ಸಿದ್ದಾಪುರ, ಮಾ. 21: ನೆಲ್ಲಿಹುದಿಕೇರಿ ಎಸ್‍ಕೆಎಸ್‍ಎಸ್‍ಎಫ್ ಸಂಘಟನೆ ವತಿಯಿಂದ ನೆಲ್ಲಿಹುದಿಕೇರಿ ಪಟ್ಟಣದಲ್ಲಿ ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಕೈತೊಳೆಯಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಎಸ್‍ಎನ್‍ಡಿಪಿ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಉದ್ಘಾಟಿಸಿದರು. ಎಸ್‍ಕೆಎಸ್ ಎಸ್‍ಎಫ್ ಜಿಲ್ಲಾ ಸಂಘಟನೆಯ ಉಪಾಧ್ಯಕ್ಷ ಕೆ ಎಂ ಬಶೀರ್ ಗ್ರಾಮ ಪಂಚಾಯಿತಿ ಸದಸ್ಯರಾದ ಹಕ್ಕಿಂ ಯೋಗೇಶ್ ಸಂಘಟನೆಯ ಪ್ರಮುಖ ಅಕ್ಬರ್ ಅಲಿ ಸಂಶುದ್ದೀನ್ ನೆಲ್ಲಿಹುದಿಕೇರಿ ಮಸೀದಿ ಉಪಾಧ್ಯಕ್ಷ ಕೋಯ ಇನ್ನಿತರರು ಇದ್ದರು.