ಮಡಿಕೇರಿ, ಮಾ. 19: ಇದುವರೆಗೂ ಜಿಲ್ಲೆಯಲ್ಲಿ ಕೊರೊನಾ ಸೋಂಕು ಶಂಕಿತರ ಬಗ್ಗೆ ಮಾತ್ರ ಆತಂಕವಿದ್ದುದು ಇಂದು ಓರ್ವ ವ್ಯಕ್ತಿಗೆ ಸೋಂಕು ದೃಢಪಟ್ಟು ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಆ ವ್ಯಕ್ತಿಗೆ ತಗುಲಿದ ಸೋಂಕಿನ ಬಳಿಕ ಜಿಲ್ಲೆಯಲ್ಲಿ ಹಲವೆಡೆ ಆತ ತೆರಳಿರುವುದು ಈಗಷ್ಟೇ ಗೊತ್ತಾಗಿದ್ದು, ಜಿಲ್ಲಾಡಳಿತ ಇದರ ಜಾಡು ಹಿಡಿದು ತಪಾಸಣೆಗೆ ಮುನ್ನುಗ್ಗಿದೆ. ಮುಖ್ಯವಾಗಿ ವ್ಯಕ್ತಿಯ ಆವಾಸ ಸ್ಥಾನವಾದ ಕೊಂಡಂಗೇರಿ ವಿಭಾಗದಲ್ಲಿ ಎಲ್ಲ ವಹಿವಾಟುಗಳು ಸ್ಥಗಿತಗೊಂಡಿದ್ದು, ಈ ಪ್ರದೇಶಕ್ಕೆ ಬೇರೆ ಕಡೆಯಿಂದ ವಾಹನ ಮತ್ತು ಜನಗಳ ಪ್ರವೇಶಕ್ಕೆ ನಿರ್ಬಂಧ ಹೇರಿ ಬಂದ್ ಮಾಡಲಾಗಿದೆ.ಈ ನಡುವೆ ಜಿಲ್ಲೆಯಲ್ಲಿ ಸೆಕ್ಷನ್ 144/3ನ್ನು ಜಾರಿಗೊಳಿಸಿರುವ ಜಿಲ್ಲಾಧಿಕಾರಿಯವರು ತಾ. 31ರ ವರೆಗೆ ಹೋಂಸ್ಟೇ, ರೆಸಾರ್ಟ್ಗಳು, ವಸತಿ ಗೃಹಗಳು ತಕ್ಷಣದಿಂದ ಪ್ರವಾಸಿಗರನ್ನು ಅಥವಾ ಸಾರ್ವಜನಿಕರನ್ನು ತಂಗಲು ಅವಕಾಶ ನೀಡದೆ ಬುಕ್ಕಿಂಗ್ಗಳನ್ನು ಸ್ಥಗಿತಗೊಳಿಸುವಂತೆ ನಿರ್ದೇಶಿಸಿದ್ದಾರೆ. ಗೊತ್ತಿಲ್ಲದೆ ಕೆಲವು ಪ್ರವಾಸಿಗರು ಬಂದರೆ ಅಂತವರಿಗೆ ಪ್ರವಾಸೋದ್ಯಮ ಇಲಾಖಾ ಉಪನಿರ್ದೇಶಕರು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ವಿವರ: ಕೊಂಡಂಗೇರಿ ಸನಿಹದ ಕುತ್ತಿಮೊಟ್ಟೆಯ 35 ವರ್ಷದ ನಿವಾಸಿಯೊಬ್ಬರು ತಾ. 15 ರಂದು ಇಂಡಿಗೋ ಫ್ಲೈಟ್ ನಂಬರ್ 6ಇ96 ಮೂಲಕ ದುಬೈನಿಂದ ಹೊರಟು ಸಂಜೆ 4.15ಕ್ಕೆ ಬೆಂಗಳೂರು ತಲುಪಿದ್ದಾರೆ. ಬಳಿಕ ಅವರು ನಂ. ಕೆಎ 19 ಎಫ್ 3170ರ ಕೆಎಸ್ಆರ್ಟಿಸಿ ರಾಜಹಂಸ ಬಸ್ನಲ್ಲಿ ಬೆಂಗಳೂರಿನ ಸ್ಯಾಟ್ಲೈಟ್ ಬಸ್ ನಿಲ್ದಾಣದಿಂದ ಹತ್ತಿದ್ದರು. ರಾತ್ರಿ 11.33ಕ್ಕೆ ಅವರು ಮೂರ್ನಾಡು ತಲಪಿದರು. ಬಳಿಕ ಆಟೋವೊಂದರಲ್ಲಿ ತಮ್ಮ ಮನೆಗೆ ತೆರಳಿದರು. ತಾ. 16 ರಂದು ಅಲ್ಲಿಯೆ ತಂಗಿದ್ದರು. ತಾ. 17 ರಂದು ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿದ್ದು, (ಮೊದಲ ಪುಟದಿಂದ) ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಅವರ ನಿರ್ದೇಶನದ ಮೇರೆಗೆ ಜಿಲ್ಲಾಸ್ಪತ್ರೆಗೆ ಕರೆತಂದು ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆಗೆ ಸೇರಿಸಲಾಯಿತು. ಅಲ್ಲದೆ ಬೆಂಗಳೂರಿನ ಲ್ಯಾಬ್ಗೆ ರಕ್ತ ಪರೀಕ್ಷೆಗೆ ಕಳುಹಿಸಲಾಗಿದ್ದು, ಇಂದು ದೊರೆತ ವರದಿಯನ್ವಯ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಅತೀ ಸೂಕ್ಷ್ಮ-ಸೂಕ್ಷ್ಮ ವಲಯ
