ನಾಪೆÇೀಕ್ಲು, ಮಾ. 19: ಇತಿಹಾಸ ಪ್ರಸಿದ್ಧ ನಾಪೆÇೀಕ್ಲು ಶ್ರೀ ಭಗವತಿ ದೇವಳದಲ್ಲಿ ಶ್ರೀ ಭದ್ರಕಾಳಿ ದೇವರ ಕೋಲವು ಶೃದ್ಧಾಭಕ್ತಿಯಿಂದ ಜರುಗಿತು. ದೇವಳದಲ್ಲಿ ತಕ್ಕರ ಮನೆಯಿಂದ ಭಂಡಾರದ ಪೆಟ್ಟಿಗೆಯನ್ನು ಸಾಂಪ್ರದಾಯಿಕ ವಾಗಿ ತರಲಾಯಿತು. ನಂತರ ಅಂದಿ ಬೊಳಕ್ (ದೀಪಾರಾಧನೆ) ನಡೆಯಿತು.
ದೇವಳದ ಮುಂಭಾಗದಲ್ಲಿ ಕೊಡಗಿನ ಸಾಂಪ್ರದಾಯಿಕ ಬೊಳ್ಕಾಟ್ ಕಾರ್ಯಕ್ರಮ ಜರುಗಿತು. ಉಗ್ರಮೂರ್ತಿ ಶ್ರೀ ಭದ್ರಕಾಳಿ ದೇವರ ಕೋಲ, ಬಲಿ ಕಾರ್ಯಕ್ರಮ, ದೇವರ ಮೂರ್ತಿ ಹೊತ್ತು ಊರ ಪ್ರದಕ್ಷಿಣೆಯೊಂದಿಗೆ ಹಬ್ಬ ಸಮಾರೋಪವಾಯಿತು.