ಗೋಣಿಕೊಪ್ಪಲು, ಮಾ. 24: ಕೊರೊನಾ ವೈರಸ್ ಹರಡುವ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಯಾಗಿರುವುದರಿಂದ ಆಟೋ ಮಾಲೀಕರು, ಚಾಲಕರು ಹಾಗೂ ಮಹಿಳಾ ಸಂಘಗಳು, ಸ್ವ ಸಹಾಯ ಸಂಘಗಳು ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆದಿದ್ದಾರೆ. ಇದೀಗ ಯಾರು ಕೂಡಾ ಸಾಲವನ್ನು ಪಾವತಿಸಲು ಶಕ್ತರಾಗಿಲ್ಲ. ಆದ್ದರಿಂದ ಬಲವಂತವಾಗಿ ಸಾಲದ ಕಂತನ್ನು ಪಾವತಿಸಲು ಒತ್ತಾಯ ಪಡಿಸಬಾರದು ಎಂದು ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಹೇಳಿದ್ದಾರೆ. ತಮ್ಮ ದಿನನಿತ್ಯ ಬಳಸುವ. ಆಹಾರ ಸಾಮಗ್ರಿಗಳನ್ನು ಖರೀದಿಸುವುದೇ ಕಷ್ಟವಾಗಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಫೈನಾನ್ಸ್ ಸಂಸ್ಥೆಗಳು ಮಾರ್ಚ್ ತಿಂಗಳ ಅಂತ್ಯದಲ್ಲಿ ಸಾಲವನ್ನು ಮರುಪಾವತಿ ಮಾಡಲು ಒತ್ತಾಯ ಕೇಳಿ ಬಂದಿದೆ. ಆಟೋರಿಕ್ಷಾ ಪಡೆಯಲು ಚಾಲಕರು ಪಡೆದ ಸಾಲವನ್ನು ಈ ಪರಿಸ್ಥಿತಿಯಲ್ಲಿ ಕಟ್ಟಲು ಚಾಲಕರಿಗೆ ಸಾಧ್ಯವಾ ಗುತ್ತಿಲ್ಲ. ಸಾಲದ ಕಂತನ್ನು ಕಟ್ಟುವಂತೆ ಫೈನಾನ್ಸ್ ಸಂಸ್ಥೆಗಳು ಬಲವಂತಪಡಿಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.