ಮಡಿಕೇರಿ, ಮಾ. 20: 2020 ರಲ್ಲಿ ಜಪಾನ್‍ನ ಟೋಕಿಯೋದಲ್ಲಿ ಜರುಗಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಬಾಕ್ಸಿಂಗ್ ತಂಡದ ಆಯ್ಕೆ ಅಂತಿಮಗೊಂಡಿದೆ.

ಪುರುಷರ ವಿಭಾಗದಲ್ಲಿ 52 ಕೆ.ಜಿ. ವಿಭಾಗದಲ್ಲಿ ಅಮಿತ್, 63 ಕೆ.ಜಿ. ವಿಭಾಗದಲ್ಲಿ ಮನೀಷ್ ಕೌಶಿಕ್, 69 ಕೆ.ಜಿ. ವಿಭಾಗದಲ್ಲಿ ವಿಕಾಸ್ ಕೃಷ್ಣ, ಆಶಿಶ್ ಕುಮಾರ್ 75 ಕೆ.ಜಿ. ಹಾಗೂ ಸತೀಶ್‍ಕುಮಾರ್ 91 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಮಹಿಳಾ ವಿಭಾಗದಲ್ಲಿ ಮೇರಿಕೋಮ್ 51 ಕೆ.ಜಿ., ಸಿಮರ್‍ಜಿತ್ ಕೌರ್ 60 ಕೆ.ಜಿ., ಲೋವಿಲಿನಾ ಬಿ. 69 ಕೆ.ಜಿ. ಹಾಗೂ 75 ಕೆ.ಜಿ. ವಿಭಾಗದಲ್ಲಿ ಪೂಜಾರಾಣಿ ಆಯ್ಕೆಯಾಗಿದ್ದಾರೆ. ಭಾರತೀಯ ತಂಡದ ಮುಖ್ಯ ಕೋಚ್ ಆಗಿ ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ಕೊಡಗಿನವರಾದ ಚೇನಂಡ ವಿಶು ಕುಟ್ಟಪ್ಪ ಮುಂದುವರಿಯಲಿದ್ದಾರೆ.