ಮಡಿಕೇರಿ, ಮಾ. 21 : ಸರ್ವ ಜನರ ಆರೋಗ್ಯ ರಕ್ಷಣೆಗಾಗಿ ಮಾ.22 ರಂದು ಜನರಿಂದ ಜನರಿಗೋಸ್ಕರ ‘ಜನತಾ ಕಫ್ರ್ಯೂ’ ನಡೆಯುತ್ತಿದ್ದು, ಇದಕ್ಕೆ ಎಲ್ಲರ ಬೆಂಬಲದ ಅಗತ್ಯವಿದೆ. ಉತ್ತಮ ಉದ್ದೇಶಕ್ಕಾಗಿ ಕಫ್ರ್ಯೂ ಕರೆ ನೀಡಿದ್ದು, ಇದನ್ನು ಅರ್ಥ ಮಾಡಿಕೊಂಡು ಪ್ರಧಾನಮಂತ್ರಿಗಳ ಮನವಿಗೆ ಗೌರವ ನೀಡಬೇಕಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ.ರವಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗಡಿ ಕಾಯುವ ಸೈನಿಕರು ತಮ್ಮ ಜೀವನದ ಎಲ್ಲಾ ಒಳ್ಳೆಯ ಕ್ಷಣಗಳನ್ನು ತ್ಯಾಗ ಮಾಡಿ ನಮಗೆ ರಕ್ಷಣೆ ನೀಡುತ್ತಿದ್ದಾರೆ. ಇದೀಗ ನಮ್ಮ ಸರದಿ ಬಂದಿದ್ದು, ನಮಗಾಗಿ, ಮತ್ತೊಬ್ಬರಿಗಾಗಿ ಮತ್ತು ಇಡೀ ದೇಶಕ್ಕಾಗಿ ಕೇವಲ ಒಂದು ದಿನವನ್ನು “ಜನತಾ ಕಫ್ರ್ಯೂ”ಗಾಗಿ ಮೀಸಲಿಡೋಣ ಎಂದು ಮನವಿ ಮಾಡಿದ್ದಾರೆ.

ಇಡೀ ವಿಶ್ವವನ್ನೇ ತಲ್ಲಣಗೊಳಿಸಿ ಕ್ಷಣಕ್ಷಣಕ್ಕೂ ಸಾವನ್ನು ಆಸ್ವಾದಿಸುತ್ತಿರುವ ಮಹಾಮಾರಿ ಕೊರೋನಾ ವೈರಸ್ ವಿರುದ್ಧ ದೇಶ ರಾತ್ರಿ, ಹಗಲೆನ್ನದೆ ಹೋರಾಟ ನಡೆಸುತ್ತಿದೆ. ಈ ಭೀಕರ ಸೋಂಕಿನ ದಾಳಿ ಮಾನವÀ ಸಂಬಂಧಕ್ಕೆ ಮತ್ತು ಜೀವಕ್ಕಿರುವ ಬೆಲೆ ಎಷ್ಟು ಎನ್ನುವುದನ್ನು ತೋರಿಸಿಕೊಟ್ಟಿದೆ. ದೇಶದ ಜನರೆಲ್ಲ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರೀಯ ವಿಪತ್ತು ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.