ನಾಪೆÇೀಕ್ಲು, ಮಾ. 19: ವೀರಾಜಪೇಟೆಯ ದಿ. ಆಲ್ಬರ್ಟ್ ಪಿಂಟೋ ಮತ್ತು ಅಗ್ರೀಸ್ ಪಿಂಟೋ ಎಂಬ ದಂಪತಿಗಳಿಗೆ ಮೂರು ಜನ ಗಂಡು ಮಕ್ಕಳು. ತಮ್ಮ ಹಿರಿಯ ಮಗ ರೋಷನ್ 17 ವರ್ಷ ಇರುವಾಗಲೇ ಮೂತ್ರ ಪಿಂಡ ರೋಗಕ್ಕೆ ತುತ್ತಾದನು.
ಆಲ್ಬರ್ಟ್ ದೂರವಾಣಿ ಇಲಾಖೆಯ ನೌಕರನಾಗಿದ್ದು ತಾನು ದುಡಿದ ಹಣವನ್ನು ಮಗನ ಚಿಕಿತ್ಸೆಗಾಗಿ ವ್ಯಯಿಸುತ್ತಿರುವಾಗಲೇ ಇನ್ನೊಬ್ಬ ಮಗ ರೋಹನ್ ಸಹ ತನ್ನ 15 ನೇ ವರ್ಷದಲ್ಲಿ ಇದೇ ಮೂತ್ರ ಪಿಂಡ ಕಾಯಿಲೆಯಿಂದ ಬಳಲಲಾರಂಭಿಸಿದನು. ಆಲ್ಬರ್ಟ್ ತಾನು ಸೇವೆಯಲ್ಲಿರುವಾಗಲೇ ಹೃದಯಾಘತದಿಂದ ಸಾವನ್ನಪ್ಪಿದರು.
ತಾಯಿ ಅಗ್ರೀಸ್ ಪಿಂಟೋ ಮನೋರೋಗದಿಂದ ಬಳಲುತ್ತಿದ್ದು, ಆಲ್ಬರ್ಟ್ ಪಿಂಟೊ ತೀರಿಹೋದ ನಂತರ ಅವರು ಕಾರ್ಯನಿರ್ವಹಿಸುತ್ತಿದ್ದ ಇಲಾಖೆಯಿಂದ ಬಂದ ಹಣದಲ್ಲಿ ಇಬ್ಬರು ಮಕ್ಕಳ ಚಿಕಿತ್ಸೆಗೆ ಖರ್ಚು ಮಾಡಿ ಇರುವ ಎಲ್ಲಾ ಆಸ್ತಿಯನ್ನು ಕಳೆದು ಕೊಂಡರು. ಇದೀಗ ಇವರ ಮೂರನೆ ಮಗ ರಾಬಿನ್‍ಗೂ ಸಹ ಈ ರೋಗ ಕಾಣಿಸಿಕೊಂಡಿದ್ದು, ಈ ಕುಟುಂಬದವರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಆದುದರಿಂದ ದಾನಿಗಳು ಈ ಕುಟುಂಬದ ಆಸರೆಗೆ ತಮ್ಮ ಕೈಲಾದ ಸಹಾಯ ಹಸ್ತವನ್ನು ನೀಡಿ ಜೀವ ಉಳಿಸಲು ಸಹಕಾರ ನೀಡಬೇಕೆಂದು ಸಾರ್ವಜನಿಕರಲ್ಲಿ ಮನವಿ.
ಸಹಾಯ ಹಸ್ತ ನೀಡುವವರು, ಖಾತೆ ನಂ: 6370091583; IಈSಅ: IಆIಃ000ಗಿ032; ವೀರಾಜಪೇಟೆ ವಿದ್ಯಾನಗರ ಶಾಖೆ, ಇಲ್ಲಿಗೆ ನೀಡಲು ಕೋರಿದೆ.