ಮಡಿಕೇರಿ, ಮಾ. 24: ಕಡಗದಾಳು ಗ್ರಾಮದ ಮಸೀದಿಗೆ ತೆರಳುವ ರಸ್ತೆ ಸಮೀಪದಲ್ಲಿರುವ ದಿನಸಿ ಅಂಗಡಿ ಮಾಲೀಕರೊಬ್ಬರು ಗ್ರಾಹಕರಿಂದ ದಿನಬಳಕೆ ವಸ್ತುಗಳಿಗೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೊರೊನಾ ಸೋಂಕು ವಿರುದ್ಧ ಕೊಡಗು ಲಾಕ್‍ಡೌನ್ ಪರಿಸ್ಥಿತಿಯನ್ನೇ ದುರ್ಬಳಕೆ ಮಾಡಿಕೊಂಡಿರುವ ಈ ವ್ಯಕ್ತಿ ಜನಸಾಮಾನ್ಯರಿಂದ ದುಬಾರಿ ಹಣ ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಧರ್ಪ ಮೆರೆದಿದ್ದಾರೆ. ಎಲ್ಲಾ ಕಡೆ ಕೆ.ಜಿ. ಈರಳ್ಳಿಗೆ ರೂ. 30 ಇದ್ದರೆ ಈ ಅಂಗಡಿಯಲ್ಲಿ ಮಾತ್ರ ಕೆ.ಜಿ.ಗೆ ರೂ. 45 ವಸೂಲಿ ಮಾಡುತ್ತಿದ್ದಾನೆ. ಅಲ್ಲದೆ ವ್ಯಾಪಾರಕ್ಕಾಗಿ ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಮಾತ್ರ ಅಂಗಡಿ ತೆರೆದಿರಬೇಕೆಂಬ ಕಟ್ಟು ನಿಟ್ಟಿನ ಆಜ್ಞೆಯನ್ನೂ ಗಾಳಿಗೆ ತೂರಿರುವ ಈ ವ್ಯಕ್ತಿ ಬೆಳಗ್ಗಿನಿಂದಲೇ ಮಳಿಗೆ ತೆರೆದು ವ್ಯಾಪಾರ ಮಾಡುವುದರ ಮೂಲಕ ಸೋಂಕು ಹರಡಲು ಮುಕ್ತ ಅವಕಾಶ ಕಲ್ಪಿಸಿದಂತಿದೆ.

ಈ ಬಗ್ಗೆ ಕಡಗದಾಳು ಗ್ರಾಮ ಪಂಚಾಯಿತಿ ತಕ್ಷಣವೇ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಗ್ರಾಹಕರು ಆಗ್ರಹಿಸಿದ್ದಾರೆ.

- ಗೋಪಾಲ್ ಸೋಮಯ್ಯ.