ಗೋಣಿಕೊಪ್ಪ ವರದಿ, ಮಾ. 17: ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಸಭಾಂಗಣದಲ್ಲಿ ಜೆನ್ ಶೀಟಾರಿಯೋ ರ್ಯೂ ಕರಾಟೆ ಸ್ಕೂಲ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಇಂಟರ್ ದೋಜೋ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಹುದಿಕೇರಿ ಜೆನ್ ಶೀಟಾರಿಯೋ ರ್ಯೂ ಕರಾಟೆ ಸ್ಕೂಲ್ ವಿದ್ಯಾರ್ಥಿಗಳು 22 ಪದಕ ಗೆದ್ದುಕೊಂಡಿದ್ದಾರೆ.

8 ಚಿನ್ನ, 5 ಸಿಲ್ವರ್, 9 ಕಂಚಿನ ಪದಕ ಪಡೆದುಕೊಂಡಿದೆ. ಅಮಿತ್ ಬೋಪಣ್ಣ, ಶಾನ್ವಿ ಮುತ್ತಕ್ಕ, ಮುತ್ತಮ್ಮ, ಗಣಪತಿ, ರಿಶಲ್ ಗಣಪತಿ, ದಿಯಾನ್ ಅಚ್ಚಯ್ಯ, ಕೃಷಿ ವರ್ನಿತಾ, ನಿಕಿತ್ ನಾಚಪ್ಪ, ಶಾನ್ ನಂಜಪ್ಪ, ನಕ್ಷಾ ಬೋಜಮ್ಮ, ಉತ್ತಪ್ಪಮ ತೇಜಲ್ ಮಾದಪ್ಪ, ದೇವಯ್ಯ ಸ್ಪರ್ಧಿಸಿ ಪದಕ ಪಡೆದರು.