ಮಡಿಕೇರಿ, ಮಾ. 20: ಕೂಡಿಗೆ ಜರ್ಸಿ ತಳಿ ಸಂವರ್ಧನಾ ಕ್ಷೇತ್ರದಲ್ಲಿ ತಾ. 26 ರಂದು ಬೆಳಿಗ್ಗೆ 11 ಗಂಟೆಗೆ ಸಾಕಾಣಿಕೆಗೆ ಯೋಗ್ಯವಲ್ಲದ ಜಾನುವಾರುಗಳನ್ನು ಉಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ಗೋಶಾಲೆ/ ಸ್ವಯಂಸೇವಾ ಸಂಘಗಳು/ ಕ್ಷೇಮಾಭಿವೃದ್ಧಿ ಸಂಸ್ಥೆಗಳಿಗೆ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. ಹರಾಜಿನಲ್ಲಿ ಗೋಶಾಲೆಗಳು ಭಾಗವಹಿಸಿ ಬಿಡ್ಡು ಮಾಡಬಹುದಾಗಿದೆ.
ಹರಾಜಿನ ನಿಬಂಧನೆಗಳು: ಹರಾಜಿನಲ್ಲಿ ಭಾಗವಹಿಸುವ ಗೋಶಾಲೆಗಳು/ ಸ್ವಯಂಸೇವಾ ಸಂಘಗಳು/ ಕ್ಷೇಮಾಭಿವೃದ್ಧಿ ಸಂಸ್ಥೆಗಳ ರಿಜಿಸ್ಟ್ರೇಶನ್ ಪತ್ರದ ದೃಢೀಕೃತ ಪ್ರತಿಯನ್ನು ಕಡ್ಡಾಯವಾಗಿ ಹರಾಜಿನ ಸಂದರ್ಭದಲ್ಲಿ ಸಲ್ಲಿಸಬೇಕು. ಹರಾಜಿನಲ್ಲಿ ಭಾಗವಹಿಸುವ ಗೋಶಾಲೆಗಳು, ಸ್ವಯಂ ಸೇವಾ ಸಂಘಗಳು, ಕ್ಷೇಮಾಭಿವೃದ್ಧಿ ಸಂಸ್ಥೆಗಳು ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವ ಜಾನುವಾರುಗಳ ಸಂಖ್ಯೆ ಮತ್ತು ಮೂಲಭೂತ ಸೌಕರ್ಯಗಳ ಲಭ್ಯತೆಯ ಬಗ್ಗೆ ದೃಢೀಕರಣ ಪತ್ರ ಪಡೆದು ಹರಾಜಿನ ಸಂದರ್ಭದಲ್ಲಿ ಹಾಜರಿಪಡಿಸಬೇಕು ಎಂದು ಉಪ ನಿರ್ದೇಶಕ ತಮ್ಮಯ್ಯ ತಿಳಿಸಿದ್ದಾರೆ.