ಗುಡ್ಡೆಹೊಸೂರು, ಮಾ. 20: ಗುಡ್ಡೆಹೊಸೂರು ಸಮೀಪದ ಸುಣ್ಣದಕೆರೆ ಗ್ರಾಮದಲ್ಲಿ ತಾ. 25 ಮತ್ತು 26 ರಂದು ನಡೆಯಲಿದ್ದ ಶ್ರೀ ಚಾಮುಂಡೇಶ್ವರಿ ಪೂಜೆಯನ್ನು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮತ್ತು ಜಿಲ್ಲೆಯಲ್ಲಿ 144 ಸೆಕ್ಷನ್ ಇರುವ ಕಾರಣ ಮುಂದೂಡಲಾಗಿದೆ. ಅಲ್ಲದೆ ಗುಡ್ಡೆಹೊಸೂರಿನ

ಹಿತರಕ್ಷಣಾ ಯೂತ್‍ಕ್ಲಬ್ ವತಿಯಿಂದ ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟವು ತಾ. 28 ಮತ್ತು 29 ರಂದು ನಡೆಯಬೇಕಿತ್ತು. ಈ ಪಂದ್ಯಾಟವನ್ನು ಮುಂದೂಡಲಾಗಿದೆ ಎಂದು ಸಮಿತಿಯ ಅಧ್ಯಕ್ಷರುಗಳು ತಿಳಿಸಿದ್ದಾರೆ.