ಸೋಮವಾರಪೇಟೆ, ಮಾ. 18: ಪಟ್ಟಣ ಪಂಚಾಯತ್ನಲ್ಲಿ ಆಸ್ತಿ ಹೊಂದಿರುವವರು ಫಾರಂ-3 ಪಡೆಯುವಾಗ ತಪ್ಪು ಮಾಹಿತಿ ನಮೂದಿಸಿದ್ದರೆ ಅಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವದೂ ಸೇರಿದಂತೆ ಪಟ್ಟಣ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ಆಯವ್ಯಯ ಸಭೆಯಲ್ಲಿ ಚರ್ಚೆ ನಡೆಯಿತು.ಪ.ಪಂ.ನಲ್ಲಿ ಆಸ್ತಿ ಇಲ್ಲದವರಿಗೂ ಫಾರಂ ನಂ.3 ಹಾಗೂ ಇರುವ ಆಸ್ತಿಗಿಂತ ಹೆಚ್ಚುವರಿಯಾಗಿ ನಮೂದಿಸಿ ಫಾರಂ ನಂ. 3 ಕೊಡುತ್ತಿರುವ ಬಗ್ಗೆ ಹಲವಷ್ಟು ದೂರುಗಳು ಬಂದಿದ್ದು, ಈ ಬಗ್ಗೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲೂ ಚರ್ಚೆಯಾಗಿದೆ. ಇಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸು ವಂತೆ ಪಂಚಾಯಿತಿ ಆಡಳಿತಾಧಿ ಕಾರಿಯೂ ಆಗಿರುವ ತಹಶೀಲ್ದಾರ್ ಗೋವಿಂದರಾಜು ಅವರು ಪ.ಪಂ. ಮುಖ್ಯಾಧಿಕಾರಿ ರಮೇಶ್ ಅವರಿಗೆ ಸೂಚನೆ ನೀಡಿದರು.
ಇದರೊಂದಿಗೆ ಪಟ್ಟಣ ವ್ಯಾಪ್ತಿಯಲ್ಲಿ ಬಿಗಡಾಯಿಸುತ್ತಿರುವ ಕಸ ವಿಲೇವಾರಿ ಸಮಸ್ಯೆ, ವಾಹನ ನಿಲುಗಡೆ, ಸಾರ್ವಜನಿಕ ಸ್ಮಶಾನ, ಆನೆಕೆರೆ ಅಭಿವೃದ್ಧಿಯೊಂದಿಗೆ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆಗಳು ನಡೆದವು.ಸೋಮವಾರ ದಿನ ಪಟ್ಟಣಕ್ಕೆ ವ್ಯಾಪಾರಕ್ಕಾಗಿ ಬರುವ ಹೊರ ಜಿಲ್ಲೆಯ ವ್ಯಾಪಾರಸ್ಥರು ತಮ್ಮ ವಾಹನಗಳನ್ನು ಪಟ್ಟಣದ ಒಳಭಾಗದಲ್ಲಿ ನಿಲ್ಲಿಸುತ್ತಿರುವ ದರಿಂದ ಸ್ಥಳೀಯ ವಾಹನ ನಿಲುಗಡೆಗೆ ತೊಂದರೆಯಾಗುತ್ತಿದ್ದು, ಅಂತಹ ವಾಹನಗಳನ್ನು ಪಟ್ಟಣದ ಹೊರಭಾಗದ ರಸ್ತೆಯ ಒಂದು ಬದಿಯಲ್ಲಿ ಅಥವಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ನಿಲುಗಡೆಗೊಳಿಸಲು ಕ್ರಮ ವಹಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಪ.ಪಂ. ಸದಸ್ಯರುಗಳು ಹಾಗೂ ಸಾರ್ವಜನಿಕ ಸಂಘಸಂಸ್ಥೆಗಳ ಪದಾಧಿಕಾರಿಗಳು ಸಲಹೆ ನೀಡಿದರು.
ಪಟ್ಟಣದ ಅತ್ಯಂತ ಗಂಭೀರ ಸಮಸ್ಯೆಗಳಾಗಿರುವ ಪಟ್ಟಣದ ವಾಹನ ನಿಲುಗಡೆ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಿ ಕ್ರಮಕೈಗೊಳ್ಳುವದಾಗಿ ತಹಶೀಲ್ದಾರ್ ತಿಳಿಸಿದರು. ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಪಟ್ಟಣದ ಎಲ್ಲಾ ರಸ್ತೆಗಳನ್ನು, ವಾರದ ಎಲ್ಲಾ ದಿನಗಳಲ್ಲೂ ಏಕಮುಖ ಸಂಚಾರಕ್ಕೆ ಒಳಪಡಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಅಭಿಪ್ರಾಯಿಸಿದರು.
ಸೋಮವಾರಪೇಟೆ ಪಟ್ಟಣ ಪಂಚಾಯಿತಿಯನ್ನು ಮೇಲ್ದರ್ಜೆ ಗೇರಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸದನದಲ್ಲಿ ಸಚಿವರ ಉತ್ತರ ನೀಡಿದ್ದು, ಈ ಬಗ್ಗೆ ಮಾಹಿತಿ ನೀಡುವಂತೆ ಸಭೆಯಲ್ಲಿದ್ದ ಸಾರ್ವಜನಿಕರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ.ಪಂ. ಅಧಿಕಾರಿಗಳು ಈಗಾಗಲೇ ಬೇಳೂರು, ಚೌಡ್ಲು, ಹಾನಗಲ್ಲು ಗ್ರಾಮ ಪಂಚಾಯಿತಿಗಳ
(ಮೊದಲ ಪುಟದಿಂದ) ಕೆಲ ಪ್ರದೇಶಗಳನ್ನು ಒಳಗೊಂಡಂತೆ ಗಡಿ ವಿಸ್ತರಣೆ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು. ಪ.ಪಂ. ವ್ಯಾಪ್ತಿಗೆ ನೇರುಗಳಲೆ ಗ್ರಾಮ ಪಂಚಾಯಿತಿಯ ಕೆಲ ಪ್ರದೇಶಗಳನ್ನು ಒಳಪಡಿಸಲು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿದ್ದ ಮಂದಿ ಸಲಹೆ ನೀಡಿದರು.
