ಮಡಿಕೇರಿ, ಮಾ. 23: ಕೆದಮುಳ್ಳೂರು ಗ್ರಾಮದ ಬಿಲ್ಲವರ ಯಶೋಧ ಎಂಬವರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಇತ್ತೀಚೆಗೆ ಕೆಲಸಕ್ಕೆಂದು ತೆರಳುತ್ತಿದ್ದಾಗ ಮಾಲ್ದಾರೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕೊಂದು ಅಪ್ಪಳಿಸಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇವರ ಮುಖ ತೀವ್ರ ಗಾಯಗೊಂಡಿದ್ದು, ಶಸ್ತ್ರಚಿಕಿತ್ಸೆ ಮಾಡಬೇಕಾಗಿರುವುದರಿಂದ ಅಂದಾಜು ರೂ. 3,50,000 ಹಣ ಬೇಕಾಗಿದೆ. ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಇವರು, ಅಪಘಾತದಲ್ಲಿ ತಲೆಗೆ ಹಾಗೂ ಎದೆಯ ಭಾಗಕ್ಕೆ ಪೆಟ್ಟಾಗಿ ನೆನಪಿನ ಶಕ್ತಿ ಕಳೆದುಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಹೆಚ್ಚಿನ ಚಿಕಿತ್ಸೆ ನೀಡಿದರೆ ಇವರು ಗುಣಮುಖರಾಗುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇವರಿಗೀಗ ಆರ್ಥಿಕ ನೆರವಿನ ಅಗತ್ಯವಿದ್ದು, ಇವರಿಗೆ ಆರ್ಥಿಕ ನೆರವು ನೀಡಲಿಚ್ಚಿಸುವವರು ವೀರಾಜಪೇಟೆ ಚಿಕ್ಕಪೇಟೆ ಕಾರ್ಪೋರೇಷನ್ ಬ್ಯಾಂಕ್ ಖಾತೆ ಸಂಖ್ಯೆ : 520441034731419. IಈSಅ ಅoಜe 0ಖP0000210 ನೀಡಿ ಸಹಕರಿಸಬಹುದು. ಹೆಚ್ಚಿನ ಮಾಹಿತಿಗೆ ಆಶಿಕ ಮೊ. 8277711304 ಸಂಪರ್ಕಿಸಬಹುದು.