ವೀರಾಜಪೇಟೆ, ಮಾ.18: ಕೊರೊನಾ ವೈರಸ್‍ನ ಭೀತಿ ಹಿನೆÀ್ನಲೆಯಲ್ಲಿ ಪಟ್ಟಣ ಪಂಚಾಯಿತಿ ಹಾಗೂ ತಾಲೂಕು ಆಡಳಿತ ಇಂದು ಸಂತೆಯನ್ನು ರದ್ದು ಪಡಿಸಿ ಆದೇಶ ಹೊರಡಿಸಿದ್ದರಿಂದ ಸಂತೆಗೆ ಮಾಮೂಲಾಗಿ ಬರುತ್ತಿದ್ದ ವ್ಯಾಪಾರಿ ಗಳು ಹಾಗೂ ಇಲ್ಲಿನ ಗಡಿಯಾರಕಂಬದ ಬಳಿಯ ಸುತ್ತ ರಸ್ತೆ ಬದಿಯ ವ್ಯಾಪಾರಿಗಳು ಕಂಡುಬರ ಲಿಲ್ಲ. ಪಟ್ಟಣ ಪಂಚಾಯಿತಿ ಮಾರುಕಟ್ಟೆಯಲ್ಲಿ ದಿನ ನಿತ್ಯ ವ್ಯಾಪಾರ ಮಾಡುತ್ತಿದ್ದ ತರಕಾರಿ, ದಿನಸಿ, ಒಣಗಿದ ಮೀನು ವ್ಯಾಪಾರ ಎಂದಿನಂತೆ ನಡೆಯಿತು.

ಇಂದು ಬೆಳಿಗ್ಗೆ ಬದ್ರಿಯಾ ಜಂಕ್ಷನ್ ರಸ್ತೆ ಬದಿಯ ಫುಟ್‍ಪಾತ್ ನಲ್ಲಿ ಬೇತರಿ ಗ್ರಾಮದ ಕಾವೇರಿ ಹೊಳೆಯಿಂದ ಬೆಸ್ತರು ಮಾರಾಟಕ್ಕಾಗಿ ತಂದಿದ್ದ ಹೊಳೆ ಮೀನು ವ್ಯಾಪಾರಿ ಗಳನ್ನು ಪೊಲೀಸರು ತೆರವುಗೊಳಿಸಿ ದರು. ವೀರಾಜಪೇಟೆ ಸಂತೆಗೆ ಎಂದಿನಂತೆ ಬರುತ್ತಿದ್ದ ಕಾರ್ಮಿಕರು, ರೈತರು ಮಾರುಕಟ್ಟೆ ಯೊಳಗೆ ಖಾಯಂ ಆಗಿ ಅಂಗಡಿಗಳನ್ನಿಟ್ಟುಕೊಂಡಿದ್ದ ವ್ಯಾಪಾರಿಗಳಿಂದ ತರಕಾರಿ ದಿನಸಿ ಖರೀದಿಸುತ್ತಿರುವುದು ಕಂಡು ಬಂತು. ಬುಧವಾರ ದಿನವಾದುದರಿಂದ ಮಾರುಕಟ್ಟೆಯ ಸುತ್ತ ಮುತ್ತ ಜನ ಗುಂಪು ಸೇರುವುದನ್ನು ಪೊಲೀಸರು ನಿಗಾ ಇರಿಸಿ ನಿರ್ಬಂಧಿಸುತ್ತಿದ್ದರು. ಮಾರುಕಟ್ಟೆಯ ಹೊರಗೂ ಎಂದಿನ ವ್ಯಾಪಾರಸ್ತರು ತರಕಾರಿ, ಹಣ್ಣು ಹಂಪಲುಗಳನ್ನು ಮಾರಾಟ ಮಾಡುತ್ತಿದ್ದರು.