ಕುತ್ತಿಮೊಟ್ಟೆಯಲ್ಲಿ 75 ಕುಟುಂಬಗಳಿವೆ. ಸೋಂಕು ಪೀಡಿತ ವ್ಯಕ್ತಿಯ ಮನೆಯು ಅಲ್ಲಿದೆ. ಇದೀಗ ಇಡೀ ಗ್ರಾಮವನ್ನು ಅತೀ ಸೂಕ್ಷ್ಮ ಪ್ರದೇಶವೆಂದು ಘೋಷಿಸಲಾಗಿದೆ. ಯಾವುದೇ ಅಂಗಡಿ ಮುಂಗಟ್ಟುಗಳಾಗಲಿ, ವಹಿವಾಟುಗಳಾಗಲಿ ಇನ್ನು 14 ದಿನಗಳ ಕಾಲ ಈ ಪ್ರದೇಶದಲ್ಲಿ ಸ್ಥಗಿತಗೊಳಿಸಲಾಗುತ್ತದೆ. ಈ ಕುಟುಂಬಗಳಿಗೆ ಜಿಲ್ಲಾಡಳಿತದ ಮೂಲಕವೇ ಆಹಾರ, ನೀರು ಒದಗಿಸಲಾಗುವುದು. ಅಲ್ಲಿ ನೆಲೆಗೊಂಡಿರುವ 306 ಮಂದಿ ನಿವಾಸಿಗಳು ಮನೆಯಿಂದ ಹೊರಗೆ ಹೋಗುವಂತೆಯೆ ಇಲ್ಲ. ಸುಮಾರು 500 ಮೀಟರ್ವರೆಗೆ ಈ ನಿಯಂತ್ರಣ ಜಾರಿಯಲ್ಲಿರುತ್ತದೆ. ಉಳಿದಂತೆ ಕೊಂಡಂಗೇರಿ ಪ್ರದೇಶದಲ್ಲಿ ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿ ಸೂಕ್ಷ್ಮ ಪ್ರದೇಶವೆಂದು ಘೋಷಿಸಲಾಗಿದ್ದು, ಇಲ್ಲಿ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೆ ಎಲ್ಲ ವಹಿವಾಟುಗಳನ್ನು ನಿಷೇಧಿಸಲಾಗಿದೆ.
ಇಂದು ಸಿದ್ದಾಪುರ ಎಸ್ಐ ಬೋಜಪ್ಪ ಹಾಗೂ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಡಿಕೇರಿಯಿಂದ ಕೊಂಡಂಗೇರಿ ಹಾಗೂ ವೀರಾಜಪೇಟೆಯಿಂದ ಕೊಂಡಂಗೇರಿಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಕಾರ್ಯೋನ್ಮುಖರಾದರು. ಇದೀಗ ಕೊಂಡಂಗೇರಿ ಒಂದು ದ್ವೀಪದಂತೆ ಪರಿಗಣಿತವಾಗಿದೆ ಎಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
ವಹಿವಾಟುಗಳಾಗಲಿ ಇನ್ನು 14 ದಿನಗಳ ಕಾಲ ಈ ಪ್ರದೇಶದಲ್ಲಿ ಸ್ಥಗಿತಗೊಳಿಸಲಾಗುತ್ತದೆ. ಈ ಕುಟುಂಬಗಳಿಗೆ ಜಿಲ್ಲಾಡಳಿತದ ಮೂಲಕವೇ ಆಹಾರ, ನೀರು ಒದಗಿಸಲಾಗುವುದು. ಅಲ್ಲಿ ನೆಲೆಗೊಂಡಿರುವ 306 ಮಂದಿ ನಿವಾಸಿಗಳು ಮನೆಯಿಂದ ಹೊರಗೆ ಹೋಗುವಂತೆಯೆ ಇಲ್ಲ. ಸುಮಾರು 500 ಮೀಟರ್ವರೆಗೆ ಈ ನಿಯಂತ್ರಣ ಜಾರಿಯಲ್ಲಿರುತ್ತದೆ. ಉಳಿದಂತೆ ಕೊಂಡಂಗೇರಿ ಪ್ರದೇಶದಲ್ಲಿ ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿ ಸೂಕ್ಷ್ಮ ಪ್ರದೇಶವೆಂದು ಘೋಷಿಸಲಾಗಿದ್ದು, ಇಲ್ಲಿ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೆ ಎಲ್ಲ ವಹಿವಾಟುಗಳನ್ನು ನಿಷೇಧಿಸಲಾಗಿದೆ.
