ವೀರಾಜಪೇಟೆ, ಮಾ. 21: ಕಳೆದ ಜುಲೈ ತಿಂಗಳಿಂದ ಸೆಪ್ಟೆಂಬರ್‍ವರೆಗೆ ಬಿದ್ದ ಭಾರೀ ಮಳೆಯ ಹಿನ್ನೆಲೆಯಿಂದ ತತ್ತರಿಸಿಹೋಗಿದ್ದ ಇಲ್ಲಿನ ಎಲ್ಲ ವ್ಯವಹಾರಗಳು ಚೇತರಿಸುವ ಮೊದಲೇ ಈಗ 40 ದಿನಗಳಿಂದ ಪೀಡಿಸುತ್ತಿರುವ ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ಇಲ್ಲಿನ ಖಾಸಗಿ ಬಸ್ಸು ಮಾಲೀಕರು ಹಾಗೂ ಸಿಬ್ಬಂದಿಗಳು ಸಂಕಷ್ಟದಲ್ಲಿದ್ದು ಪರಿಸ್ಥಿತಿ ಮುಂದುವರೆದರೆ ಖಾಸಗಿ ಬಸ್ಸು ಅನೇಕ ಮಾರ್ಗಗಳನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸುವ ಸಾಧ್ಯತೆ ಕಂಡು ಬಂದಿದೆ.
ವೀರಾಜಪೇಟೆ ಖಾಸಗಿ ಬಸ್ಸು ನಿಲ್ದಾಣದಲ್ಲಿ ಸಾರಿಗೆ ಪ್ರಾದಿಕಾರದಿಂದ ಪ್ರಯಾಣಿಕರ ಅವಶ್ಯಕತೆಗೆ ತಕ್ಕಂತೆ ಪರವಾನಗಿ ಪಡೆದಿರುವ ಅನೇಕ ಬಸ್ಸುಗಳು ಸಂಚರಿಸುತ್ತಿದ್ದು ಈ ಬಸ್ಸುಗಳಲ್ಲಿ ಕನಿಷ್ಟ ಶೇಕಡ 40ರಷ್ಟು ಪ್ರಯಾಣಿಕರು ಸಂಚರಿಸಲೇಬೇಕು. ಇಲ್ಲದಿದ್ದರೆ ಖಾಸಗಿ ಬಸ್ಸು ಉದ್ಯಮ ನಷ್ಟದಲ್ಲಿಯೇ ಮುಂದುವರೆಯಲಿದೆ. ಈಗ ಕೆಲವು ದಿನಗಳಿಂದ ಕೊರೊನಾ ವೈರಸ್ ರೋಗ ಹರಡುವ ಭೀತಿಯಿಂದ ಯಾರೂ ಮನೆಯಿಂದ ಹೊರಗಿನ ಪ್ರವಾಸ ಕೈಗೊಳ್ಳುತ್ತಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ದೀರ್ಘ ಕಾಲದ ರಜೆ ನೀಡಲಾಗಿದೆ. ಗ್ರಾಮಾಂತರ ಪ್ರದೇಶದ ಜನರು ಕೊರೊನಾ ರೋಗಕ್ಕೆ ಹೆದರಿ ಪಟ್ಟಣ ಪ್ರದೇಶಗಳಿಗೂ ಬರುತ್ತಿರುವುದು ವಿರಳವಾಗಿದೆ. ಸರಕಾರ ಸಂತೆ ಸೇರಿದಂತೆ ಇನ್ನಿತರ ಎಲ್ಲ ವ್ಯವಹಾರಗಳಿಗೆ ನಿರ್ಬಂಧ ವಿಧಿಸಿರುವುದರಿಂದ ಗ್ರಾಮಾಂತರ ಪ್ರದೇಶದ ಜನ ಪ್ರಧಾನ ಪಟ್ಟಣಗಳ ಸಂಪರ್ಕ ಕಡಿದುಕೊಂಡಂತಾಗಿದ್ದು ಇದರಿಂದಲೂ ಖಾಸಗಿ ಬಸ್ಸು ಉದ್ಯಮಕ್ಕೆ ಹೊಡೆತ ಬಿದ್ದಂತಾಗಿದೆ.
