ಮಡಿಕೇರಿ, ಮಾ. 20: ಕೊರೊನಾ ವೈರಾಣು ಹಬ್ಬದಂತೆ ತಡೆಯುವ ನಿಟ್ಟಿನಲ್ಲಿ ಮಡಿಕೇರಿ ನ್ಯಾಯಾಲಯಕ್ಕೆ ಮಾರ್ಚ್ 31 ರವರೆಗೆ ಕಕ್ಷಿದಾದರರು ಬಾರದಿರಿ ಎಂದು ಮಡಿಕೇರಿ ವಕೀಲರ ಸಂಘ ಮನವಿ ಮಾಡಿದೆ. ಸುಪ್ರಿಂಕೋರ್ಟ್ ಆದೇಶದನ್ವಯ ಮಾರ್ಚ್ 31 ರವೆರೆಗೆ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಯಾರೇ ಕಕ್ಷಿದಾದಾರರು ಮಡಿಕೇರಿಯಲ್ಲಿನ ನ್ಯಾಯಾಲಯಕ್ಕೆ ಬರಬಾರದು ಎಂದು ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಕವನ್ ಮನವಿ ಮಾಡಿದ್ದಾರೆ. ಕಕ್ಷಿದಾರರು ಅವರವರ ಮನೆಯಲ್ಲಿಯೇ ಇದ್ದು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನ್ಯಾಯಾಲಯಕ್ಕೆ ಬಾರದೇ ಹೋದಲ್ಲಿ ಸಮಸ್ಯೆಯಾದೀತು ಎಂಬ ಅಭಿಪ್ರಾಯ ಈಗಿನ ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭ ಕಕ್ಷಿದಾರರಿಗೆ ಅನಗತ್ಯ ಎಂದೂ ಕವನ್ ಹೇಳಿದ್ದಾರೆ. ಮಡಿಕೇರಿ ವಕೀಲರ ಸಂಘದ ಕಾರ್ಯದರ್ಶಿ ಡಿ.ಜಿ. ಕಿಶೋರ್ ಕುಮಾರ್ ಮನವಿ ಮಾಡಿ, ಭಾನುವಾರದ ಜನತಾ ಕಫ್ರ್ಯೂವಿಗೆ ಮಡಿಕೇರಿ ವಕೀಲರ ಸಂಘÀ ಬೆಂಬಲ ನೀಡಿದ್ದು ಪ್ರತೀಯೋರ್ವರೂ ಅಂದು ಮನೆಯಲ್ಲಿಯೇ ಇದ್ದು, ಈ ಮೂಲಕ ಸಾಮೂಹಿಕವಾಗಿ ಮಾರಕ ಕೊರೊನಾ ವೈರಸ್ ಹಬ್ಬುವಿಕೆ ತಪ್ಪಿಸಿ ಎಂದು ಕೋರಿದ್ದಾರೆ. ದೂರವಾಣಿ ಮೂಲಕ ವಕೀಲರೊಂದಿಗೆ ತಮ್ಮ ಪ್ರಕರಣ ಸಂಬಂಧಿತ ಚರ್ಚಿಸಿ. ವಕೀಲರು ಸೂಚಿಸಿದರೆ ಮಾತ್ರ ನ್ಯಾಯಾಲಯಕ್ಕೆ ಬನ್ನಿ ಎಂದು ವಕೀಲರ ಸಂಘದ ಉಪಾಧ್ಯಕ್ಷ ಪಿ.ಯು ಪ್ರೀತಮ್ ಮನವಿ ಮಾಡಿದ್ದಾರೆ.