*ಗೋಣಿಕೊಪ್ಪ, ಮಾ. 22: ಜನತಾ ಕಫ್ರ್ಯೂಗೆ ಪೆÇನ್ನಂಪೇಟೆ ತಾಲೂಕು ಮತ್ತು ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಬೆಳಿಗ್ಗೆ 7ರಿಂದ ರಾತ್ರಿ 9ರ ತನಕ ಜನತೆ ತಮ್ಮ ಮನೆಗಳಿಂದ ಹೊರ ಬಾರದೆ ಪ್ರಧಾನಿ ಕರೆಗೆ ಸ್ಪಂದಿಸಿ ಕೊರೊಟಿಂ ವೈರಸ್ ವಿರುದ್ಧ ಒಂದು ದಿನದ ಮೌನ ಕ್ರಾಂತಿಗೆ ಕಹಳೆ ಊದಿದರು.
ಪೆÇನ್ನಂಪೇಟೆ, ಗೋಣಿಕೊಪ್ಪ, ತಿತಿಮತಿ, ಬಾಳಲೆ, ಪೆÇನ್ನಪ್ಪಸಂತೆ, ಪಾಲಿಬೆಟ್ಟ, ಹುದಿಕೇರಿ, ಶ್ರೀಮಂಗಲ, ಶೆಟ್ಟಿಗೇರಿ, ಕಾನೂರು, ಕುಟ್ಟ ,ನಾಲ್ಕೇರಿ, ಸೇರಿದಂತೆ ಪೆÇನ್ನಂಪೇಟೆ ಮತ್ತು ವೀರಾಜಪೇಟೆ ತಾಲೂಕಿನ 38 ಗ್ರಾಪಂ ವ್ಯಾಪ್ತಿಗಳಲ್ಲಿ ಜನತೆಯ ಓಡಾಟ ವಾಹನಗಳ ಸಂಚಾರದ ಸದ್ದುಗದ್ದಲ ಗಳಿಲ್ಲದೆ ಮೌನ ಆವರಿಸಿತ್ತು.
ಪೆÇನ್ನಂಪೇಟೆಯಲ್ಲಿ ಹಾಲಿನ ಡೈರಿ, ಪತ್ರಿಕೆ ಅಂಗಡಿ ಔಷಧಿ ಮಳಿಗೆಗಳು, ಬಿಟ್ಟು ಬೇರೆ ಯಾವುದೇ ವ್ಯಾಪಾರ ವಹಿವಾಟುಗಳು ನಡೆಯಲಿಲ್ಲ. ಗೋಣಿಕೊಪ್ಪಲಿನಲ್ಲಿ ಬೆಳಿಗ್ಗೆ 7 ಗಂಟೆಯವರೆಗೆ ಹಾಲು ಮತ್ತು ಪತ್ರಿಕೆಗಳ ವಿತರಣೆ ನಡೆಯಿತು. ನಂತರ ಜನಸಂಚಾರ ಇಲ್ಲದೆ ಪಟ್ಟಣ ಮೌನದ ಮುಸುಕು ಹೊದ್ದು ಮಲಗಿತ್ತು. ಕೆಲವರು ದ್ವಿಚಕ್ರ ವಾಹನದಲ್ಲಿ ಓಡಾಡುವುದು ಕಂಡು ಬಂದಿದ್ದರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ.
ಗೋಣಿಕೊಪ್ಪಲಿನ ಶ್ರೀ. ಉಮಾಮಹೇಶ್ವರಿ ದೇವಸ್ಥಾನವನ್ನು ಪ್ರಾತಃಕಾಲ ಪೂಜೆಯ ನಂತರ ಮುಚ್ಚಲಾಯಿತು ಭಕ್ತಾದಿಗಳಿಗೆ ಪ್ರವೇಶವಿರಲಿಲ್ಲ. ಪೆಟ್ರೋಲ್ ಬಂಕ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಕರೆ ನೀಡಿದರು. ಗೋಣಿಕೊಪ್ಪದಲ್ಲಿ ಕೆಲವು ಬಂಕುಗಳು ಕಾರ್ಯನಿರ್ವಹಿಸಿದ್ದು ಕಂಡುಬಂದಿತ್ತು. ಪೆÇಲೀಸ್ ಇಲಾಖೆ, ಆರೋಗ್ಯ ಇಲಾಖೆ, ಚೆಸ್ಕಂ ಇಲಾಖೆ ಜನರ ಸೇವೆಗಾಗಿ ತೆರೆದಿದ್ದು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು. ಕೇಬಲ್ ಕಚೇರಿಯು ತೆರೆದಿತ್ತು.
