ಕೂಡಿಗೆ, ಮಾ. 29: ಜನರು ದಿನಸಿ ಮತ್ತು ತರಕಾರಿಗಳನ್ನು ಪಡೆಯಲು ಪರದಾಡುವ ಪ್ರಸಂಗ ಎದುರಾಗಿದೆ. ದಿನಸಿ ಮತ್ತು ತರಕಾರಿ ಅಂಗಡಿಗಳಲ್ಲಿ ಇರುವ ವಸ್ತುಗಳ ಬೆಲೆ ಬಾರಿ ಏರಿಕೆಯಾಗಿದೆ.

ಮಾರಾಟದ ವಸ್ತುಗಳು ನಮಗೆ ಸಿಗುತ್ತಿಲ್ಲವೆಂದು ಅಧಿಕವಾದ ಬೆಲೆಗೆ ಮಾರಾಟವಾಗುತ್ತಿದೆ. ಆದರೆ ಜನರು ವಿಧಿ ಇಲ್ಲದೆ ಬೆಲೆ ಕೊಟ್ಟು ಕೊಂಡುಕೊಳ್ಳುವ ದೃಶ್ಯ ಕಂಡುಬರುತ್ತದೆ. ಈ ವ್ಯಾಪ್ತಿಯ ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರು ಅಗತ್ಯವಾದ ವಸ್ತುಗಳನ್ನು ಖರೀದಿಸಲು ಹೆಣಗಾಡುತ್ತಿದ್ದಾರೆ. ದಿನಸಿ ಮತ್ತು ತರಕಾರಿ ವಸ್ತುಗಳನ್ನು ತರಲು ಅಂಗಡಿಯವರಿಗೆ ಪೊಲೀಸ್ ಠಾಣಾಧಿಕಾರಿ ನಂದೀಶ್ ಪಾಸ್ ವಿತರಣೆ ಮಾಡಿದ್ದಾರೆ. ಈ ವ್ಯಾಪ್ತಿಯಲ್ಲಿರುವ ಔಷಧಿ ಅಂಗಡಿಗಳಲ್ಲಿ ಅವಶ್ಯಕತೆ ಔಷಧಿಗಳ ಕೊರತೆ ಎದ್ದು ಕಾಣುತ್ತಿತ್ತು. ಜನರಿಗೆ ಬೇಕಾಗುವ ಮಾಸ್ಕ್ ಮಾತ್ರ ಯಾವುದೇ ಅಂಗಡಿಗಳಲ್ಲಿ ದೂರೆಯುತ್ತಿಲ್ಲ.