ಮಡಿಕೇರಿ ಮಾ.19 : ಇತ್ತೀಚೆಗೆ ಮಡಿಕೇರಿ ನಗರದಲ್ಲಿ ಕೆಲವೆಡೆ ಹೊಸದಾಗಿ ರಸ್ತೆ ಉಬ್ಬುಗಳನ್ನು ಹಾಕಲಾಗಿದ್ದು, ಇದರ ಬಗ್ಗೆ ಮಾಹಿತಿ ಇಲ್ಲದೆ ಹಲವು ವಾಹನಗಳು ಅಪಾಯಕ್ಕೆ ಸಿಲುಕಿದ್ದವು.

ಇದನ್ನು ಮನಗಂಡ ಮಡಿಕೇರಿ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಕೊಡಗು ಜಿಲ್ಲಾ ಪೆÇಲೀಸ್ ಇಲಾಖೆಯ ಮಾರ್ಗದರ್ಶನದಲ್ಲಿ ರಸ್ತೆ ಉಬ್ಬುಗಳಿಗೆ ಬಿಳಿ ಬಣ್ಣವನ್ನು ಬಳಿದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. ದಾನಿ ಆರಾಧನಾ ಹಾರ್ಡ್‍ವೇರ್ಸ್ ಮಾಲೀಕ ಗಿರೀಶ್ ಅವರು ಸಹಕಾರ ನೀಡಿದರು.

ನಗರದ ಮಾರುಕಟ್ಟೆ ರಸ್ತೆ, ರಾಣಿಪೇಟೆ ರಸ್ತೆ, ವಿಜಯ ವಿನಾಯಕ ದೇವಸ್ಥಾನದ ಮುಂಭಾಗ, ಆರ್ಮಿ ಕ್ಯಾಂಟೀನ್ ಬಳಿ, ಐಟಿಐ ಜಂಕ್ಷನ್, ಫೀ.ಮಾ.ಕಾರ್ಯಪ್ಪ ಕಾಲೇಜು ಬಳಿ ರಸ್ತೆ ಉಬ್ಬುಗಳಿಗೆ ಬಿಳಿ ಬಣ್ಣ ಬಳಿದು ವಾಹನ ಚಾಲಕರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

ಮಡಿಕೇರಿ ರಕ್ಷಣಾ ವೇದಿಕೆಯ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ, ಖಜಾಂಚಿ ಉಮೇಶ್ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಶೆಟ್ಟಿ, ಪ್ರಮುಖರಾದ ಪಾಪು ರವಿ, ಬೊಳ್ಯಂಡ ಗಣೇಶ್, ಸತ್ಯ, ಬಿ.ಎಂ.ಹರೀಶ್, ಪ್ರಮೀಳ, ಆಟೋ ಚಾಲಕರ ಸಂಘದ ಸುಲೇಮಾನ್ ಮತ್ತಿತರರು ಬಣ್ಣ ಬಳಿಯುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.