ಆಟೋ ಚಾಲಕರ ಸಂಘ, ವಾಹನ ಚಾಲಕರ ಸಂಘ, ಬಸ್ ಚಾಲಕರ ಮತ್ತು ಮಾಲೀಕರ ಸಂಘ ಜನತ ಕಫ್ರ್ಯೂಗೆ ಬೆಂಬಲ ಸೂಚಿಸಿರುವುದರಿಂದ ಸಾರ್ವಜನಿಕರ ಸೇವೆಯಿಂದ ಒಂದು ದಿನಕ್ಕೆ ತಾತ್ಕಾಲಿಕವಾಗಿ ವಿಮುಕ್ತಿ ಹೊಂದಿತ್ತು.
ತಿತಿಮತಿ ವ್ಯಾಪ್ತಿಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ತಿತಿಮತಿ ಗ್ರಾಮೀಣ ಭಾಗದಲ್ಲಿ ಬಡ್ಡಿ ಮತ್ತು ಚೀಟಿ ನಡೆಸುವ ತಂಡದವರು ಮನೆ ಮನೆಗೆ ತೆರಳಿ ಹಣ ವಸೂಲಿ ಮಾಡುವುದು ಕಂಡುಬಂದಿತ್ತು. ಇದಕ್ಕೆ ಸ್ಥಳೀಯ ಗ್ರಾಮಪಂಚಾಯಿತಿ ಆಕ್ಷೇಪ ವ್ಯಕ್ತಪಡಿಸಿತು.
ವೀರಾಜಪೇಟೆ: ವೀರಾಜಪೇಟೆ ಪಟ್ಟಣ ಪೂರ್ಣವಾಗಿ ಸ್ತಬ್ಧಗೊಂಡು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಬೀದಿಗಳು ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.
ಜನತಾ ಕಫ್ರ್ಯೂ ಅಂಗವಾಗಿ ವೀರಾಜಪೇಟೆಯಲ್ಲಿ ಎಲ್ಲಾ ಅಂಗಡಿಗಳು, ಹೊಟೇಲ್ಗಳು ಬಂದ್ ಆಗಿದ್ದರೆ ಪಟ್ಟಣದಲ್ಲಿರುವÀ ನಿವಾಸಿಗಳು ಬೆಳಗ್ಗಿನಿಂದಲೇ ಮನೆಯಿಂದ ಹೊರ ಬರಲಿಲ್ಲ. ಆಟೋರಿಕ್ಷಾಗಳು, ಟ್ಯಾಕ್ಸಿಗಳು ಇತರ ಎಲ್ಲಾ ವಾಹನಗಳು, ಖಾಸಗಿ ಹಾಗೂ ಸಾರಿಗೆ ಸಂಸ್ಥೆಯ ಬಸ್ಸುಗಳು ಸಂಚರಿಸಲಿಲ್ಲ. ವೀರಾಜಪೇಟೆಯಲ್ಲಿ ಎಲ್ಲ ದೇವಾಲಯಗಳು, ಮಸೀದಿಗಳು ಹಾಗೂ ಚರ್ಚ್ಗಳನ್ನು ಬಂದ್ ಮಾಡಲಾಗಿತ್ತು.
ಖಾಸಗಿ ಬಸ್ಸು ನಿಲ್ದಾಣದ ವರ್ತಕರು, ಮತ್ಸ್ಯ ಭವನದ ಮೀನು ವ್ಯಾಪಾರಿಗಳು ನಿನ್ನೆ ಅಪರಾಹ್ನದಿಂದಲೇ ಬಂದ್ ಮಾಡಿದ್ದರು. ಕೊರೊನಾ ವೈರಸ್ನ ಭೀತಿ ಪತ್ರಿಕಾ ವಿತರಣೆಯ ಏಜೆಂಟರಿಗೂ ತಟ್ಟಿದ್ದರಿಂದ ಇಂದು ಪತ್ರಿಕೆಗಳ ಏಜೆಂಟರುಗಳು ಪತ್ರಿಕಾ ವಿತರಣೆಯ ಕೆಲಸ ನಿರ್ವಹಿಸಲಿಲ್ಲ.
ವೀರಾಜಪೇಟೆ ಪಟ್ಟಣ ವ್ಯಾಪ್ತಿಗೆ ಬರುವ ಹದಿಮೂರು ಮಸೀದಿಗಳನ್ನು ಇಂದಿನಿಂದ ತಾ. 31ರ ವರೆಗೆ ಮುಚ್ಚುವಂತೆ ತೀರ್ಮಾನಿಸಿದ್ದರಿಂದ ಇಂದು ಎಲ್ಲ ಮಸೀದಿಗಳು ಮುಚ್ಚಿದ್ದವು.
