ಕವಿತೆ, ಕಾಫಿ ಕೃಷಿ, ರಾಜಕೀಯದ ಪೋಸ್ಟ್ ಹಾಕುತ್ತಾ ನಾನು ಬರಿಯಲೇ ಬೇಕು ಅಂದುಕೊಂಡಿದ್ದನ್ನ ಮುಂದೂಡುತ್ತಲೇ ಬಂದೆ. ನಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟಿದ್ದರ ಬಗ್ಗೆ ನಾವು ಮೌನವಿದ್ದಾಗ ಅದರ ತಲೆ ಬುಡ ಗೊತ್ತಿಲ್ಲದವರು ಕೂಡ ವದಂತಿಗಳನ್ನು ಹಬ್ಬಿಸಿ ಗಬ್ಬೆಬ್ಬಿಸುತ್ತಾರೆ. ಬರೆಯಲು ಕೇವಲ ಸಾಮಗ್ರಿ ಇದ್ದರೆ ಸಾಕೆ ಅದಕ್ಕೂ ಒಂದು ಟ್ರಿಗರಿಂಗ್ ಪಾಯಿಂಟ್ ಬೇಡವೇ ? ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಜೋಕರ್ ಒಬ್ಬರು ಬಿಳಿ ಕೋಟ್ ಹಾಕಿಕೊಂಡು ಜೀವಮಾನ ಪರ್ಯಂತ ನಿಮ್ಮ ಹಾರ್ಟ್ ಎಟ್ಯಾಕ್ ಆಗದ ಹಾಗೆ ಕಿಡ್ನಿ ಫೇಲ್ ಆಗದ ಹಾಗೆ ಮಾಡುವ ಔಷಧಿಯನ್ನು ಹಂಚುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಅವರ ವಿಡಿಯೋವನ್ನು ಪರಾಮರ್ಶಿಸದೆ ಹಂಚಿ ಗುಲ್ಲೆಬ್ಬಿಸಿದ ನಮ್ಮ ಜನರನ್ನು ನೋಡಿ ಸಮಾಜಕ್ಕೆ ಬಹುಶಃ ವೈದ್ಯರಿಗಿಂತ ಹೆಚ್ಚಾಗಿ ಜೋತಿಷಿ ಗಳ ಅಗತ್ಯವಿದ್ದಂತೆ ತೋರಿತು. ಇನ್ನು ನಾನು ಬರೆಯದಿದ್ದರೆ ಹೇಗೆ.
ಮೂರು ವರ್ಷಗಳ ಹಿಂದೆ ನಾನು ಮುಂಬೈಯಲ್ಲಿದ್ದಾಗ “ಸ್ವೈನ್ ಫೂ” ಸೋಂಕು ಮಹಾರಾಷ್ಟ್ರದಲ್ಲಿ ಹರಡಿತ್ತು. ಆ ಕಾಯಿಲೆಯಿಂದ ಮೃತ್ಯುಗಳಾ ದಾಗ ಅದು ಪತ್ರಿಕೆಗಳ ಮುಖ ಪುಟದಲ್ಲಿ ರಾರಾಜಿಸಿ ಒಂದಷ್ಟು ಆತಂಕ ಸೃಷ್ಟಿಸಿತ್ತು. ನಾನು ಕೆಲಸ ಮಾಡುತ್ತಿದ್ದ ಭಾರತೀಯ ಸೇನೆಯ ಕಮಾಂಡ್ ಆಸ್ಪತ್ರೆ ಮುಂಬೈಯಲ್ಲಿರುವ IಓಊS ಂsviಟಿiಯಲ್ಲಿ ಪ್ರತ್ಯೇಕ ಸ್ವೈನ್ ಫ್ಲೂ ವಾರ್ಡುಗಳನ್ನು ತೆರೆಯಲಾಯಿತು. ಆ ಕಾಯಿಲೆ ಮೂರು ನಾಲ್ಕು ತಿಂಗಳುಗಳ ತರುವಾಯ ಹತೋಟಿಗೆ ಬಂತು. ನಂತರ ಮಕ್ಕಳಲ್ಲಿ ಸ್ವೈನ್ ಫ್ಲೂ ಬಗ್ಗೆ ಪೇಪರ್ ಒಂದನ್ನು ರಾಷ್ಟ್ರೀಯ ಗೋಷ್ಠಿಯಲ್ಲಿ ನಾನು ಮಂಡಿಸಬೇಕಾಗಿ ಬಂದ ಕಾರಣ ನಮ್ಮ ಆಸ್ಪತ್ರೆಯಲ್ಲಿ ಆದ ಎಲ್ಲಾ ಅಂಕಿಅಂಶಗಳನ್ನು ಜೊತೆಗೆ ಮಹಾರಾಷ್ಟ್ರದಲ್ಲಿ ಮತ್ತು ಪ್ರಪಂಚದ ಬೇರೆ ಭಾಗದ ಮಕ್ಕಳಲ್ಲಿ ಸ್ವೈನ್ ಫ್ಲೂ ಕಾಯಿಲೆ ಹರಡಿಕೊಂಡ ಬಗೆಯನ್ನು ಆಳವಾಗಿ ತಿಳಿದುಕೊಳ್ಳಲಾರಂಭಿಸಿದೆ.
