ಮಡಿಕೇರಿ, ಮಾ. 18: ಇಡೀ ಜಗತ್ತಿನಲ್ಲಿ ಪ್ರಪ್ರಥಮವಾಗಿ ಆತಂಕವನ್ನು ಸೃಷ್ಟಿಸಿರುವ; ಭಯಾನಕ ಕೊರೊನಾ ಭೀತಿಯಿಂದ ಮನುಕುಲ ಪಾರಾಗಲು ಎಲ್ಲರೂ ತಮ್ಮ ಇಷ್ಟ ದೇವರ ಮೊರೆ ಹೋಗುವ ಮೂಲಕ; ಸರಕಾರಗಳು ನೀಡುತ್ತಿರುವ ವೈಜ್ಞಾನಿಕ ಸಲಹೆಗಳನ್ನು ಪರಿಪಾಲಿಸಬೇಕೆಂದು ಧರ್ಮಗುರುಗಳು ಕರೆ ನೀಡಿದ್ದಾರೆ. ಪ್ರಸ್ತುತ ಬೆಳವಣಿಗೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ವಿವಿಧ ಧರ್ಮಗುರುಗಳು; ಪ್ರತಿಯೊಬ್ಬರು ಸ್ವಯಂ ಮಡಿಕೇರಿ, ಮಾ. 18: ಇಡೀ ಜಗತ್ತಿನಲ್ಲಿ ಪ್ರಪ್ರಥಮವಾಗಿ ಆತಂಕವನ್ನು ಸೃಷ್ಟಿಸಿರುವ; ಭಯಾನಕ ಕೊರೊನಾ ಭೀತಿಯಿಂದ ಮನುಕುಲ ಪಾರಾಗಲು ಎಲ್ಲರೂ ತಮ್ಮ ಇಷ್ಟ ದೇವರ ಮೊರೆ ಹೋಗುವ ಮೂಲಕ; ಸರಕಾರಗಳು ನೀಡುತ್ತಿರುವ ವೈಜ್ಞಾನಿಕ ಸಲಹೆಗಳನ್ನು ಪರಿಪಾಲಿಸಬೇಕೆಂದು ಧರ್ಮಗುರುಗಳು ಕರೆ ನೀಡಿದ್ದಾರೆ. ಪ್ರಸ್ತುತ ಬೆಳವಣಿಗೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ವಿವಿಧ ಧರ್ಮಗುರುಗಳು; ಪ್ರತಿಯೊಬ್ಬರು ಸ್ವಯಂ (ಮೊದಲ ಪುಟದಿಂದ) ದೇವರ ಮೊರೆಹೋಗುವಂತೆ ಕರೆ ನೀಡಿದರು. ಆ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಮೂಹಿಕವಾಗಿ ಪಾಲ್ಗೊಳ್ಳುವ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡು ಸರಕಾರಗಳು ವೈಜ್ಞಾನಿಕ ಆಧಾರದಲ್ಲಿ ನೀಡುತ್ತಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿ ಹೇಳಿದ್ದಾರೆ.ಇನ್ನಾದರೂ ಭೂಮಿ ತಾಯಿಗೆ ಕೆಡುಕಾಗದಂತೆ ಬದುಕೋಣ : ಮಡಿಕೇರಿಯ ಬದ್ರಿಯಾ ಜುಮಾಮಸೀದಿಯ ಧರ್ಮಗುರು ಜನಾಬ್ ಡಿ.ಕೆ. ಉಮ್ಮರ್ ಸಖಾಫಿ ಅವರು ಪ್ರತಿಕ್ರಿಯಿಸಿ; ಇನ್ನಾದರೂ ನಮ್ಮನ್ನು ಪೊರೆಯುವ ಭೂಮಿತಾಯಿಗೆ ಯಾವದೇ ರೀತಿಯ ಕೆಡಕು ಉಂಟಾಗದಂತೆ ಎಲ್ಲ ಮತ, ಧರ್ಮಗಳ ಜನತೆ ಏಕತೆಯಿಂದ ಬಾಳೋಣ ಎಂದು ಕರೆ ನೀಡಿದರು. ಇದುವರೆಗೆ ಪ್ರಪಂಚದ ಬೇರೆ ಬೇರೆ ಪ್ರದೇಶಗಳಿಗೆ ಸೀಮಿತವಾಗಿ ಅನೇಕ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡು; ಅನಂತರ ಶಮನವಾಗಿವೆ ಎಂದು ಉಲ್ಲೇಖಿಸಿದರು. ಆದರೆ ಈಗ ಇಡೀ ಜಗತ್ತಿನಲ್ಲಿ ತಲ್ಲಣ ಉಂಟು ಮಾಡಿರುವ ಕೊರೊನಾದಂತಹ ಮಾಹಾಮಾರಿಯನ್ನು; ಪ್ರಪಂಚದ ಚರಿತ್ರೆಯಲ್ಲಿ ಮೊದಲು ಎದುರಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಮಾರಿಯನ್ನು ತೊಲಗಿಸಲು ಎಲ್ಲರೂ ಸ್ವಯಂ ಜಾಗೃತರಾಗಿ ಶುಚಿತ್ವವನ್ನು ಕಾಪಾಡಿಕೊಂಡು; ಬೇರೆಯವರಿಂದ ಅಂತರ ಕಾಯ್ದುಕೊಂಡು ಸರಾಕರವು ವೈಜ್ಞಾನಿಕ ದೃಷ್ಟಿಯಲ್ಲಿ ನೀಡಿರುವ ಸೂಚನೆಗಳನ್ನು ಎಲ್ಲ ವರ್ಗದ ಜನತೆ ಸ್ವಯಂ ನಿರ್ಧಾರದಿಂದ ಪಾಲಿಸಬೇಕೆಂದು ಅವರು ಕಳಕಳಿ ವ್ಯಕ್ತಪಡಿಸಿದರು. ಕೊರೊನಾದಿಂದ ಜಗತ್ತಿನಲ್ಲಿ ಮನುಕುಲವನ್ನು ರಕ್ಷಿಸುವಂತೆ ಐದು ಹೊತ್ತು ವಿಶೇಷ ಪ್ರಾರ್ಥನೆಯೊಂದಿಗೆ; ರಾತ್ರಿ ನಮಾಝ್ ಸಂದರ್ಭ ಕೂಡ ಮೊರೆ ಹೋಗುತ್ತಿದ್ದು; ಜನತೆ ಸ್ವಯಂ ಸುರಕ್ಷತಾ ಕ್ರಮಕ್ಕೆ ಮುಂದಾಗಿ ದೇವರಲ್ಲಿ ಬೇಡುವಂತೆ ಅವರು ಕಿವಿಮಾತು ಹೇಳಿದರು.
