ಸಿನಿಮಾ ಮಂದಿರಗಳು, ಮಾಲ್‍ಗಳು, ನಾಟಕಗಳು, ರಂಗಮಂದಿರಗಳು, ಪಬ್‍ಗಳು, ನೈಟ್ ಕ್ಲಬ್‍ಗಳು, ವಸ್ತು ಪ್ರದರ್ಶನಗಳು, ಸಂಗೀತ ಹಬ್ಬಗಳು, ಕ್ಲಬ್‍ಗಳು, ಮ್ಯಾರಥಾನ್, ಕ್ರೀಡಾಂಗಣಗಳು ಹಾಗೂ ಅಧಿಕ ಜನ ಸೇರುವಂತಹ ಮದುವೆ ಕಾರ್ಯಕ್ರಮಗಳಿಗೆ ನಿಷೇಧ.ಧಾರ್ಮಿಕ ಕಾರ್ಯಕ್ರಮಗಳಿಗೆ ಕಡಿಮೆ ಸಂಖ್ಯೆಯ ಜನರು ಮಾತ್ರ ಭಾಗವಹಿಸಬಹುದು. ಹೆಚ್ಚು ಜನರು ಬಳಸುವ ಸ್ವಿಮ್ಮಿಂಗ್ ಪೂಲ್, ಜಿಮ್ ಮುಂತಾದವುಗಳನ್ನು ಮುಚ್ಚುವುದು. ಜಿಲ್ಲೆಯಲ್ಲಿ ಎಲ್ಲ ಅಂಗನವಾಡಿ ಮಕ್ಕಳಿಗೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 31.3.2020ರ ಬಳಿಕವೂ ಮುಂದಿನ ಒಂದು ವಾರದ ಮಟ್ಟಿಗೆ ಪರೀಕ್ಷೆಗಳನ್ನು ಹೊರತುಪಡಿಸಿ ರಜೆ ನೀಡಲಾಗಿದೆ. ಶಾಲಾ-ಕಾಲೇಜುಗಳು, ವಿಶ್ವವಿದ್ಯಾನಿಲಯ, ತರಬೇತಿ ಕೇಂದ್ರಗಳನ್ನು ಮುಚ್ಚುವುದು. ಐಟಿಬಿಟಿ ಸಂಸ್ಥೆಯ ಸಿಬ್ಬಂದಿಗಳು ಮನೆಯಿಂದಲೇ ಕಾರ್ಯನಿರ್ವಹಿಸುವುದು.ಖಾಸಗಿ ವೈದ್ಯರುಗಳು ಖಾಸಗಿ ಆಸ್ಪತ್ರೆಗಳು ಗೋಷ್ಠಿಯ ಪ್ರಮುಖಾಂಶಗಳು(ಮೊದಲ ಪುಟದಿಂದ) ಹಾಗೂ ಖಾಸಗಿ ನರ್ಸಿಂಗ್ ಹೋಂಗಳು, ವಿದೇಶದಿಂದ ಬಂದು ರೋಗಲಕ್ಷಣಗಳಿರುವ ರೋಗಿಗಳು ಕಂಡುಬಂದಲ್ಲಿ ತಡಮಾಡದೆ ಜಿಲ್ಲಾ ಆರೋಗ್ಯಾಧಿಕಾರಿಗೆ ಫೋನ್, ಫ್ಯಾಕ್ಸ್, ವಾಟ್ಸ್‍ಪ್ ಅಥವಾ 104 ಸಹಾಯವಾಣಿಗೆ ತಕ್ಷಣ ತಿಳಿಸಬೇಕು.
* ಜಿಲ್ಲೆಯಾದ್ಯಂತ ಸಂತೆ-ಜಾತ್ರೆಗಳನ್ನು ತಾ. 31ರ ವರೆಗೆ ನಿಷೇಧಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ತಾ. 31ರ ವರೆಗೆ ಜಿಲ್ಲೆಯ ಎಲ್ಲ ಇಲಾಖೆಗಳ ಅಧೀನಕ್ಕೆ ಒಳಪಡುವ ಎಲ್ಲ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಮತ್ತು ಸಾರ್ವಜನಿಕರ ಭೇಟಿ, ವೀಕ್ಷಣೆ ನಿಷೇಧಿಸಲಾಗಿದೆ.
* ಆರೋಗ್ಯದ ಹಿತದೃಷ್ಟಿಯಿಂದ ಸರಕಾರಿ ಇಲಾಖೆಗಳ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಕಚೇರಿಗಳಿಗೆ ಬರುವ ಬದಲು ಜಿಲ್ಲಾಡಳಿತ ಪ್ರಕಟಿಸುವ ಇ-ಮೇಲ್, ದೂರವಾಣಿ, ವಾಟ್ಸ್‍ಪ್‍ಗಳ ಮೂಲಕ ವ್ಯವಹರಿಸುವ ಮೂಲಕ ಸದ್ಯದ ಮಟ್ಟಿಗೆ ಸಹಕರಿಸಬೇಕು.
* ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ತಾ. 20 ರಂದು (ಇಂದು) ಧಾರ್ಮಿಕ ಮುಖಂಡರ ಸಭೆ
* ಹಕ್ಕಿಜ್ವರ, ಕೋಳಿಗಳ ಖರೀದಿಯನ್ನು ಮೈಸೂರು ಹಾಗೂ ಕೇರಳ ಗಡಿ ಪ್ರದೇಶಗಳಿಂದಲೇ ಜಿಲ್ಲೆಗೆ ಬರದಂತೆ ನಿಯಂತ್ರಿಸಲಾಗಿದೆ.