ಸುಮಾರು ಐವತ್ತಕ್ಕೂ ಹೆಚ್ಚು ಮಕ್ಕಳು ನಮ್ಮ ಆಸ್ಪತ್ರೆಯಲ್ಲಿ ಸ್ವೈನ್ ಪ್ಲೂಗೆ ತುತ್ತಾಗಿದ್ದರು. ಅದರಲ್ಲಿ ಒಂದು ಮಗುವಿನ ಸ್ಥಿತಿ ಗಂಭೀರವಾಗಿದ್ದ ಕಾರಣ ಅದು ಐದು ದಿನ ವೆಂಟಿಲೇಟರ್ ಮೇಲಿದ್ದು ಆನಂತರ ಚೇತರಿಸಿ ಕೊಂಡಿತು. ಉಳಿದ ಏಳೆಂಟು ಮಕ್ಕಳಿಗೆ ಸೋಂಕು ಸ್ವಲ್ಪ ತೀವ್ರವಾಗಿದ್ದ ಕಾರಣ, ಅತಿಯಾದ ಜ್ವರ , ನಿತ್ರಾಣವಾಗಿ ಗ್ಲೂಕೋಸ್ ಡ್ರಿಫ್ಸ್ ಹಾಕಬೇಕಾಗಿ ಬಂತು. ಉಳಿದ ಬಹುತೇಕ ಮಕ್ಕಳಲ್ಲಿ ಇದು ಬೇರೆ ವೈರಲ್ ಜ್ವರದಂತೆ ಸರಳ ಜ್ವರ ಮತ್ತು ಕೆಮ್ಮಿನ ರೂಪದಲ್ಲಿದ್ದು, ಒಂದು ವಾರದಲ್ಲಿ ಅವರೆಲ್ಲ ಯಾವದೇ ಸಮಸ್ಯೆಯಿಲ್ಲದೆ ತಮ್ಮ ಮನೆಗಳಿಗೆ ಮರಳಿದರು. ಬೇರೆಯವರಿಗೆ ಹರಡುವುದು ಬೇಡವೆಂಬ ಕಾರಣಕ್ಕೆ ಅವರನ್ನು ನಮ್ಮ isoಟಚಿಣeಜ ಸ್ವೈನ್ ಫ್ಲೂ ವಾರ್ಡಿನಲ್ಲಿ ದಾಖಲು ಮಾಡಿದ್ದೆವು.. ನಮ್ಮ ಆಸ್ಪತ್ರೆಯಲ್ಲಿ ಹಿರಿಯ ರೋಗಿಗಳ ವಿಭಾಗದಲ್ಲಿ, ಆಗಲೇ ಬಿಪಿ, ಶುಗರ್ನಿಂದ ಬಳಲುತ್ತಿದ್ದ ರೋಗಿಗಳಿಗೆ ಸ್ವೈನ್ ಫ್ಲೂ ತಗುಲಿತ್ತು. ಅವರಲ್ಲಿ ಒಂದೆರೆಡು ಮೃತ್ಯುಗಳಾದವು. ಆಗಲೇ ಸಾಯುವ ಹಂತದಲ್ಲಿದ್ದವರಿಗೆ ಸ್ವೈನ್ ಫ್ಲೂ ತಗುಲಿತ್ತಾ, ಅಥವಾ ಸ್ವೈನ್ ಫ್ಲೂವಿನಿಂದಲೇ ಸತ್ತರಾ, ಯಾರಿಗೂ ನಿಖರವಾಗಿ ಹೇಳಲು ಬರುವುದಿಲ್ಲ. ಙouಡಿ guess ತಿiಟಟ be ಚಿs gooಜ ಚಿs miಟಿe..
ಮಹಾರಾಷ್ಟ್ರದ ಬೇರೆ ಭಾಗಗಳಲ್ಲಿ ಸಾವಿನ ವರದಿಗಳಾದವು. ಸಾವಿನ ಅಂಕಿ ಅಂಶ ಸಹಜವಾಗಿಯೆ ಸರಕಾರಿ ಆರೋಗ್ಯ ವ್ಯವಸ್ಥೆ ಕಳಪೆಯಾಗಿದ್ದ ಕಡೆ ಜಾಸ್ತಿಯಿತ್ತು. ವ್ಯವಸ್ಥೆ ಸಮರ್ಪಕವಾಗಿದ್ದು, ಎಲ್ಲಾ ಸೌಲಭ್ಯಗಳಿದ್ದ ಕಡೆ moಡಿಣಚಿಟiಣಥಿ ಡಿಚಿಣe ತಿಚಿs ಟess ಣhಚಿಟಿ 1%. ನಮ್ಮ ಪೀಡಿಯಾಟ್ರಿಕ್ಸ್ ವಿಭಾಗದಲ್ಲಿ ನಾವು ಯಾವುದೇ ಮಗುವನ್ನು ಕಳೆದುಕೊಳ್ಳಲಿಲ್ಲ. ನಮ್ಮ ರೋಗಿಗಳು ಸಾಕ್ಷರಸ್ಥರು, ಆಸ್ಪತ್ರೆಗೆ ಬರುವುದಕ್ಕೆ ತಡಮಾಡುವುದಿಲ್ಲ. ನಮ್ಮಲ್ಲಿ ಔಷಧಿ, ಸಲಕರಣೆ, ಸಿಬ್ಬಂದಿಗಳ ಕೊರತೆಯಿಲ್ಲದ ಕಾರಣ ಉತ್ತಮ ಚಿಕಿತ್ಸೆ ನೀಡುವಲ್ಲಿ ನಾವು ಸಮರ್ಥರಾಗಿದ್ದೆವು. ವೈರಲ್ ಸೋಂಕುಗಳಿಗೆ ಚಿಟಿಣibioಣiಛಿs ಪರಿಣಾಮಕಾರಿಯಲ್ಲ. ದೇಹಕ್ಕೆ suಠಿಠಿoಡಿಣive ಛಿಚಿಡಿe ನೀಡಿದಲ್ಲಿ ದೇಹ ತನ್ನೊಳಗಿರುವ ರೋಗನಿರೋಧ ಶಕ್ತಿಯಿಂದ ಆ ವೈರಸ್ಸನ್ನು ದೇಹದಿಂದ ಹೊರಗಟ್ಟುತ್ತದೆ. Suಠಿಠಿoಡಿಣive ಛಿಚಿಡಿe ಅಂದರೆ-ದೇಹದ ಗ್ಲುಕೋಸ್, ನೀರಿನಾಂಶ, ಅಮ್ಲಜನಕ, ತಾಪಮಾನ mಚಿiಟಿಣಚಿiಟಿ ಮಾಡುವುದು. ವೈರಸ್ ಜೊತೆ ದೇಹವೇ ಹೋರಾಡಿ ಗೆಲ್ಲುತ್ತದೆ. ಹೆಚ್ಚಿನ ವೈರಸ್ ಸೋಂಕುಗಳಿಗೆ suಠಿಠಿoಡಿಣive ಛಿಚಿಡಿe ಪರಿಣಾಮಕಾರಿ. ಕೆಲವೊಂದು ವೈರಸ್ಗಳಿಗೆ ಚಿಟಿಣiviಡಿಚಿಟ ಚಾಲ್ತಿಯಲ್ಲಿವೆ. ಸ್ವೈನ್ ಫ್ಲೂವಿಗೆ oseಟಣಚಿmಚಿviಡಿ ಔಷಧಿ ಇದ್ದಂತೆ. ಅವೆಲ್ಲವೂ ಪ್ರಾಯೋಗಿಕವಾಗಿ ಪರೀಕ್ಷಿಸಿದ ನಂತರ ಉಪಯೋಗಿಸಲ್ಪಡುತ್ತವೆ. ಡೆಂಗ್ಯೂವಿಗೆ ಪಪ್ಪಾಯಿ ಎಲೆ ತಿನ್ನಿ ಎನ್ನುವ ವಾಟ್ಸಪ್ ತಲೆಹರಟೆಗಳ ಸಲಹೆಗಳಿಗೆ ಅನುಗುಣ ವಾಗಿ ಪ್ರಪಂಚದಲ್ಲಿ ಕಾಯಿಲೆಗಳಿಗೆ ಚಿಕಿತ್ಸೆಯನ್ನು ನಿರ್ಧರಿಸಲಾಗುವುದಿಲ್ಲ. ಡೆಂಗ್ಯೂ ಹೆಸರು ಕೇಳಿದ ತಕ್ಷಣ ರೋಗಿಗಳ ಬಿಪಿ ವೀಕಾಗುತ್ತದೆ. ಅಸಲಿಗೆ ಅದೂ ಒಂದು ವೈರಲ್ ಸೋಂಕು, ಅದು ತಗುಲಿದ 95% ಜನರಿಗೆ ಆಸ್ಪತ್ರೆಯಲ್ಲಿ ದಾಖಲಾಗುವ ಅಗತ್ಯವೂ ಬರುವುದಿಲ್ಲ. ಅದರೆ ಮಿಡಿಯಾ, ಸೋಷಲ್ ಮಿಡಿಯಾದ ಭಯದ ಕಾರಣ ಜನರು ಓಡೋಡಿ ಬಂದು ವೈದ್ಯರು ಅಗತ್ಯವಿಲ್ಲವೆಂದರೂ ಎಡ್ಮಿಟ್ ಆಗುತ್ತಾರೆ. ಡೆಂಗ್ಯೂಗೂ ಬೇಕಾಗು ವುದು suಠಿಠಿoಡಿಣive ಛಿಚಿಡಿe ಅಷ್ಟೆ. ರೋಗಿಯ ದೇಹದಲ್ಲಿ ಡೆಂಗ್ಯೂವಿನಿಂದಾಗಿ ನೀರಿನಾಂಶ ಕಮ್ಮಿಯಾದಾಗ ಡ್ರಿಪ್ಸ್ ಹಾಕುವುದು. ಆದರೆ ಡೆಂಗ್ಯೂವಿನಿಂದ ಭಾರತದಲ್ಲಿ ಜನರು ಸಾಯುವುದೇಕೆ ?
1) ಆಸ್ಪತ್ರೆಗೆ ತಡವಾಗಿ, ನಿತ್ರಾಣದ ಸ್ಥಿತಿಯಲ್ಲಿ ಬರುವುದು
2) ಸರಿಯಾದ ಕಡೆ ತೋರಿಸದೆ, ಪಪ್ಪಾಯಿ ಎಲೆ ತಜ್ಞರ ಬಳಿ ಕಾಲಹರಣ ಮಾಡುವುದು.
3) ಅತೀ ಮುಖ್ಯ ಕಾರಣ ಕಳಪೆ ನೀರು-ಒಳಚರಂಡಿ ವ್ಯವಸ್ಥೆ.
ಕೊರೊನಾ ಬಗ್ಗೆ ತಿಳಿಸಲು ಇಷ್ಟೆಲ್ಲ ಬರಿಯಬೇಕಾಯಿತು. ಒಂದೇ ವಾಕ್ಯದಲ್ಲಿ ಹೇಳಬೇಕಾದರೆ ಕೊರೊನಾ ಸ್ವೈನ್ ಫ್ಲೂವಿನ ಅರ್ಧದಷ್ಟೂ ಅಪಾಯಕಾರಿಯಲ್ಲ! Iಣs moಡಿಣಚಿಟiಣಥಿ ಡಿಚಿಣe is hಚಿಟಜಿ ಚಿs ಣhಚಿಣ oಜಿ Sತಿiಟಿe ಈಟu..
ನೂರು ಜನರಿಗೆ ಕೊರೊನಾ ಬಂದರೆ ಕೇವಲ ಎರಡಕ್ಕಿಂತ ಕಮ್ಮಿ ಜನರ ಜೀವಕ್ಕೆ ಕುತ್ತು ಬರಬಹುದು. ಎರಡು ಶೇಕಡಾ ಸಾಯುವವರಲ್ಲಿಯೂ ಹೆಚ್ಚಿನವರು ಬೇರೆ ಹಳೆಯ ಕಾಯಿಲೆಗಳಿಂದ ಬಳಲುತ್ತಿರುವವರೆ.
ನಮ್ಮ ಕೆಲವು ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾದವರ ಹಾರಾಟದ ಕಾರಣ ಕೊರೊನಾದ ಕತ್ತಿ ತಮ್ಮ ತಲೆಯ ಮೇಲೆ ತೂಗುತ್ತಿದೆ ಯೆಂದು ಜನಸಾಮಾನ್ಯರು ಭಯಭೀತರಾಗಿದ್ದಾರೆ. ಭಾರತದಲ್ಲಿ ಮೆದುಳಿಗೆ ಬ್ಯಾಕ್ಟೀರಿಯಾದ ಸೋಂಕು ತಾಗಿದರೆ (bಚಿಛಿಣeಡಿiಚಿಟ meಟಿiಟಿgiಣis) 5-10% moಡಿಣಚಿಟiಣಥಿ ಇದೆ. ನಿಮೋನಿಯಾದಿಂದ ಲಕ್ಷಾಂತರ ಮಕ್ಕಳು ಸಾಯುತ್ತಾರೆ. ಅದರ ಮುಂದೆ ಕೊರೊನಾ ಜುಜುಬಿ. ಆದರೆ ನಮ್ಮ ದೇಶದಲ್ಲಿ ಕೋಟ್ಯಾಂತರ ಮಕ್ಕಳು ಬಳಲುತ್ತಿರುವ ಅಪೌಷ್ಟಿಕತೆ, ಲಕ್ಷಾಂತರ ಮಕ್ಕಳು ಸಾಯುತ್ತಿರುವ ನಿಮೋನಿಯಾ ಬಗ್ಗೆ ಮಾತನಾಡಿದರೆ ಅದು seಟಿsಚಿಣioಟಿಚಿಟ ಟಿeತಿs ಆಗುವ ಕಾರಣ ಮಿಡಿಯಾ ಕೊರೊನಾ ಜೊತೆ ಕುಣಿದಾಡುತ್ತಿದೆ.
ಪ್ರಪಂಚದ ಯಾವ ಮೂಲೆಯಲ್ಲಿ ಬೇಕಾದರೆ ಹೊಸ ರೋಗ ಹುಟ್ಟಲಿ, ಈ ರೀತಿಯ ವದಂತಿಗಳಿಂದ ಹೆಚ್ಚಿನ ಭಾರಿ ನಷ್ಟ ಅನುಭವಿಸು ವವರು ನಮ್ಮ ಕೋಳಿ ವ್ಯಾಪಾರಿಗಳು. ಅಪರೂಪವೆಂಬಂತೆ ಕಳೆದ ಬಾರಿ ಹಬ್ಬಿದ ಇಬೋಲಾ ವದಂತಿಗಳಿಂದ ಹಣ್ಣಿನ ವ್ಯಾಪಾರಿಗಳು ಕೈ ಸುಟ್ಟು ಕೊಂಡರು. ಮಧ್ಯಾಹ್ನ ಮೂರು ಗಂಟೆಯ ಸಮಯಕ್ಕೆ ನೂರಾರು ನಿವ್ಸ್ ಚಾನಲ್ಲಿನ ಡಲ್ ಸಮಯದಲ್ಲಿ ಸರ್ವ ರೋಗಕ್ಕೆ ಸಾರಾಯಿ ಮದ್ದು ಎನ್ನುವ ರೀತಿಯಲಿ ತಮ್ಮ ಕೈಯಲ್ಲಿ ಲೇಹವನ್ನೊ, ಗುಳಿಗೆಯನ್ನೋ ಕಡ್ಲೆಕಾಯಿಯಂತೆ ಹಂಚುವ sಚಿmಠಿಟe ಠಿieಛಿe ಕಾಣಸಿಗುತ್ತಾರೆ. ಕೊರೊನಾ ಬಗ್ಗೆ ಅವರ ಅಭಿಪ್ರಾಯಗಳು ಕಾಮಿಡಿ ಟೈಮಿಗಿಂತ ರಂಜನೀಯ ವಾಗಿರುತ್ತದೆ. ನನ್ನ ಮನಸ್ಸಿಗೆ ಸ್ವಲ್ಪ ಜಾಸ್ತಿ ಕಿರಿ ಕಿರಿಯಾದದ್ದು ನಾನು ನಿರಂತರವಾಗಿ ನೋಡುತ್ತಾ ಬಂದ ಸಾಮಾಜಿಕ ಜಾಲತಾಣದ ಸೈಟಿನಲ್ಲಿ ತಿಳಿದವರೊಬ್ಬರು ನಾಟಿ ವೈದ್ಯರನ್ನು ಕರೆಸಿ ಆಯುರ್ವೇದದಲ್ಲಿ ಕೊರೊನಾಗೆ ಪರಿಹಾರ ಇದೆ ಎಂದು ಸಂದರ್ಶನ ಬಿತ್ತರಿಸಿದ ಬಳಿಕ. ಅಸಲಿಗೆ ಕೊರೊನಾಕ್ಕೆ ಪರಿಹಾರ ಅಲೋಪತಿಯಲ್ಲೂ ಇಲ್ಲ. Iಣ ಟಿeeಜs oಟಿಟಥಿ suಠಿಠಿoಡಿಣive ಛಿಚಿಡಿe. ರೋಗಿಗೆ ಬಂದಿರುವ ರೋಗ ಕೊರೊನಾವಾ ಮತ್ತೊಂದಾ ಎಂದು ಪತ್ತೆಹಚ್ಚಲು ಸಾಧ್ಯವಾಗದ ಚಿಕಿತ್ಸಾ ವಿಧಗಳಲ್ಲಿ ಪರಿಣತಿಯನ್ನು ಪಡೆದ ಹಿರಿಯರು ಈ ತರಹ ಮಾತನಾಡುವಾಗ ನಮ್ಮ ಸಮಾಜ ಹೋಗುತ್ತಿರುವ ದಿಕ್ಕಿನ ಬಗೆಗೆ ದಿಗಿಲಾಗುತ್ತದೆ. ಅದನ್ನು ನೋಡಿದ ವೀಕ್ಷಕರು ಯಾವುದೋ ಲೇಹವನ್ನೂ, ಕಷಾಯವನ್ನೂ ಔಷಧಿಯೆಂದು ಮನಸ್ಸಿನಲ್ಲಿ ಕಲ್ಪಿಸಿಕೊಂಡು ದಿಕ್ಕುತಪ್ಪಿಸುತ್ತಾರೆ. ನಮ್ಮ ಸಾಂಪ್ರದಾಯಿಕ ಭಾರತೀಯ ಸಂಸ್ಕೃತಿಯ ಆಹಾರ, ಆರೋಗ್ಯ ಪದ್ಧತಿ ಯಲ್ಲಿ ನಾವು ಮೆಚ್ಚಬಹುದಾದ ಮತ್ತು ಅನುಸರಿಸಬಹುದಾದ ಅನೇಕ ಉತ್ತಮ ಅಂಶಗಳಿವೆ. ಜಗತ್ತೆ ತಿರುಗಿ ನೋಡಿ ಅನುಸರಿಸಿದ ಯೋಗದಂತಹ ಕಲೆಗಳಿವೆ.
ಕೊನೆಯ ಮಾತು: ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು, ಶೀತ ಕೆಮ್ಮುವಿನಿಂದ ಬಳಲುತ್ತಿರುವವರು ಮಾತ್ರ ಮಾಸ್ಕ್ ಬಳಸಿ. ಮಾಸ್ಕಿನ ಅಗತ್ಯವಿಲ್ಲ ದವರು ಅದನ್ನು ಖರೀದಿಸಿ ಅಗತ್ಯವಿರುವವರಿಗೆ ಮಾಸ್ಕ್ ಸಿಗದಂತೆ ಮಾಡ ಬೇಡಿ. ಒಚಿiಟಿಣಚಿiಟಿ ಠಿeಡಿsoಟಿಚಿಟ hಥಿgieಟಿe. (ಕೈಯನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯುವುದು, ನಿಮ್ಮ ಮುಖ-ಮೂತಿ ಮುಟ್ಟದಿರುವುದು) ಮುಖ್ಯವಾಗಿ ಸಮಯ ಸಮಯಕ್ಕೆ ಚಾನಲ್ ಚೇಂಜ್ ಮಾಡಿ ನೆಮ್ಮದಿ ಯಾಗಿರಿ. ಕೊರೊನಾಸೆ ನಹೀ ಡರೊನಾ !
?ಮೇಜರ್ (ಡಾ) ಕುಶ್ವಂತ್ ಕೋಳಿಬೈಲು
ಒಆ ಠಿಚಿeಜiಚಿಣಡಿiಛಿs