ಹೆಬ್ಬಾಲೆ, ಮಾ. 24: ಉತ್ತರ ಕೊಡಗಿನ ಮೀನುಕೊಲ್ಲಿ ಅರಣ್ಯ ಪ್ರದೇಶದಲ್ಲಿ ಹುಲಿ ಹಾವಳಿ ತೀವ್ರಗೊಂಡಿದ್ದು ಹುಲಿ ದಾಳಿಗೆ ಕರುಗಳು ಬಲಿಯಾಗಿವೆ.

ಸಮೀಪದ ವಾಲ್ನೂರು - ತ್ಯಾಗತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವಾಲ್ನೂರು, ಅಮ್ಮತ್ ಮಂಗಲ ಸುತ್ತಮುತ್ತಲಿನ ಗ್ರಾಮಗಳ ರೈತರ ಕರುಗಳು ಹುಲಿ ದಾಳಿಗೆ ಸಿಲುಕಿ ಬಲಿಯಾಗಿವೆ.

ವಾಲ್ನೂರು ಗ್ರಾಮದ ಕಾವೇರಪ್ಪ ಎಂಬವರಿಗೆ ಸೇರಿದ ಕರುವನ್ನು ಸೋಮವಾರ ಬೆಳಿಗ್ಗೆ ದಾಳಿ ಮಾಡಿಕೊಂದಿದೆ. ಅದೇ ರೀತಿ ಗ್ರಾಮದ ಇತರೆ ರೈತರ ಕರುಗಳ ಮೇಲೆ ದಾಳಿ ಮಾಡಿ ಕೊಂದು ತಿಂದಿದೆ ಎಂದು ಗ್ರಾಮದ ರೈತ ಮುಖಂಡ ಅಯ್ಯಪ್ಪ ತಿಳಿಸಿದ್ದಾರೆ.