ಮಡಿಕೇರಿ, ಮಾ. 29: ಪೊಲೀಸ್ ಇಲಾಖೆ ಮತ್ತು ಮಡಿಕೇರಿ ರಕ್ಷಣಾ ವೇದಿಕೆಯಿಂದ ಮಡಿಕೇರಿ ನಗರ ದಾದ್ಯಂತ ಅಂಗಡಿಗಳ ಮುಂಭಾಗದಲ್ಲಿ ಗ್ರಾಹಕರು ಬಂದು ನಿಲ್ಲಲು ಕಾಯ್ದು ಕೊಳ್ಳಬೇಕಾದ ಅಂತರ (ಸೋಷಿಯಲ್ ಡಿಸ್ಟೆನ್ಸ್) ಗುರುತಿಸಲು ಮಡಿಕೇರಿಯ ಡಿ.ವೈ.ಎಸ್.ಪಿ ಬಾರಿಕೆ ದಿನೇಶ್ ಅವರ ಮಾರ್ಗದರ್ಶನದಲ್ಲಿ ಬಣ್ಣ ಬಳಿಯಲಾಯಿತು.
ದಯವಿಟ್ಟು ನೀವು ಮನೆಯಲ್ಲಿಯೇ ಇರಿ, ನಿಮಗಾಗಿ ಹೊರಗೆ ಅಹೋ ರಾತ್ರಿ ದುಡಿಯುತ್ತಿರುವ ವೈದ್ಯಕೀಯ ಸಮೂಹಕ್ಕೆ, ಪೊಲೀಸರಿಗೆ ಮತ್ತು ಸ್ವಯಂಸೇವಕರಿಗೆ ಅಲ್ಲಿಂದಲೇ ಶುಭ ಹಾರೈಸಿ ಎಂದು ರಕ್ಷಣಾ ವೇದಿಕೆ ಕಾರ್ಯಕರ್ತರು ಮನವಿ ಮಾಡಿದ್ದಾರೆ.