ವೀರಾಜಪೇಟೆ, ಮಾ. 19: ಮೈತಾಡಿ ಗ್ರಾಮದ ಶ್ರೀ ಬೊಳ್ಳಿ ಬಿಲ್ಲಯ್ಯಪ್ಪ ದೇವರ ಉತ್ಸವವು 3 ದಿನಗಳ ಕಾಲ ನಡೆಯಿತು. ದೇವಸ್ಥಾನ ದಲ್ಲಿ ಪ್ರಾತಃಕಾಲದಲ್ಲಿ ಇರುಬೆಳಕು, ಮಧ್ಯಾಹ್ನ ಮಹಾಪೂಜೆ ಮತ್ತು ಎತ್ತು ಪೋರಾಟ, ಬೊಳಕಾಟು ನೆರವೇರಿತು. ಚಂಡೆ ಮದ್ದಳೆಯೊಂದಿಗೆ ದೇವರ ಮೂರ್ತಿಯನ್ನು ಮೆರವಣಿಗೆಯ ಮೂಲಕ ಭಟ್ಟಮಕ್ಕಿಯ ಬನಕ್ಕೆ ತಂದು ಪೂಜಿಸಲಾಯಿತು. ಎರಡನೇ ದಿನ ಬೆಳಿಗ್ಗೆ ವಸಂತ ಪೂಜೆ, ಮಹಾಪೂಜೆ, ತೆಂಗಿನಕಾಯಿಗೆ ಗುಂಡು ಹೂಡೆಯು ವುದು, ಸಂಜೆ ಶ್ರೀ ಕಾವೇರಿ ನದಿಯಲ್ಲಿ ದೇವರ ಅಮೃತ ಸ್ನಾನ ಮತ್ತು ದೇವಸ್ಥಾನದ ಆವರಣದಲ್ಲಿ ದೇವರ ನೃತ್ಯ ಮತ್ತು ಮಹಾಪೂಜೆ ನೆರವೇರಿತ್ತು, ಪ್ರಸಾದ ವಿನಿಯೋಗದ ನಂತರ ಅನ್ನಸಂತರ್ಪಣೆ ನಡೆಯಿತು. ಮೂರನೆ ದಿನ ಮಹಾಪೂಜೆ ನಂತರ ದೇವಸ್ಥಾನದ ಆಡಳಿತ ಮಂಡಳಿಯ ಮಹಾಸಭೆ ನಡೆಸಿ ಉತ್ಸವದ ಖರ್ಚು ವೆಚ್ಚಗಳನ್ನು ಕಾರ್ಯ ದರ್ಶಿ ವೇಣು ಗ್ರಾಮಸ್ಥರಿಗೆ ವಿವರಿಸಿ ದರು. ಅಧ್ಯಕ್ಷತೆ ಯನ್ನು ಆಡಳಿತ ಮಂಡಳಿ ಅಧ್ಯಕ್ಷ ಮುಂಡಚಾಡಿರ ನಂದ ವಹಿಸಿದ್ದರು.