ಮಡಿಕೇರಿ, ಮಾ. 29: ಕೊರೊನಾ ವೈರಸ್ ಹರಡುವಿಕೆಯ ಕುರಿತಂತೆ ಸರ್ಕಾರ ಹಾಗೂ ರಾಜ್ಯದ ಅಮೀರ್-ಎ-ಷರಿಯತ್ ನೀಡಿರುವ ನಿರ್ದೇಶನದಂತೆ ರಾಜ್ಯದ ಮಸೀದಿಗಳ ಆಡಳಿತ ಸಮಿತಿಗಳು ಕೊರೊನಾ ವೈರಸ್ ಹರಡುವಿಕೆಯ ಕುರಿತಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ನೀಡಲಾಗುವ ಅಧಿಕೃತ ತ್ರಿಭಾಷಾ ಧ್ವನಿಮುದ್ರಣವನ್ನು ರಾಜ್ಯದ ಎಲ್ಲಾ ಮಸೀದಿಗಳಲ್ಲಿ ಧ್ವನಿ ವರ್ಧಕಗಳ ಮುಖಾಂತರ ಸಾರ್ವಜನಿಕರಿಗೆ ಅರಿವು ಮೂಡಿಸಲು ಪ್ರತಿದಿನ ಮುಂಜಾನೆ 10 ಗಂಟೆಗೆ, ಸಂಜೆ 4 ಗಂಟೆಗೆ, ಸಂಜೆ 6 ಗಂಟೆಗೆ ಹಾಗೂ ರಾತ್ರಿ 8 ಗಂಟೆಗೆ ಒಟ್ಟು ದಿನದಲ್ಲಿ ಕನಿಷ್ಟ ನಾಲ್ಕು ಬಾರಿ ಪ್ರಚಾರಪಡಿಸಬೇಕೆಂದು ರಾಜ್ಯ ವಕ್ಫ್ ಮಂಡಳಿ ಪ್ರಕಟಣೆ ತಿಳಿಸಿದೆ.