ವೀರಾಜಪೇಟೆ, ಮಾ. 24: ರಾಜ್ಯದಲ್ಲಿ ಮುಂದಿನ ತಿಂಗಳು ಪ್ರಾರಂಭವಾಗಲಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್.ಪಿ.ಆರ್) iÀುನ್ನು ಕೂಡಲೇ ಕೈಬಿಡ ಬೇಕೆಂದು ಸಂವಿಧಾನ ಉಳಿಸಿ ವೇದಿಕೆಗಳ ಜಂಟಿ ಕ್ರಿಯಾ ಸಮಿತಿ ಸರಕಾರವನ್ನು ಒತ್ತಾಯಿಸಿದೆ. ಈ ಬಗ್ಗೆ ರಾಜ್ಯದ ಮುಖ್ಯ ಮಂತ್ರಿಗಳಿಗೆ ತಾಲೂಕು ತಹಶೀಲ್ದಾರ್ ಮುಖಾಂತರ ಮನವಿ ಪತ್ರವೊಂದನ್ನು ಸಲ್ಲಿಸಲಾಯಿತು. ಈ ಸಂದರ್ಭ ಸಮಿತಿ ಪದಾಧಿಕಾರಿಗಳಾದ ಯು. ಅಬ್ದುಸ್ಸಲಾಮ್, ಸಿ.ಹೆಚ್. ಅಫ್ಸರ್, ಪಿ.ಕೆ. ಅಬ್ದುಲ್ ರೆಹ್ಮಾನ್, ಪ.ಪಂ. ಸದಸ್ಯ ರಜನಿಕಾಂತ್, ಗ್ರಾಮ ಪಂಚಾಯಿತಿ ಸದಸ್ಯ ಕೆ.ಟಿ. ಬಷೀರ್, ಎಂ.ಕೆ. ಅಶ್ರಫ್, ಎನ್.ಎ. ಗಫೂರ್, ಆತಿಫ್ ಮನ್ನಾ ಹಾಜರಿದ್ದರು.