ಸೋಮವಾರಪೇಟೆ, ಮಾ.21: ವಿಶ್ವವನ್ನೇ ಆತಂಕಕ್ಕೆ ದೂಡಿರುವ ಕೊರೊನಾ ವೈರಸ್ ವ್ಯಾಪಿಸದಂತೆ ತಡೆಯಲು ಕ್ರೈಸ್ತ ಭಕ್ತಾದಿಗಳು ತಮ್ಮ ತಮ್ಮ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕೆಂದು ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್‍ನ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಮನವಿ ಮಾಡಿದ್ದಾರೆ.
ಕೊಡಗು ಜಿಲ್ಲಾ ಧರ್ಮಕೇಂದ್ರಗಳ ಗುರುಗಳಾದ ಮದಲೈ ಮುತ್ತು ಅವರು ಈಗಾಗಲೇ ಈ ಬಗ್ಗೆ ಭಕ್ತಾದಿಗಳಿಗೆ ಸೂಚನೆ ನೀಡಿದ್ದು, ಇದನ್ನು ಎಲ್ಲಾ ಧರ್ಮಕೇಂದ್ರಗಳ ಗುರುಗಳು ಮತ್ತು ಭಕ್ತಾದಿಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಡಿಸಿಲ್ವಾ ಅವರು ಮನವಿ ಮಾಡಿದ್ದಾರೆ.