಂಗಗಳ ವೈಫಲ್ಯವಾಗಿ (ಒoಜs-ಒuಟಣi-ಔಡಿgಚಿಟಿ ಆಥಿsಜಿuಟಿಛಿಣioಟಿ)ಗೆ ತಲುಪುತ್ತದೆ. ಈ ಪರಿಸ್ಥಿತಿಯಲ್ಲಿ ಔಷಧಗಳು ತಮ್ಮ ಪ್ರಭಾವವನ್ನು ಕಳೆದುಕೊಳ್ಳುತ್ತವೆ. ಲಿವರ್, ಕಿಡ್ನಿ, ಹೃದಯ ಇವುಗಳ ವೈಫಲ್ಯವಾದಾಗ ಸಾವು ಹತ್ತಿರವಾಗಿ ರೋಗಿಯನ್ನು ಕಳೆದುಕೊಳ್ಳುತ್ತೇವೆ.
ಭಾರತ ಯಾವ ಹಂತದಲ್ಲಿದೆ?: ತಜ್ಞರು ಈ ರೋಗವನ್ನು ಒಟ್ಟು 4 ಹಂತಗಳಲ್ಲಿ ವಿಂಗಡಿಸಿದ್ದಾರೆ.
ಮೊದಲ ಹಂತ: ವಿದೇಶ (ಚೀನ ಮತ್ತಿತರ ಸೋಂಕಿತ ದೇಶ)ದಿಂದ ಬಂದ ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಳ್ಳುವುದು. (ವಿದೇಶದಿಂದ ಬಂದ 14 ದಿನಗಳಲ್ಲಿ)
ಎರಡನೇ ಹಂತ: ವಿದೇಶದಿಂದ ಬಂದ ಸೋಂಕಿತರೊಡನೆ ನಿಕಟ ಸಂಪರ್ಕದಲ್ಲಿರುವ ಮನೆ ಮಂದಿ ಹಾಗೂ ಅವರ ಶುಶ್ರೂಷೆ ಮಾಡಿದ ವ್ಯಕ್ತಿಗಳಲ್ಲಿ 14 ದಿನಗಳ ಒಳಗೆ ರೋಗ ಲಕ್ಷಣಗಳು ಕಾಣಿಸಿಕೊಂಡು ಅವರಲ್ಲಿ ಸೋಂಕು ಪತ್ತೆಯಾದಾಗ.
ಮೂರನೇ ಹಂತ: ವಿದೇಶಕ್ಕೆ ಹೋಗಿ ಬಂದವರ ಅಥವಾ ಅವರ ನಿಕಟವರ್ತಿಗಳೊಂದಿಗೆ ಯಾವುದೇ ಸಂಪರ್ಕ ಇಲ್ಲದೇ ಇರುವವರಲ್ಲಿ ಸೋಂಕು ಕಾಣಿಸಿಕೊಂಡಾಗ.
ನಾಲ್ಕನೇ ಹಂತ: ಮೂರನೇ ಹಂತದಲ್ಲಿರುವ ವ್ಯಕ್ತಿಗಳಿಂದ ಸಮುದಾಯ ಸಮೂಹಕ್ಕೆ ವ್ಯಾಪಕವಾಗಿ ರೋಗ ಹರಡಿದಾಗ ಮತ್ತು ರೋಗ ಲಕ್ಷಣಗಳು ತೀವ್ರವಾಗಿ ಉಲ್ಬಣಿಸುವಾಗ (ಂಡಿಜs &amdiv; ಅomಠಿಟiಛಿಚಿಣioಟಿs)
ಮೊನ್ನೆ ಮೊನ್ನೆಯವರೆಗೆ ಎರಡನೇ ಹಂತದಲ್ಲಿಯೇ ಇದ್ದೇವೆ ಎಂಬ ನಂಬಿಕೆಯಲ್ಲಿದ್ದ ನಮಗೆ, ನಂಜನಗೂಡಿನಲ್ಲಿನ ವ್ಯಕ್ತಿ ಅಚಿse ಓo. 52 ಹಾಗೂ ಬಂಟ್ವಾಳದ 10 ತಿಂಗಳ ಮಗುವಿಗೆ ಸೋಂಕು ಇರುವುದು ದೃಢಪಟ್ಟಾಗ ಆತಂಕ ಸೃಷ್ಟಿಯಾಯಿತು. ಇವರಿಬ್ಬರೂ ಯಾವುದೇ ವಿದೇಶದಿಂದ ಮರಳಿದವರ ಸಂಪರ್ಕವಾಗಲೀ ಅಥವಾ ಅಂತಹವರ ಸಂಬಂಧಿಕರ ಹಾಗೂ ಶುಶ್ರೂಷಕರ ಸಂಪರ್ಕವಾಗಲೀ ಹೊಂದಿರಲಿಲ್ಲ. ‘ಭಾರತ ಮೂರನೇ ಹಂತಕ್ಕೆ ಕಾಲಿಟ್ಟಿದೆ’ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟ ಈ ವಿಷಯ ನಮ್ಮನ್ನು ಎಚ್ಚರಿಸಿದೆ.
(ಮೊದಲ ಪುಟದಿಂದ)
ಈ ಹಂತದಲ್ಲಿಯೂ ನಾವು ನಿರ್ಲಕ್ಷ್ಯದಿಂದ ವರ್ತಿಸಿದರೆ, ನಮ್ಮ ನೆರೆಹೊರೆಯಲ್ಲಿ ಮಾರಣ ಹೋಮವಾಗುವುದನ್ನು ನಾವು ನಿರೀಕ್ಷಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನಾವು ನಮ್ಮ ಸುರಕ್ಷತೆಯ ಜೊತೆಗೆ ನಮ್ಮ ದೇಶದ ಪ್ರಜ್ಞಾವಂತ ನಾಗರಿಕರಾಗಿ ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ.
ನಮ್ಮ ಜವಾಬ್ದಾರಿ ಏನು?
ವಿದೇಶದಿಂದ ಮರಳಿ ಬಂದವರು: ಸೋಂಕಿತ ದೇಶಗಳಿಂದ ಮರಳಿ ಬಂದವರು 14 ದಿನಗಳ ಕಾಲ ಮನೆಯಲ್ಲಿ ಅಥವಾ ಏರ್‍ಪೋರ್ಟ್‍ನಲ್ಲಿಯೇ ಕ್ವಾರಂಟೈನ್‍ನಲ್ಲಿ ಇರಬೇಕು. ಅವರೆಲ್ಲರಿಗೂ ಸೋಂಕಿನ ಪರೀಕ್ಷೆ ಆಗಲೇಬೇಕು. ಅವರು ಬಂದ ಕೂಡಲೆ ಬಂಧುಗಳೊಂದಿಗೆ ನಿಕಟ ಸಂಪರ್ಕ ಹೊಂದುವುದು, ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದು, ಕೈಕುಲುಕುವುದು, ಬೇರೆಯವರ ಜೊತೆ ಊಟ ಮಾಡುವುದು, ಮಕ್ಕಳನ್ನು ಮುದ್ದಾಡುವುದು ಇದೆಲ್ಲವನ್ನು ಮಾಡಬಾರದು. ಒಳ್ಳೆಯ ಗಾಳಿ ಬೆಳಕಿರುವ ಕೋಣೆಯಲ್ಲಿರಬೇಕು. ಮುಖಕ್ಕೆ ಮಾಸ್ಕ್ (ಒಚಿsಞ-ಓ95 ಅಥವಾ ಮೂರು ಪದರದ ಒಚಿsಞ) ಧರಿಸಬೇಕು. ಕೆಮ್ಮು, ಸೀನು ಬಂದಾಗ ಬಟ್ಟೆ ಅಥವಾ ಟಿಶ್ಸು ಪೇಪರ್‍ನಿಂದ ಮುಖ ಮುಚ್ಚಿ ಬಳಕೆಯಾದ ಮೇಲೆ ಮುಚ್ಚಳವಿರುವ ಕಸದ ಡಬ್ಬಿಗೆ ಹಾಕಬೇಕು. ಬೇರೆಯೇ ತಟ್ಟೆ, ಲೋಟವನ್ನು ಬಳಸಬೇಕು. ಕೈಯನ್ನು ಮದ್ಯದ ಅಂಶವುಳ್ಳ ಶುದ್ಧೀಕರಣ ದ್ರವಸಾಬೂನು ಅಥವಾ (ಂಟಛಿohಚಿಟ bಚಿseಜ Sಚಿಟಿiಣiseಡಿ)ನಿಂದ ಶುಚಿಗೊಳಿಸಬೇಕು.
