ಶನಿವಾರಸಂತೆ, ಮಾ. 18: ಗೋಪಾಲಪುರ ಗ್ರಾಮದಿಂದ ತಾ. 18 ರಂದು ಬೆಳಿಗ್ಗೆ 7 ಮಂದಿ ಕೂಲಿ ಕಾರ್ಮಿಕರು ಹೊಸಗುತ್ತಿ ಗ್ರಾಮಕ್ಕೆ ಗಾರೆ ಕೆಲಸಕ್ಕೆಂದು ಓಮಿನಿ ವ್ಯಾನ್‍ನಲ್ಲಿ (ನಂ. ಕೆಎ 1 ಎಂಬಿ 7395) ಹೋಗುತ್ತಿದ್ದು, ಮಾಲಂಬಿ ಕೂಡು ರಸ್ತೆ ತಿರುವಿನಲ್ಲಿ ಎದುರು ಭಾಗದಿಂದ ಬಂದು ಮಿನಿ ಅಶೋಕ ಲೈಲಾಂಡ್ ಗೂಡ್ಸ್ ವಾಹನಕ್ಕೆ (ನಂ. ಕೆಎ 45 7740) ಡಿಕ್ಕಿ ಹೊಡೆದಿದೆ. ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಪಾಲಪುರ ಗ್ರಾಮದಿಂದ 7 ಮಂದಿ ಕೂಲಿ ಕಾರ್ಮಿಕರಾದ ಕಲೀಲ್, ಅಮೀರ್, ಖಾದರ್, ಸಂಜು, ವಸಂತ, ನಿಜಾಮ್ ಮತ್ತು ರಘು ಓಮಿನಿ ವ್ಯಾನ್‍ನಲ್ಲಿ ಹೊಸ ಗುತ್ತಿಗೆ ಗ್ರಾಮಕ್ಕೆ ಗಾರೆ ಕೆಲಸಕ್ಕೆಂದು ಹೋಗುತ್ತಿದ್ದರು. ಗೂಡ್ಸ್ ವಾಹನದ ಚಾಲಕ ಅಭಿಲಾಷ್ ಮಾಲಂಬಿ ವಾಹನವನ್ನು ಓಮಿನಿ ವ್ಯಾನಿಗೆ ಡಿಕ್ಕಿಪಡಿಸಲಾಗಿ, ವ್ಯಾನ್ ನಲ್ಲಿದ್ದ 7 ಮಂದಿಗೆ ಗಾಯ ಉಂಟಾಗಿದೆ. ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿರುತ್ತಾರೆ.
ಈ ಬಗ್ಗೆ ಶನಿವಾರಸಂತೆ ಪೊಲೀಸರಿಗೆ ದೊರೆತ ಪುಕಾರಿನ ಮೇರೆ ಪೊಲೀಸ್ ಠಾಣೆಯ ಹೆಡ್‍ಕಾನ್ಸ್‍ಟೇಬಲ್ ಬೋಪಣ್ಣ ಲೈಲಾಂಡ್ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡು ಕಾಲಂ 279, 337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತಾರೆ.