ಸುಂಟಿಕೊಪ್ಪ, ಮಾ. 18: ಸುಂಟಿಕೊಪ್ಪ ಪಟ್ಟಣದ ರಾಷ್ಟೀಯ ಹೆದ್ದಾರಿ 275 ರಲ್ಲಿ ಕಾಡಾನೆಗಳು ಬೆಳಗ್ಗಿನ ಜಾವ ಪ್ರತ್ಯಕ್ಷವಾಗಿ ಸಾರ್ವಜನಿಕರನ್ನು ಗಾಬರಿಗೊಳಿಸಿತು. ಉಲುಗುಲಿ ತೋಟದ ಕಡೆಯಿಂದ ಇಂದು ಬೆಳಿಗ್ಗಿನ ಜಾವ 5.30ಕ್ಕೆ ಒಂದು ಮರಿ ಆನೆ ಸೇರಿದಂತೆ ಮೂರು ಕಾಡಾನೆಗಳು ಪಟ್ಟೆಮನೆ ರಾಧಕೃಷ್ಣ ಅವರ ತೋಟಕ್ಕೆ ಲಗ್ಗೆಯಿಟ್ಟು ಮರದ ಕೊಂಬೆಗಳನ್ನು ಮುರಿದು ಹಾಕಿ ಬಾಳೆಗಿಡ ಹಲಸಿನ ಕಾಯಿಯನ್ನು ತಿಂದು ನೇರವಾಗಿ ಕೆಇಬಿ ಬಳಿಯಿರುವ ರಾಷ್ಟ್ರೀಯ ಹೆದ್ದಾರಿಯನ್ನು ಪ್ರವೇಶಿಸಿತು. ಇದನ್ನು ಕಂಡ ಬೆಳಗ್ಗಿನ ವಾಕಿಂಗ್‍ಗೆ ತೆರಳಿದವರು ಎದ್ದು ಬಿದ್ದು ಓಡಿ ಜೀವ ಉಳಿಸಿಕೊಂಡರು. ಆನಂತರ ರಾಮ ಬಡಾವಣೆಗಾಗಿ ರೇಂಜರ್ ತೋಟಕ್ಕೆ ಆನೆ ತೆರಳಿತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.