ಮಡಿಕೇರಿ, ಮಾ. 22: ಅಮ್ಮತ್ತಿ ಹೊಸೂರುವಿನಲ್ಲಿ ಯುಗಾದಿ ಸಂದರ್ಭ ಜರುಗುವ ಜೇಡಿ ಮಾರಿಯಮ್ಮ ಉತ್ಸವವನ್ನು ಈ ಬಾರಿ ಮುಂದೂಡಲಾಗಿದೆ. ತಾ. 25 ಹಾಗೂ 26ರಂದು ನಡೆಯಬೇಕಿದ್ದ ಉತ್ಸವವನ್ನು ಕೊರೊನಾ ಆತಂಕ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಪ್ರಯತ್ನದ ಕರೆಯಂತೆ ಮುಂದೂಡಿರುವುದಾಗಿ ಸಮಿತಿ ಅಧ್ಯಕ್ಷ ಮೊಳ್ಳೆರ ಸದಾ ಅಪ್ಪಚ್ಚು ತಿಳಿಸಿದ್ದಾರೆ.