ನವದೆಹಲಿ, ಮಾ. 19: ವಿಶ್ವವನ್ನು ತಲ್ಲಣಗೊಳಿಸಿರುವ ಕೊರೊನಾ ಸಾಂಕ್ರಾಮಿಕ ರೋಗವನ್ನು ಜನತೆ ಒಗ್ಗಟ್ಟಾಗಿ ಎದುರಿಸುವ ಅನಿವಾರ್ಯತೆ ಇದ್ದು; ತಾ. 22ರ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆÉವರೆಗೆ ಭಾರತದ ಜನತೆ ಸ್ವಯಂ ಪ್ರೇರಿತವಾಗಿ ಜನತಾ ಕಫ್ರ್ಯೂ ಅನ್ನು ಅನುಸರಿಸು ವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.ಇಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಕೊರೊನಾ ವೈರಸ್ ಹಿಂದಿನ ವಿಶ್ವ ಯುದ್ಧಗಳಿಗಿಂತಲೂ ತೀವ್ರವಾಗಿದ್ದು; ಜನತೆ ಸಂಕಲ್ಪ ಮತ್ತು ಸಂಯಮದಿಂದ ಈ ಸಂಕಟವನ್ನು ಎದುರಿಸಬೇಕು ಎಂದು ಮನವಿ ಮಾಡಿದರು.ಕಳೆದ ಎರಡು ತಿಂಗಳುಗಳಿಂದ ವಿಶ್ವವನ್ನು ಕಾಡುತ್ತಿರುವ ಕೊರೊನಾ ಭಾರತದಲ್ಲಿ ಕಡಿಮೆ ಪ್ರಮಾಣ ದಲ್ಲಿದ್ದರೂ ಅಪಾಯದಿಂದ ಹೊರ ಬಂದಿದ್ದೇವೆ ಎಂಬ ಭ್ರಮೆ ತಪ್ಪು ಎಂದ ಮೋದಿ; ಈ ಸಮಸ್ಯೆಗೆ ವಿಜ್ಞಾನ ದಿಂದ ಪರಿಹಾರ ಸಿಕ್ಕಿಲ್ಲವೆಂದರು. ಭಾರತದ 130 ಕೋಟಿ ಜನತೆ ಈ ಬಗ್ಗೆ ಅತಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕೆಂದು ಸೂಚಿಸಿದ ಪ್ರಧಾನಿ; ನಾಗರಿಕರ ಕರ್ತವ್ಯ ಪ್ರಜ್ಞೆ ಮೂಲಕ ಗಂಡಾಂತರದಿಂದ ಹೊರ ಬರಲು ಸಂಕಲ್ಪ ಮಾಡಬೇಕೆಂದರು. ನಾವು ಆರೋಗ್ಯದಲ್ಲಿದ್ದರೆ; ಜಗತ್ತು ಆರೋಗ್ಯದಲ್ಲಿರುತ್ತದೆ ಹಾಗಾಗಿ ಕೊರೊನಾ ತಡೆಗೆ ಜನರು ಒಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಸೇರದೆ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ ಎಂದು ಸೂಚನೆ ನೀಡಿದರು. ಹಿರಿಯ ನಾಗರಿಕರು ಮನೆಯಿಂದ ಹೊರ ಬಾರದಂತೆ ಎಚ್ಚರ ವಹಿಸಿ ಎಂದು ಹೇಳಿದ ನರೇಂದ್ರ ಮೋದಿ ತಾ. 22 ರ ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಸ್ವಯಂ ಜನತಾ ಕಫ್ರ್ಯೂ ವಿಧಿಸಿಕೊಂಡು ಹೊರಬಾರದಂತೆ ಕೇಳಿಕೊಂಡರು. ಈ ಆಂದೋಲನವನ್ನು ಯಶಸ್ವಿ ಗೊಳಿಸಲು ಸಂಘ ಸಂಸ್ಥೆಗಳು ಎರಡು
(ಮೊದಲ ಪುಟದಿಂದ) ದಿನಗಳ ಕಾಲ ಬೇರೆ ಬೇರೆ ರೀತಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಜನತೆಯ ಆರೋಗ್ಯಕ್ಕಾಗಿ ಹಲವಷ್ಟು ಇಲಾಖೆಗಳು, ಸಂಘಸಂಸ್ಥೆಗಳು, ವೈದ್ಯರು, ನರ್ಸ್‍ಗಳು, ಸರ್ಕಾರಗಳು ಜೀವದ ಹಂಗು ತೊರೆದು ಶ್ರಮಿಸುತ್ತಿದ್ದು; ಅವರ ಸೇವೆಯನ್ನು ಶ್ಲಾಘಿಸಿ ಪ್ರಶಂಸಿಸಲು ತಾ. 22 ರಂದು ಸಂಜೆ 5 ಗಂಟೆಗೆ ಎಲ್ಲಾ ಭಾರತೀಯರು ತಮ್ಮ ಮನೆಗಳಲ್ಲಿ ಚಪ್ಪಾಳೆ, ಗಂಟೆಗಳನ್ನು ಭಾರಿಸುವ ಮೂಲಕ ಹಾಗೂ ಇತರ ರೀತಿಯಲ್ಲಿ ಸೇವಾಕರ್ತರಿಗೆ ಕೃತಜ್ಞತೆ ಸಲ್ಲಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ವಿನಂತಿ ಮಾಡಿಕೊಂಡರು. ಕೊರೊನಾವನ್ನು ದೃಢಸಂಕಲ್ಪದಿಂದ ಭಾರತೀಯರು ಎದುರಿಸಬೇಕೆಂದು ಕೂಡ ಮೋದಿ ಕಿವಿಮಾತು ಹೇಳಿದರು.