ಪೆರಾಜೆ, ಮಾ. 22: ವರ್ಷಂಪ್ರತಿ ಮಾರ್ಚ್ 9 ರಿಂದ ಏಪ್ರಿಲ್ 10ರ ವರೆಗೆ ಒಂದು ತಿಂಗಳ ಕಾಲ ವಿಜೃಂಭಣೆಯಿಂದ ನಡೆಯುವ ನೂರೊಂದು ದೈವಗಳ ನೆಲೆವೀಡಾಗಿರುವ ಇತಿಹಾಸ ಪ್ರಸಿದ್ಧ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಜಾತ್ರೋತ್ಸವನ್ನು ರದ್ದುಗೊಳಿಸಲು ಆಡಳಿತ ಸಮಿತಿ ತೀರ್ಮಾನಿಸಿದೆ. ವಿಶ್ವಾದ್ಯಂತ ಹರಡುತ್ತಿರುವ ಮಾರಕ ಕೊರೊನ ಕಾಯಿಲೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸಲು ಸರ್ಕಾರದ ನಿರ್ಬಂಧ ಇರುವುದರಿಂದ ಆಡಳಿತ ಮಂಡಳಿಯು ಜಾತ್ರೋತ್ಸವವನ್ನು ಹಾಗೂ ಪೆರಾಜೆ ಪಂಚಾಯತ್ ವ್ಯಾಪ್ತಿಯ ಊರುಗಳಲ್ಲಿ ನಡೆಯುವ ದೈವ ಕೋಲ ಉತ್ಸವಗಳನ್ನು ಕೂಡ ನಡೆಸದಿರಲು ನಿರ್ಧಾರ ತೆಗೆದುಕೊಳ್ಳಲಾಯಿತು.

ದೇವಸ್ಥಾನದ ಎಲ್ಲಾ ಸೇವೆಗಳು ಸ್ಥಗಿತ

ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ದಿನನಿತ್ಯ ನಡೆಯುವ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿದ್ದು ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ಕೂಡ ನಿರ್ಬಂಧಿಸಲಾಗಿದೆ ಎಂದು ಕ್ಷೇತ್ರದ ಆಡಳಿತ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.