ಚರ್ಚ್‍ನಲ್ಲಿ ನಿರಂತರ ಪ್ರಾರ್ಥನೆ : ಕೊರೊನಾ ಭಯದಿಂದ ಮನುಕುಲ ಮುಕ್ತರಾಗಲು ಭಗವಂತನ ಮೊರೆಯಿಡುವದು ಹೊರತಾಗಿ ಅನ್ಯಮಾರ್ಗ ಕಾಣಿಸುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಇಲ್ಲಿನ ಸಂತ ಮೈಕಲರ ಚರ್ಚ್ ಧರ್ಮಗುರು ರೆ.ಪಾ. ಆಲ್‍ಫ್ರೆಡ್ ಜಾನ್ ಮೆಂಡೋನ್ಸಾ ಅವರು; ನಿತ್ಯ ಪ್ರಾರ್ಥನೆಯೊಂದಿಗೆ ತಾ. 20, 21 ರಂದು ಸಾಮೂಹಿಕ ಪ್ರಾರ್ಥನೆ ಕೈಗೊಳ್ಳಲಾಗಿದೆ ಎಂದರು.
ಪ್ರಪಂಚವನ್ನು ಕಾಡುತ್ತಿರುವ ಕೊರೊನಾದಿಂದ ಪಾರಾಗಲು ಭಗವಂತನ ಪ್ರಾರ್ಥನೆಯಿಂದಲೇ ಪರಿಹಾರ ಸಾಧ್ಯವೆಂದು ವ್ಯಾಖ್ಯಾನಿಸಿದ ಅವರು; ತಾವು ನಿತ್ಯವೂ ಭಕ್ತರಿಗೆ ಈ ಕುರಿತು ಜಾಗೃತಿ ಮೂಡಿಸುತ್ತಿರುವದಾಗಿ ನೆನಪಿಸಿದರು. ಅನಾರೋಗ್ಯ ಪೀಡಿತರು ಕೂಡ ಸಾಮೂಹಿಕ ಪ್ರಾರ್ಥನೆಯಿಂದ ಅಂತರ ಕಾಪಾಡಿಕೊಂಡು; ತಮ್ಮ ತಮ್ಮ ಮನೆಗಳಲ್ಲಿ ದೇವರ ಮೊರೆಹೋಗುವಂತೆ ಅವರು ‘ಶಕ್ತಿ’ ಸಂದರ್ಶನದಲ್ಲಿ ಸಲಹೆ ನೀಡಿದರು.
ವೈಜ್ಞಾನಿಕ ಸಲಹೆ ಪಾಲಿಸಬೇಕು : ಜಗತ್ತಿಗೆ ಸವಾಲಾಗಿರುವ ಕೊರೊನಾದಿಂದ ಪಾರಾಗಲು ಸರಕಾರವು ವೈಜ್ಞಾನಿಕವಾಗಿ ತಜ್ಞರ ಅಭಿಪ್ರಾಯ ಪಡೆದು ಸಲಹೆ ನೀಡುತ್ತಿದೆ; ಇದನ್ನು ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಪಾಲಿಸಬೇಕು; ಅದು ಸಮಾಜದೊಂದಿಗೆ ಎಲ್ಲರ ಒಳಿತಿಗಾಗಿ ತೆಗೆದುಕೊಳ್ಳುವ ನಿರ್ಧಾರವೆಂದು ಅರಿತುಕೊಳ್ಳುವಂತೆ ಧರ್ಮಗುರುಗಳು ನೆನಪಿಸಿದರು. ಒಟ್ಟಿನಲ್ಲಿ ಕೊರೊನಾದಿಂದ ಪಾರಾಗಲು ಎಲ್ಲರೂ ಭಗವಂತನ ಮೊರೆ ಹೋಗುವಂತೆ ವಿವಿಧ ಧರ್ಮಗುರುಗಳು ಒಕ್ಕೊರಲಿನಿಂದ ಕರೆ ನೀಡಿದ್ದಾರೆ.