ವೀರಾಜಪೇಟೆ ಖಾಸಗಿ ಬಸ್ಸು ನಿಲ್ದಾಣ ಪ್ರಯಾಣಿಕರಿಲ್ಲದೆ ಬಸ್ಸುಗಳು ಖಾಲಿ ಖಾಲಿಯಾಗಿ ನಿಲ್ದಾಣ ದಲ್ಲಿಯೇ ನಿಂತಿದ್ದವು. ಅಂತರರಾಜ್ಯ ಕೇರಳದ ಕಡೆಗೆ ತೆರಳಬೇಕಾಗಿದ್ದ ಎರಡು ಖಾಸಗಿ ಬಸ್ಸುಗಳು ಪ್ರಯಾಣಿಕರಿಲ್ಲದೆ ಬೆಳಗಿನ 7-30ರಿಂದ ಖಾಸಗಿ ಬಸ್ಸು ನಿಲ್ದಾಣದಲ್ಲಿ ನಿಂತಿದ್ದು ಅಪರಾಹ್ನ 12-30ರ ವರೆಗೂ ಹಾಗೆಯೇ ನಿಂತಿತ್ತು. ಬಸ್ಸಿನ ನಿರ್ವಾಹಕ ವಿಜುವನ್ನು ವಿಚಾರಿಸಿ ದಾಗ ಕೊರೊನಾ ವೈರಸ್‍ನ ಭೀತಿಯಿಂದ ಯಾರೂ ಕೇರಳದಿಂದ ಕೊಡಗಿಗೆ ಬರುವುದಾಗಲಿ ಕೇರಳಕ್ಕೆ ಹೋಗುವುದಾಗಲಿ ಮಾಡುತ್ತಿಲ್ಲ ಎಂದರು. ಸಂತೆಯಲ್ಲಿ ಸಾಮಗ್ರಿಗಳನ್ನು ಖರೀದಿಸಲು ಗ್ರಾಹಕರು ವಿರಳವಾಗಿದ್ದರು. ಬುಧವಾರ ಸಂತೆ ರದ್ದು ಪಡಿಸಿರುವುದಾಗಿ ಪಟ್ಟಣ ಪಂಚಾಯಿತಿ ತಾ.17ರಂದು ಮಂಗಳವಾರ ಧ್ವನಿ ವರ್ಧಕದ ಮೂಲಕ ಪ್ರಚಾರ ಮಾಡಿತ್ತು. ಸಂತೆ ದಿನವಾದರೂ ಮುಖ್ಯ ರಸ್ತೆಯಲ್ಲಿ ಜನ ಸಂಚಾರವೂ ಕಡಿಮೆಯಾಗಿತ್ತು.

ವೈರಸ್ ಪ್ರಯುಕ್ತ ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತಗೊಳ್ಳುತ್ತಿರು ವುದರಿಂದ ಕೆಲವು ಮಾರ್ಗಗಳ ಬಸ್ಸು ಸಂಚಾರವನ್ನು ಬಸ್ಸುಗಳ ಮಾಲೀಕರೇ ಸ್ವಯಂ ಪ್ರೇರಿತವಾಗಿ ತಾತ್ಕಾಲಿಕವಾಗಿ ರದ್ದುಗೊಳಿಸಿದ್ದಾರೆ ಎಂದು ಖಾಸಗಿ ಬಸ್ಸು ನಿಲ್ದಾಣದ ಖಾಸಗಿ ಬಸ್ಸು ಪ್ರಮುಖರಾದ ಮಂಜುನಾಥ್ ತಿಳಿಸಿದರು.

ಸಾರಿಗೆ ಸಂಸ್ಥೆಯ ಬಸ್ಸು ನಿಲ್ದಾಣದಲ್ಲಿ ನಿರೀಕ್ಷಿತ ಪ್ರಯಾಣಿಕರಿ ಲ್ಲದೆ ಬಿಕೋ ಎನ್ನುತ್ತಿದ್ದು ಪ್ರತಿ ದಿನ ಸಂಚರಿಸುವ ಬಸ್ಸುಗಳಲ್ಲಿ ಶೇ. 30ಕ್ಕೂ ಕಡಿಮೆ ಪ್ರಯಾಣಿಕರು ಪ್ರಯಾಣಿಸುತಿ ್ತದ್ದಾರೆ ಎಂದು ಸಾರಿಗೆ ಸಂಸ್ಥೆಯ ನಿಯಂತ್ರಣಾಧಿಕಾರಿ ನಾಗೇಶ್ ತಿಳಿಸಿದರು. ವೀರಾಜಪೇಟೆಯಲ್ಲಿ ಸಂತೆ ರದ್ದುಗೊಂಡಿದ್ದರೂ ಸರಕಾರಿ ಕಚೇರಿಗಳು, ಸಮುಚ್ಚಯ ನ್ಯಾಯಾಲಯ, ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‍ಗಳು ವಿರಳ ಜನಸಂಖ್ಯೆ ಮಧೆÉ್ಯಯೂ ಕಾರ್ಯ ನಿರ್ವಹಿಸಿದವು.