ದಾನಿಗಳಾದ ಹರಪಳ್ಳಿ ರವೀಂದ್ರ ಅವರ ಪ್ರಯತ್ನದಿಂದ ಪಟ್ಟಣದ ಆನೆಕೆರೆಯ ಹೂಳೆತ್ತಿದ್ದು, ಇದೀಗ ನೀರು ಕಾಣುವಂತಾಗಿದೆ. ಆದರೆ ಕೆರೆಯ ಏರಿ ಮೇಲೆ ಮರಗಳು ಬೆಳೆಯುತ್ತಿದ್ದು, ಕೆರೆಯ ಸುತ್ತ ಕಾಡು ಬೆಳೆಯುತ್ತಿರುವದರಿಂದ ಇವುಗಳನ್ನು ಶುಚಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ಆನೆಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗುವದು. ತಕ್ಷಣ ಕೆರೆ ಆವರಣವನ್ನು ಶುಚಿಗೊಳಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದರೊಂದಿಗೆ ಆನೆಕೆರೆ ಸುತ್ತಮುತ್ತಲ ಪ್ರದೇಶದಲ್ಲಿ ಕೆರೆ ಒತ್ತುವರಿಯಾಗಿರುವ ದೂರುಗಳು ಬಂದಿದ್ದು, ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವದು. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ತಹಶೀಲ್ದಾರ್ ಗೋವಿಂದರಾಜು ಮನವಿ ಮಾಡಿದರು.
ಕಸ ವಿಲೇವಾರಿ ಸಮಸ್ಯೆ ಕಗ್ಗಂಟಾಗಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಪ.ಪಂ. ವಿಫಲವಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ, ಪ್ರತಿಕ್ರಿಯಿಸಿದ ಪಂಚಾಯಿತಿ ಅಧಿಕಾರಿಗಳು, ಈಗಾಗಲೇ ಸರ್ಕಾರ ಸಿದ್ದಲಿಂಗಪುರದ ಬಳಿ ನಿವೇಶನ ನೀಡಿದ್ದು, ಅಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಗುತ್ತಿದೆ. ಆದರೆ ಕಸ ವಿಲೇವಾರಿ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ತಿಳುವಳಿಕೆ ಇರುವದರಿಂದ ಅವರಲ್ಲಿ ಆಧುನಿಕವಾಗಿ ಕಸ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಸೋಮವಾರಪೇಟೆ ಪ. ಪಂ. ಬಂದಿದ್ದು, ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವದು. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ತಹಶೀಲ್ದಾರ್ ಗೋವಿಂದರಾಜು ಮನವಿ ಮಾಡಿದರು.
ಕಸ ವಿಲೇವಾರಿ ಸಮಸ್ಯೆ ಕಗ್ಗಂಟಾಗಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಪ.ಪಂ. ವಿಫಲವಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ, ಪ್ರತಿಕ್ರಿಯಿಸಿದ ಪಂಚಾಯಿತಿ ಅಧಿಕಾರಿಗಳು, ಈಗಾಗಲೇ ಸರ್ಕಾರ ಸಿದ್ದಲಿಂಗಪುರದ ಬಳಿ ನಿವೇಶನ ನೀಡಿದ್ದು, ಅಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಗುತ್ತಿದೆ. ಆದರೆ ಕಸ ವಿಲೇವಾರಿ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ತಿಳುವಳಿಕೆ ಇರುವದರಿಂದ ಅವರಲ್ಲಿ ಆಧುನಿಕವಾಗಿ ಕಸ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಸೋಮವಾರಪೇಟೆ ಪ. ಪಂ. ಮಾಡದೇ ಹಣ ಪಡೆದಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ ಪ.ಪಂ. ಸದಸ್ಯರುಗಳಾದ ಶೀಲಾ ಡಿಸೋಜ, ನಳಿನಿ ಗಣೇಶ್, ಜಯಂತಿ ಶಿವಕುಮಾರ್, ಪಿ.ಕೆ. ಚಂದ್ರು, ಎಂ.ವಿ. ಜೀವನ್, ಬಿ.ಆರ್. ಮಹೇಶ್, ಬಿ.ಸಿ. ವೆಂಕಟೇಶ್, ಬಿ.ಆರ್. ಶುಭಕರ್, ಉದಯಶಂಕರ್, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಎನ್. ದೀಪಕ್, ಜೇಸೀ ಸಂಸ್ಥೆ ಅಧ್ಯಕ್ಷೆ ಉಷಾರಾಣಿ, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಎಸ್. ಮಹೇಶ್, ಜಂಟಿ ಕಾರ್ಯದರ್ಶಿ ಅಭಿಷೇಕ್ ಗೋವಿಂದಪ್ಪ, ಪ.ಪಂ. ಆರೋಗ್ಯ ನಿರೀಕ್ಷಕ ಉದಯಕುಮಾರ್, ರಾಜಸ್ವ ನಿರೀಕ್ಷಕ ರಫೀಕ್, ಅಭಿಯಂತರ ಹೇಮಕುಮಾರ್, ಸಿಬ್ಬಂದಿಗಳಾದ ರೂಪ ಹಾಗೂ ಭಾವನ ಅವರುಗಳು ಉಪಸ್ಥಿತರಿದ್ದರು.