ಗೋಣಿಕೊಪ್ಪ ವರದಿ, ಮಾ. 29: ಕೊರೊನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಪೊನ್ನಂಪೇಟೆ ಪಟ್ಟಣದ ಬಸ್ ನಿಲ್ದಾಣದ ರಸ್ತೆಯಲ್ಲಿ ಕೊರೊನಾ ವೈರಸ್ ಚಿತ್ರ ಬಿಡಿಸಿ ಅರಿವು ಮೂಡಿಸಲಾಗಿದೆ.

ಜನರಿಗೆ ಅರಿವಾಗುವಂತೆ ‘ಬಂದರೆ ನೀ ಬೀದಿಗೆ.. ಬರುವೆ ನಾ ನಿಮ್ಮನೇಗೆ’ ಎಂದು ವೈರಸ್ ಹೇಳುವಂತೆ ಚಿತ್ರ ಬಿಡಿಸಿ ಜನರು ಮನೆಯಲ್ಲಿಯೇ ಉಳಿಯುವಂತೆ ಜಾಗೃತಿ ಮೂಡಿಸಲಾಗಿದೆ. ಈ ಸಂದರ್ಭ ಉಪ ನಿರೀಕ್ಷಕ ಡಿ. ಕುಮಾರ್, ಸಿಬ್ಬಂದಿ ಉದಯ ಅಭಿಜಿತ್, ಕುಶ, ಮನು, ಲೋಕೇಶ್, ಇದ್ದರು.