ಗಡಿಭಾಗದ ಗೇಟ್ಗಳು ಬಂದ್
ಕೊರೊನಾ ವೈರಸ್ ಹರಡುವಿಕೆ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಕೊಡಗು ಕೇರಳದ ಮಾಕುಟ್ಟ ಹಾಗೂ ಕುಟ್ಟದ ತೋಲ್ಪಟ್ಟಿಯ ಎರಡು ಗೇಟ್ಗಳನ್ನು ಇಂದಿನಿಂದ ಬಂದ್ ಮಾಡಲಾಗಿದೆ. ಕೊಡಗಿನಿಂದ ಕೇರಳಕ್ಕೆ ಹೋಗುವಂತಿಲ್ಲ. ಅಲ್ಲಿಂದ ಈ ಕಡೆಗೆ ಬರದಂತೆ ನಿಷೇಧ ಹೇರಲಾಗಿದೆ. ಇಂದು ಬೆಳಿಗ್ಗೆ ಟೆಂಪೋ ಟ್ರಾವೆಲ್ಲರ್ನಲ್ಲಿ ಮುಂಬಯಿಯಿಂದ ಕೊಡಗಿನ ಮಾಕುಟ್ಟದ ಮೂಲಕ ಕೇರಳಕ್ಕೆ ತೆರಳಲು ಬಂದಿದ್ದ ಹದಿನೈದು ಮಂದಿಯನ್ನು ಪೊಲೀಸರು ಗೇಟ್ನಲ್ಲಿ ತಡೆದು ಹಿಂದಕ್ಕೆ ಕಳುಹಿಸಿದರು. ವೀರಾಜಪೇಟೆ ಬಳಿಯ ಒಂಟಿಯಂಗಡಿಯೂ ಪೂರ್ಣ ಸ್ತಬ್ಧಗೊಂಡಿತ್ತು.
ಸಿದ್ದಾಪುರ: ಸಿದ್ದಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಸಂಪೂರ್ಣ ಬಂದ್ ಆಗಿದ್ದವು. ಸಿದ್ದಾಪುರ, ನೆಲ್ಲಿಹುದಿಕೇರಿ, ಮಾಲ್ದಾರೆ, ಚೆನ್ನಯನಕೋಟೆ, ಪಾಲಿಬೆಟ್ಟ ವ್ಯಾಪ್ತಿಯಲ್ಲಿ ಮೌನ ಆವರಿಸಿತ್ತು. ಸಿದ್ದಾಪುರದಲ್ಲಿ ಎರಡು ಮೆಡಿಕಲ್ ಶಾಪ್ ಹಾಗೂ ಒಂದು ಹಾಲಿನ ಡೈರಿ ತೆರೆದಿತ್ತು. ಆದರೆ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು.
ಸಿದ್ದಾಪುರದಲ್ಲಿ ಜನರ ಓಡಾಟ ಇರಲಿಲ್ಲ. ಆಸ್ಪತ್ರೆಯಲ್ಲೂ ರೋಗಿಗಳು ಕಂಡುಬರಲಿಲ್ಲ. ಬಸ್ಸು ಸೇರಿದಂತೆ ಎಲ್ಲಾ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಹಾಲುಗುಂದ ಗ್ರಾಮದ ಕೇತುಮೊಟ್ಟೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೂರು ಚೆಕ್ ಪೋಸ್ಟ್ಗಳಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಮೂವತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಲುಗುಂದ ವ್ಯಾಪ್ತಿಯ ಸುತ್ತಮುತ್ತಲಿನ ಸಂಪರ್ಕ ರಸ್ತೆಯಲ್ಲಿ ಮೂರು ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದರು.
ಕುಟ್ಟ ವೃತ್ತ ನಿರೀಕ್ಷಕ ಪರಮಶಿವಮೂರ್ತಿ ನೇತೃತ್ವದಲ್ಲಿ ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ಭಾಗಮಂಡಲ ಠಾಣಾಧಿಕಾರಿ ಮಹದೇವಪ್ಪ ಹಾಗೂ 30 ಮಂದಿ ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಸಿದ್ದಾಪುರ ಠಾಣಾ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ಬಂದೋಬಸ್ತ್ ಕೈಗೊಂಡಿದ್ದರು. ಪಟ್ಟಣಗಳಲ್ಲಿ ಕೆಲವರು ಅನಗತ್ಯವಾಗಿ ಸುತ್ತಾಡುತ್ತಿದ್ದ ಮಂದಿಗೆ ಮಾಸ್ಕ್ ಧರಿಸುವಂತೆ ಸೂಚನೆ ನೀಡಿದರು. ಕೊಂಡಗೇರಿ ವ್ಯಾಪ್ತಿಯಲ್ಲಿ ಪೊಲೀಸರು ಬಿಟ್ಟರೆ ಬೇರೆ ಯಾರೂ ಅತ್ತ ಸುಳಿಯದೆ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
ಕಡಂಗ: ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿರುವ ಜನತಾ ಕಫ್ರ್ಯೂಗೆ ಕಡಂಗ ಗ್ರಾಮದ ಸಮಸ್ತ ನಾಗರಿಕರು ಸಂಪೂರ್ಣ ಸಹಕರಿಸಿ, ಪಟ್ಟಣದಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಮಾಡಲಾಯಿತು. ಬಂದ್ ಸಂದರ್ಭ ಅವಶ್ಯಕ ವಸ್ತುಗಳಾದ ಹಾಲು ಮತ್ತು ಪೇಪರ್ ಅಂಗಡಿಗಳು ಕೊಂಚ ಸಮಯದಲ್ಲಿ ತೆರೆದು ತದನಂತರ ಮುಚ್ಚಲಾಯಿತು. ಎಲ್ಲಾ ಬಂದ್ ಸಂದರ್ಭಗಳಲ್ಲಿ ಪರ-ವಿರೋಧವಿದ್ದರೂ ಈ ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಕಫ್ರ್ಯೂಗೆ ಸಂಪೂರ್ಣವಾಗಿ ಸಹಕರಿಸಿದರು. ಶನಿವಾರ ಸಂಜೆಯಿಂದಲೇ ಪಟ್ಟಣದಲ್ಲಿ ಬಂದ್ ವಾತಾವರಣ ಎದ್ದು ಕಾಣುತ್ತಿತ್ತು. ಮಸೀದಿಗಳಲ್ಲಿ ಈ ಮಹಾ ಮಾರಿಯನ್ನು ತಡೆಗೆಟ್ಟವ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭ ಮಾತನಾಡಿದ ಮಹಲ್ ಖತೀಬ್ರಾದ ಹ್ಯಾರಿಸ್ ಸಖಾಫಿರವರು ಭಯದ ವಾತಾವರಣ ಬಿಟ್ಟು ಸರ್ಕಾರದ ನಿರ್ದೇಶಗಳು ಪಾಲಿಸಿ ಸಹಕರಿಸಿಬೇಕಾಗಿ ಹೇಳಿದರು.
ಪೊನ್ನಂಪೇಟೆ: ಜನತಾ ಕಫ್ರ್ಯೂಗೆ ಪೊನ್ನಂಪೇಟೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.ಒಂದು ಮೆಡಿಕಲ್ಸ್ ಹಾಗೂ ಒಂದು ಪೆಟ್ರೋಲ್ ಬಂಕ್ ಹೊರತು ಪಡಿಸಿ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಮುಖ್ಯ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳ ರಸ್ತೆಗಳಲ್ಲಿ ವಾಹನ ಹಾಗೂ ಜನ ಸಂಚಾರವಿಲ್ಲದೆ ಬಿಕೋ ಎನ್ನುತಿತ್ತು.
ಇಂದು ಆಕಾಶದಿಂದ ಹೆಲಿಕಾಪ್ಟರ್ನಲ್ಲಿ ಕೊರೊನಾ ವೈರಸ್ ಕೊಲ್ಲಲು ಕ್ರಿಮಿನಾಶಕ ಸಿಂಪಡಿಸುತ್ತಾರೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸಿದ್ದ ಸುಳ್ಳು ವದಂತಿಗೆ ಹೆದರಿದ ಬಹಳಷ್ಟು ಜನ ತಮ್ಮ ಮನೆಯಿಂದ ಹೊರ ಬರಲು ಹೆದರಿದರು.
ಇಂದು ಪೊನ್ನಂಪೇಟೆಯ ಮಹಿಳಾ ಸಮಾಜದಲ್ಲಿ ನಡೆಯಬೇಕಿದ್ದ ತೊರೆಬೀದಿ ನಿವಾಸಿಯೊಬ್ಬರ ಪುತ್ರಿಯ ವಿವಾಹವನ್ನು ಹುಣಸೂರು ತಾಲೂಕಿನ ವರನ ಗ್ರಾಮದ ಮನೆಯಲ್ಲಿಯೇ ಸರಳವಾಗಿ ನೆರವೇರಿಸಲಾಯಿತು.