ವಿದೇಶದಿಂದ ಮರಳಿದವರ ನಿಕಟವರ್ತಿಗಳು
ವಿದೇಶದಿಂದ ಹಿಂತಿರುಗಿದವರ ಗೃಹ ದಿಗ್ಬಂಧನ ಕ್ವಾರಂಟೈನ್ ಸಮಯದಲ್ಲಿ ಅವರನ್ನು ನೋಡಿಕೊಳ್ಳಲು ಕೇವಲ ಒಬ್ಬ ಸಂಬಂಧಿಯನ್ನು ನೇಮಿಸಬೇಕು. ಅವರು ಯಾವಾಗಲು ಮಾಸ್ಕ್ ಮತ್ತು ಕೈಚೀಲ ಧರಿಸಬೇಕು. ಸೋಂಕಿತರ ತಟ್ಟೆ, ಲೋಟ ಅಥವಾ ಬಟ್ಟೆಗಳನ್ನು ಶುಚಿಗೊಳಿಸಿ ತಮ್ಮ ಕೈಗಳನ್ನು ಕನಿಷ್ಟ 20 ಸೆಕೆಂಡ್‍ಗಳು ಸಾಬೂನಿನಲ್ಲಿ ಚೆನ್ನಾಗಿ ತೊಳೆಯಬೇಕು. ಪದೇ ಪದೇ ತಮ್ಮ ಕಣ್ಣು, ಮೂಗು, ಬಾಯಿಗಳನ್ನು ಮುಟ್ಟಿಕೊಳ್ಳಬಾರದು. ಸೋಂಕಿತರು ಉಪಯೋಗಿಸಿದ ಬಟ್ಟೆ, ಕಂಬಳಿ, ಹೊದಿಕೆಗಳನ್ನು ಬೇರೆಯೇ ಒಗೆಯಬೇಕು. ಅವರು ಉಪಯೋಗಿಸಿದ (ಮುಟ್ಟಿದ) ವಸ್ತುಗಳನ್ನು ಮುಟ್ಟಿದಾಗಲೆಲ್ಲ ಕೈತೊಳೆಯಬೇಕು. ಒಂದೇ ಕೋಣೆಯಲ್ಲಿರಬೇಕಾದ ಪರಿಸ್ಥಿತಿ ಬಂದರೆ ಕನಿಷ್ಟ 1 ಮೀಟರ್ ಅಥವಾ ಮೂರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. 14 ದಿನಗಳಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣ ಕೋವಿಡ್-19 ಸೋಂಕಿನ ಪರೀಕ್ಷೆಗೆ ಒಳಪಡಿಸಬೇಕು.