ಖಾಸಗಿ ಬಸ್ಸು ಸಂಚರಿಸಿದರೂ, ಸಂಚರಿಸದಿದ್ದರೂ ಪ್ರಾದೇಶಿಕ ಸಾರಿಗೆ ಕಚೇರಿಯ ಮೂರು ತಿಂಗಳ ತೆರಿಗೆ ಸುಮಾರು ರೂ 50,000ವನ್ನು ಶಾಲಾ ವಿದ್ಯಾರ್ಥಿಗಳಿಗೆ ದೀರ್ಘ ಕಾಲದ ರಜೆ ನೀಡಲಾಗಿದೆ. ಗ್ರಾಮಾಂತರ ಪ್ರದೇಶದ ಜನರು ಕೊರೊನಾ ರೋಗಕ್ಕೆ ಹೆದರಿ ಪಟ್ಟಣ ಪ್ರದೇಶಗಳಿಗೂ ಬರುತ್ತಿರುವುದು ವಿರಳವಾಗಿದೆ. ಸರಕಾರ ಸಂತೆ ಸೇರಿದಂತೆ ಇನ್ನಿತರ ಎಲ್ಲ ವ್ಯವಹಾರಗಳಿಗೆ ನಿರ್ಬಂಧ ವಿಧಿಸಿರುವುದರಿಂದ ಗ್ರಾಮಾಂತರ ಪ್ರದೇಶದ ಜನ ಪ್ರಧಾನ ಪಟ್ಟಣಗಳ ಸಂಪರ್ಕ ಕಡಿದುಕೊಂಡಂತಾಗಿದ್ದು ಇದರಿಂದಲೂ ಖಾಸಗಿ ಬಸ್ಸು ಉದ್ಯಮಕ್ಕೆ ಹೊಡೆತ ಬಿದ್ದಂತಾಗಿದೆ.
ಖಾಸಗಿ ಬಸ್ಸು ಸಂಚರಿಸಿದರೂ, ಸಂಚರಿಸದಿದ್ದರೂ ಪ್ರಾದೇಶಿಕ ಸಾರಿಗೆ ಕಚೇರಿಯ ಮೂರು ತಿಂಗಳ ತೆರಿಗೆ ಸುಮಾರು ರೂ 50,000ವನ್ನು ಸಂಚಾರ ವಿರಳವಾಗಿದೆ. ಈ ಹಿಂದಿನಂತೆಯೇ ಈಗಿನ ಖಾಸಗಿ ಬಸ್ಸು ಉದ್ಯಮದಲ್ಲಿ ಲಾಭವನ್ನು ಸರಿದೂಗಿಸಬೇಕಾದರೆ ಕಷ್ಟ ಸಾಧ್ಯವಾಗಿದೆ. ಖಾಸಗಿ ಬಸ್ಸು ಉದ್ಯಮ ನಷ್ಟದಲ್ಲಿ ಮುಂದುವರಿದರೆ ಬಸ್ಸು ಕಾರ್ಮಿಕರು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.
ವೀರಾಜಪೇಟೆ ಬಸ್ಸು ನಿಲ್ದಾಣವನ್ನು ಸಂಪರ್ಕಿಸುವ ಸುಮಾರು 90 ಬಸ್ಸು ಮಾರ್ಗಗಳ ಪೈಕಿ ಕೊರೊನಾ ವೈರಸ್ ಪ್ರಯುಕ್ತ ಪ್ರಯಾಣಿಕರ ಸಂಖ್ಯೆ ಕ್ಷೀಣವಾಗಿದ್ದು ರೋಗ ಹರಡದಂತೆ ಬಸ್ಸು ಕಾರ್ಮಿಕರು ಎಚ್ಚರ ಹಾಗೂ ಅವರಿಗೆ ರಕ್ಷಣೆ ಒದಗಿಸಬೇಕಾಗಿದೆ.
ಈಗಾಗಲೇ ಸುಮಾರು 20 ಖಾಸಗಿ ಬಸ್ಸುಗಳ ಮಾರ್ಗಗಳನ್ನು ಮಾಲೀಕರು ಸ್ವಯಂಪ್ರೇರಿತರಾಗಿ ಸ್ಥಗಿತಗೊಳಿಸಿದ್ದಾರೆ. ಕೊರೊನಾ ರೋಗದ ಭೀತಿಯ ಪ್ರಯುಕ್ತ ಮಡಿಕೇರಿ ಪ್ರಾದೇಶಿಕ ಸಾರಿಗೆ ಸಂಸ್ಥೆ ಖಾಸಗಿ ಬಸ್ಸುಗಳ ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸಂದರ್ಭಕ್ಕೆ ತಕ್ಕಂತೆ ಖಾಸಗಿ ಬಸ್ಸುಗಳಿಗೆ ತೆರಿಗೆ ಪಾವತಿಯಲ್ಲಿ ರಿಯಾಯಿತಿ ತೋರಿಸಬೇಕಾಗಿದೆ ಎನ್ನುತ್ತಾರೆ.-ಡಿ.ಎಂ. ರಾಜ್‍ಕುಮಾರ್