ಕೆ.ಜಿ. ಬೋಪಯ್ಯ ಸಲಹೆ ಮಡಿಕೇರಿ, ಮಾ. 27: ಎಲ್ಲಾ ಸಹಕಾರ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿಪತ್ತಿನ ಸಂಘಗಳಿಂದ ರೈತರು ಪಡೆದಿರುವ ಸಾಲದ ಮೇಲಿನ ಸುಸ್ತಿ ಬಡ್ಡಿಯನ್ನು ಪಾವತಿಸಲು ಜೂ. 30ರ ತನಕ ಕಾಲಾವಕಾಶವಿದ್ದು; ಯಾರೂ ಆತಂಕಗೊಳ್ಳಬೇಕಿಲ್ಲ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸಲಹೆ ನೀಡಿದ್ದಾರೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಅಧಿಕೃತವಾಗಿ ಘೋಷಿಸಿದ್ದು; ಮಾ. 31 ರೊಳಗೆ ಸಾಲ ಮರುಪಾವತಿ ಮಾಡದಿರುವ ರೈತರು ಈ ಬದಲಾವಣೆಯನ್ನು ಗಮನಿಸಬೇಕೆಂದು ಅವರು ಕೋರಿದ್ದಾರೆ. ಸಾಲ ಸಂಬಂಧ ಗೊಂದಲ ಕುರಿತು ಪ್ರತಿಕ್ರಿಯಿಸಿರುವ ಬೋಪಯ್ಯ ಅವರು ‘ಶಕ್ತಿ’ ಮೂಲಕ ಈ ಸ್ಪಷ್ಟನೆ ನೀಡಿದ್ದಾರೆ.