ಸೋಂಕಿಲ್ಲದ ಸಾಮಾನ್ಯ ಜನರು
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸೂಚನೆ ನೀಡಿರುವಂತೆ ತಮ್ಮ ತಮ್ಮ ಮನೆಗಳಲ್ಲಿಯೇ ಉಳಿಯಬೇಕು. ಎಲ್ಲಿಯೂ ಗುಂಪು ಸೇರಬಾರದು. ಅಗತ್ಯ ವಸ್ತುಗಳನ್ನು ತರುವಾಗ ಜಿಲ್ಲಾಡಳಿತ ನಿಗದಿಪಡಿಸಿದ ಸಮಯದಲ್ಲಿ ಹೊರಬಂದು ಪರಸ್ಪರ ಒಂದು ಮೀಟರ್ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ವಸ್ತುಗಳನ್ನು ಪಡೆದು ಮನೆ ಸೇರಬೇಕು. ಕಾರಣವಿಲ್ಲದೆ ಮಕ್ಕಕಳನ್ನು, ವೃದ್ಧರನ್ನು ಹೊರಕ್ಕೆ ಬರುವುದನ್ನು ತಡೆಯಬೇಕು. ಗೃಹ ದಿಗ್ಬಂಧನದಲ್ಲಿರುವ ವ್ಯಕ್ತಿ ಅಥವಾ ಸೋಂಕಿತರ ಒಡನೆ ಸಂಪರ್ಕಕ್ಕೆ ಬಂದರೆ ಕೂಡಲೇ ಆರೋಗ್ಯ ಅಧಿಕಾರಿಗಳಿಗೆ ತಾವಾಗಿಯೇ ತಿಳಿಸಬೇಕು ಹಾಗೂ ಸೋಂಕಿನ ಪರೀಕ್ಷೆಗೆ ಒಳಪಡಿಸಬೇಕು. ಹೊರಗಿನಿಂದ ತಂದ ಪ್ರತಿಯೊಂದು ವಸ್ತುವನ್ನು ಶುಚಿಗೊಳಿಸಬೇಕು ಹಾಗೂ ಅದನ್ನು ಮುಟ್ಟಿದ ನಂತರ ಇಪ್ಪತ್ತು ಸೆಕೆಂಡ್‍ಗಳವರೆಗೆ ಸಾಬೂನಿನಿಂದ ಕೈತೊಳೆಯಬೇಕು.
ಜನ ಸೇರುವ ಮಳಿಗೆಗಳಿಗೆ ಹೋಗುವಾಗ ಮುಖಕ್ಕೆ ಮಾಸ್ಕ್ ಅಥವಾ ಬಟ್ಟೆ ಧರಿಸಿ ಹೋಗಬೇಕು. ಕೆಮ್ಮು, ಜ್ವರ, ಶೀತ ಕಾಣಿಸಿಕೊಂಡಾಗ ನಿರ್ಲಕ್ಷಿಸದೇ ವೈದ್ಯರನ್ನು ಕಾಣಬೇಕು.
ಸೋಂಕಿತರನ್ನು ಶುಶ್ರೂಷೆ ಮಾಡುತ್ತಿರುವ ವೈದ್ಯರು ಹಾಗೂ ಆರೋಗ್ಯ ಸೇವೆಯಲ್ಲಿರುವ ನರ್ಸ್ ಹಾಗೂ ತಜ್ಞರುಗಳು
ಕೋವಿಡ್-19 ಸೋಂಕಿತರ ಶುಶ್ರೂಷೆಯಲ್ಲಿ ಭಾಗವಹಿಸುವ ಎಲ್ಲಾ ವೈದ್ಯರುಗಳು ಹಾಗೂ ನರ್ಸ್‍ಗಳು ಎನ್-95 ಮಾಸ್ಕ್, ಕೈಚೀಲಗಳು, ಕನ್ನಡಕ, ಗೌನ್‍ಗಳು, ಕಾಲು ಮುಚ್ಚಲ್ಪಟ್ಟ ಪಾದರಕ್ಷೆಗಳು ರಕ್ಷಾ ಉಪಕರಣ (Peಡಿsoಟಿಚಿಟ Pಡಿoಣeಛಿಣive ಇquiಠಿmeಟಿಣ Pಠಿe) ಗಳನ್ನು ಧರಿಸಲೇಬೇಕು. ಸೋಂಕಿತರ ಪರೀಕ್ಷೆ ನಡೆಸಿದ ನಂತರ ಇಪ್ಪತ್ತು ಸೆಕೆಂಡ್‍ಗಳಲ್ಲಿ ಕೈತೊಳೆಯಬೇಕು. ಕಣ್ಣು, ಮೂಗು, ಬಾಯಿಯನ್ನು ಮುಟ್ಟಿಕೊಳ್ಳಬಾರದು. ಉಪಯೋಗಿಸಿದ ನಂತರ Pಠಿe ಗಳನ್ನು ನಿಗದಿಪಡಿಸಿದ ಕೊಠಡಿಯಲ್ಲಿಯೇ ಕಳಚಿ ನಂತರ ಕೈತೊಳೆದು ಹೊರಬರಬೇಕು. ರೋಗಿಯನ್ನು ನೋಡಿಕೊಳ್ಳುವ ಸಮಯದಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ಪರೀಕ್ಷೆಗೆ ಒಳಗಾಗಬೇಕು ಹಾಗೂ ತಾವೂ ಕ್ವಾರಂಟೈನ್‍ನಲ್ಲಿ ಇರಬೇಕು. ಸೋಂಕಿತರ ಎಂಜಲು, ಕಫ, ರಕ್ತ, ಮೂತ್ರಗಳ ಪರೀಕ್ಷೆಗೆ ಸಂಗ್ರಹವಾಗುವ ಮಾದರಿಗಳನ್ನು ಮುಟ್ಟುವ ತಂತ್ರಜ್ಞರು ಕೂಡ ಮಾಸ್ಕ್, ಕೈ ಚೀಲಗಳು, ಕನ್ನಡಕಗಳನ್ನು ಧರಿಸಲೇಬೇಕು. ರಕ್ತ ಅಥವಾ ಎಂಜಲು ಸೋರುವಿಕೆ ಆಗಿದ್ದಲ್ಲಿ ಕೈ ತೊಳೆಯಬೇಕು ಹಾಗೂ ರೋಗ ಲಕ್ಷಣಗಳು ಕಂಡಲ್ಲಿ ಪರೀಕ್ಷೆಗೆ ಒಳಗಾಗಬೇಕು.
ಆಡಳಿತಾಧಿಕಾರಿಗಳ ಕರ್ತವ್ಯ
ಸಾಮಾನ್ಯ ಜನರ ದಿನನಿತ್ಯದ ಅಗತ್ಯಗಳಿಗಾಗಿ ಹೊರಬಂದು ಗುಂಪು ಸೇರದಂತೆ ನೋಡಿಕೊಳ್ಳಬೇಕು. ಅಗತ್ಯ ವಸ್ತುಗಳು ನಿರಾಯಾಸವಾಗಿ ಮನೆಗಳಿಗೆ ತಲುಪುವ ವ್ಯವಸ್ಥೆ ಮಾಡಬೇಕು. ಪ್ರತಿಯೊಂದು ಗ್ರಾಮ, ಹೋಬಳಿ, ತಾಲೂಕಿನಲ್ಲಿರುವ ನಾಗರಿಕರಿಗೆ ಧ್ವನಿವರ್ಧಕಗಳ ಮೂಲಕ ರೋಗದ ಬಗ್ಗೆ ಅರಿವು ಮೂಡಿಸಬೇಕು. ಸೋಂಕಿತ ವ್ಯಕ್ತಿಗಳ ಸಂಪರ್ಕಕ್ಕೆ ಬರುವ ವೈದ್ಯರು, ನರ್ಸ್‍ಗಳು ಹಾಗೂ ತಂತ್ರಜ್ಞರಿಗೆ ಸರಿಯಾದ Pಠಿeಗಳನ್ನು (Peಡಿsoಟಿಚಿಟ Pಡಿoಣeಛಿಣive ಇquiಠಿmeಟಿಣ) ಪೂರೈಸಬೇಕು.
ಸಾಮಾನ್ಯ ಜನರಲ್ಲಿ ಸಾಮಾಜಿಕ ಅಂತರ ಹಾಗೂ ವೈಯಕ್ತಿಕ ಶುಚಿತ್ವದ ಬಗ್ಗೆ ಮಾಧ್ಯಮಗಳ ಮೂಲಕ ಅರಿವು ಮೂಡಿಸಬೇಕು. ಕೊರೊನಾ ಸೋಂಕಿತರನ್ನು ಪ್ರತ್ಯೇಕಿಸಿ ನೋಡಿಕೊಳ್ಳಲು ಹಾಗೂ ಔಷಧೋಪಚಾರ ಮಾಡಲು ಅನುಕೂಲವಾಗುವ ಸ್ಥಳಗಳನ್ನು ಗುರುತಿಸಿ ಸರಿಯಾದ ಸವಲತ್ತುಗಳನ್ನು ಸಿದ್ಧಪಡಿಸಬೇಕು. ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಪರೀಕ್ಷೆ ಮಾಡುವ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಳ್ಳಬೇಕು (ವಿಶ್ವ ಸಂಸ್ಥೆಯ ಸಲಹೆಯಂತೆ) ಜನರಲ್ಲಿ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸಬೇಕು.
