ಸಿದ್ದಾಪುರ, ಮಾ. 29: ಕೊರೊನಾ ಹಿನ್ನೆಲೆಯಲ್ಲಿ ಸಿದ್ದಾಪುರ ಪಟ್ಟಣದಲ್ಲಿ ಭಾನುವಾರದಂದು ಮೆಡಿಕಲ್ ಅಂಗಡಿ ಹಾಲಿನ ಡೈರಿ ಹೊರತುಪಡಿಸಿ ಸಂಪೂರ್ಣ ಬಂದ್ ಆಗಿತ್ತು. ಸಿದ್ದಾಪುರದಲ್ಲಿ ಜನರ ಓಡಾಟವಿಲ್ಲ, ಯಾವುದೇ ವಾಹನ ಸಂಚಾರ ಇಲ್ಲದೆ ಕಾರ್ಮಿಕರು ಕೆಲಸಕ್ಕೆ ತೆರಳುತಿಲ್ಲ. ಸಿದ್ದಾಪುರ ಪೊಲೀಸರು ಬೆಳಗ್ಗಿನಿಂದಲೇ ಕರ್ತವ್ಯಕ್ಕೆ ಹಾಜರಾಗಿದ್ದು ಅನಗತ್ಯವಾಗಿ ಸುತ್ತಾಡುತಿದ್ದ ಕೆಲ ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದುದು ಕಂಡುಬಂತು. ಶನಿವಾರಸಂತೆ ಕೂಡ ಸಂಪೂರ್ಣ ಸ್ತಬ್ಧವಾಗಿತ್ತು.