ಇಂದು ಸಿದ್ದಾಪುರ ಎಸ್ಐ ಬೋಜಪ್ಪ ಹಾಗೂ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಡಿಕೇರಿಯಿಂದ ಕೊಂಡಂಗೇರಿ ಹಾಗೂ ವೀರಾಜಪೇಟೆಯಿಂದ ಕೊಂಡಂಗೇರಿಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಕಾರ್ಯೋನ್ಮುಖರಾದರು. ಇದೀಗ ಕೊಂಡಂಗೇರಿ ಒಂದು ದ್ವೀಪದಂತೆ ಪರಿಗಣಿತವಾಗಿದೆ ಎಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಹೊಂದಬೇಕಿದ್ದು, ಸಿಬ್ಬಂದಿಗಳು ಗೈರು ಹಾಜರಾಗದೆ ಕಾರ್ಯನಿರ್ವಹಿಸಬೇಕು. ಗರ್ಭಿಣಿ ಮತ್ತು ಅನಾರೋಗ್ಯಕ್ಕೊಳಗಾದವರಿಗೆ ನಿರ್ಬಂಧವನ್ನು ಸಡಿಲಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
185 ಮಂದಿ ಬಗ್ಗೆ ನಿಗಾ
ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆಯ ಪ್ರತ್ಯೇಕ ಕೊಠಡಿಗಳಲ್ಲಿ ಈ ಹಿಂದೆ 5 ಮಂದಿ ಇದ್ದು, ಆ ಪೈಕಿ ಒಬ್ಬರಿಗೆ ‘ನೆಗೆಟಿವ್’ ವರದಿ ಬಂದು ಅವರನ್ನು ಮನೆಗೆ ಕಳುಹಿಸಿ 14 ದಿನಗಳ ಕಾಲ ನಿಗಾವಹಿಸಲಾಗಿದೆ. ಉಳಿದ ನಾಲ್ವರ ಪೈಕಿ ಇಂದು ಒಬ್ಬರಿಗೆ ‘ಪಾಸಿಟಿವ್’ ದೃಢಪಟ್ಟಿದೆ. ಉಳಿದಂತೆ ಮೂವರ ವರದಿ ಬರಬೇಕಿದೆ.
ಜಿಲ್ಲೆಯಲ್ಲಿ 100 ಬೆಡ್ನ ‘ಐಸೋಲೇಟೆಡ್’ ವಾರ್ಡ್ಗಳು, 150 ಬೆಡ್ ‘ಕೋರೆಂಟಲ್’ ವಾರ್ಡ್ಗಳು ಕೊಡಗು ಮೆಡಿಕಲ್ ಕಾಲೇಜಿನಲ್ಲಿ ಸಿದ್ಧಗೊಂಡಿದ್ದು, ಜಿಲ್ಲಾಡಳಿತವು ಕೊರೊನಾ ನಿಯಂತ್ರಣಕ್ಕೆ ಸರ್ವ ರೀತಿಯಿಂದಲೂ ಸಜ್ಜಾಗಿದೆ. ಕೆಲವು ದಿನಗಳ ಕಾಲ ಕೊಡಗಿನ ಜನರು ಜಿಲ್ಲಾಡಳಿತದ ಕ್ರಮಕ್ಕೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಜಿಲ್ಲೆಯಲ್ಲಿ ಇನ್ನು 180 ಮಂದಿಯನ್ನು ಅವರವರ ಮನೆಯಲ್ಲಿಯೆ ನಿಗಾವಹಿಸಲು ಕ್ರಮಕೈಗೊಳ್ಳಲಾಗಿದೆ. ಓರ್ವ ಭಾರತೀಯ ಸೇರಿದಂತೆ ಇಬ್ಬರು ಜರ್ಮನ್ ಹಾಗೂ ಇಬ್ಬರು ಆಸ್ಟ್ರೀಯಾ ನಿವಾಸಿಗಳು ರೆಸಾರ್ಟ್ಗಳಲ್ಲಿ ವಾಸ್ತವ್ಯ ಹೂಡಿದ್ದು, ಅವರ ಆರೋಗ್ಯದ ಕಡೆಯೂ ವಿಶೇಷ ಗಮನ ಹರಿಸುವಂತೆ ರೆಸಾರ್ಟ್ಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿಯಿತ್ತರು. ಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಇದ್ದರು.