ತಡೆಗಟ್ಟುವಿಕೆಯೇ ಚಿಕಿತ್ಸೆಗಿಂತ ಉತ್ತಮವಾದದ್ದು
ಕೊರೊನಾ ಸೋಂಕು ಅತಿ ಶೀಘ್ರವಾಗಿ ಭಾರತದಲ್ಲಿ ಪಸರಿಸುತ್ತಿರುವುದನ್ನು ನಾವೆಲ್ಲರೂ ಸೇರಿ ಸುಲಭವಾಗಿ ತಡೆಯಬಹುದಾಗಿದೆ. ಅನಾಹುತವನ್ನು ತಡೆಯಲು ಅತಿ ಸುಲಭವಾದ ಕ್ರಮಗಳನ್ನು ಕೈಗೊಂಡರೆ ಕೊರೊನಾ ನಿಯಂತ್ರಣ ಸಾಧ್ಯ.
1) ಕಾರಣವಿಲ್ಲದೆ ಹೊರಗೆ ಹೋಗುವುದನ್ನು ತಪ್ಪಿಸಬೇಕು.
2) ಹೊರಗೆ ಹೋದಾಗ ಒಂದು ಮೀಟರ್ ಅಂತರ (Soಛಿiಚಿಟ ಆisಣಚಿಟಿಛಿiಟಿg) ಕಾಯ್ದುಕೊಳ್ಳಬೇಕು.
3) ಗಂಟೆಗೊಮ್ಮೆ 20 ಸೆಕೆಂಡ್ ಕೈತೊಳೆಯಬೇಕು.
4) ಹೊರ ಹೋಗುವಾಗ ಸರಿಯಾದ ಮಾಸ್ಕ್ ಬಳಸಬೇಕು.
5) ಚೆನ್ನಾಗಿ ಬೇಯಿಸಿದ, ಮನೆಯಲ್ಲಿ ಮಾಡಿದ ಆಹಾರವನ್ನೇ ಸೇವಿಸಬೇಕು.
6) ಶೀತವಾದ ಆಹಾರ ಪಾನೀಯಗಳನ್ನು ಸೇವಿಸಬಾರದು.
7) ಅರೆ ಬೆಂದ ಮಾಂಸಾಹಾರ ಸೇವಿಸಬಾರದು.
8) ಕುದಿಸಿದ ನೀರನ್ನೇ ಬಳಸಬೇಕು.
9) ಹೊರಗಿನಿಂದ ತÀಂದ ಆಹಾರ ವಸ್ತುಗಳನ್ನು ಚೆನ್ನಾಗಿ ತೊಳೆದು ಉಪಯೋಗಿಸಬೇಕು.
10) ಸೋಂಕಿತರು ಮುಟ್ಟಿದ ವಸ್ತುಗಳನ್ನು ಮುಟ್ಟುವುದನ್ನು ತಪ್ಪಿಸಬೇಕು.
11) ಸೋಂಕಿತರ ಸಂಪರ್ಕಕ್ಕೆ ಬಂದರೆ ತಾವಾಗಿಯೇ ವೈದ್ಯರನ್ನು ಕಂಡು ಪರೀಕ್ಷೆಗೆ ಒಳಪಡಿಸಬೇಕು.
ನಮ್ಮೆಲ್ಲರ ಜವಾಬ್ದಾರಿಯುತ ನಡೆಯಿಂದ ಕೊರೊನಾ ಸೋಂಕನ್ನು ಭಾರತದಿಂದ ನಿರ್ಮೂಲನೆ ಮಾಡಬಹುದಾಗಿದೆ. ಪ್ರತಿಯೊಬ್ಬ ಪ್ರಜೆಯ ಸಹಕಾರ ಅನಿವಾರ್ಯವಾಗಿದೆ.
-ಡಾ. ಶಿಲ್ಪ ಸತೀಶ್
ಮಕ್ಕಳ ತಜ್ಞರು, ಕೂರ್ಗ್ ಪಾಥ್‍ಕೇರ್, ಮಹದೇವಪೇಟೆ, ಮಡಿಕೇರಿ.